Select Your Language

Notifications

webdunia
webdunia
webdunia
webdunia

ಚಂದ್ರನ ಮೇಲೆ ಜೀವಜಲ ಶೋಧ: ನಾಸಾ ಧನ್ಯವಾದ

ಚಂದ್ರನ ಮೇಲೆ ಜೀವಜಲ ಶೋಧ: ನಾಸಾ ಧನ್ಯವಾದ
ವಾಷಿಂಗ್ಟನ್/ಬೆಂಗಳೂರು , ಶುಕ್ರವಾರ, 25 ಸೆಪ್ಟಂಬರ್ 2009 (09:27 IST)
ಭಾರತ ಉಡಾಯಿಸಿದ ಚಂದ್ರಯಾನ-1 ನೌಕೆ ಚಂದ್ರನ ಮೇಲ್ಮೈಯಲ್ಲಿ ನೀರಿನ ಸೆಲೆ ಪತ್ತೆಹಚ್ಚಿರುವುದಕ್ಕೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಇಸ್ರೊಗೆ ಧನ್ಯವಾದ ಅರ್ಪಿಸಿದ್ದು, ಬಾಹ್ಯಜಗತ್ತಿನಲ್ಲಿ ಜೀವಸೆಲೆಗಾಗಿ ಗಂಭೀರ ಶೋಧಕ್ಕೆ ಎಡೆಯಾಗಿದೆ.

ಈ ಶೋಧ ಮಾಡಿದ ಇಸ್ರೊ ಸಂಸ್ಥೆಗೆ ನಾವು ಧನ್ಯವಾದ ಅರ್ಪಿಸುತ್ತೇವೆ. ಇದುವರೆಗೆ ಚಂದ್ರನ ಮೇಲ್ಮೈ ಕಲ್ಲುಗಳಿಂದ ಕೂಡಿದ ಒಣಪ್ರದೇಶವೆಂದು ನಾವು ಭಾವಿಸಿದ್ದೆವು ಎಂದು ನಾಸಾ ನಿರ್ದೇಶಕ ಜಿಮ್ ಗ್ರೀನ್ ವಾಷಿಂಗ್ಟನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು, ಜಗತ್ತಿನಾದ್ಯಂತ ನೇರ ಪ್ರಸಾರವಾಗಿದೆ.

ಚಂದ್ರನ ಮೇಲ್ಮೈನಲ್ಲಿ ಜೀವಜಲದ ಶೋಧವು ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಪ್ರಮುಖ ದಾಪುಗಾಲೆಂದು ಹೇಳಲಾಗಿದೆ. ಚಂದ್ರನ ಮೇಲೆ ನೀರಿನಸೆಲೆಯು ನಾಸಾ ಮತ್ತು ಭಾರತೀಯ ಸಂಶೋಧನಾ ಸಂಸ್ಥೆಯ ನಡುವೆ ಶ್ರಮ, ಅಂತಾರಾಷ್ಟ್ರೀಯ ಸಹಕಾರ ಮತ್ತು ಕೌಶಲ್ಯದಿಂದ ಸಾಧ್ಯವಾಗಿದ್ದು, ಇಸ್ರೊಗೆ ಇದರ ಕ್ರೆಡಿಟ್ ಸಲ್ಲುತ್ತದೆಂದು ಗ್ರೀನ್ ಹೇಳಿದ್ದಾರೆ.

ಭಾರತದ ಬಾಹ್ಯಾಕಾಶ ನೌಕೆಯಲ್ಲಿ ಅಳವಡಿಸಿದ್ದ ಮ‌ೂನ್ ಮ್ಯಾಪರ್ ಚಂದ್ರನಲ್ಲಿ ನೀರಿನ ಸೆಲೆಯ ಅನಿರೀಕ್ಷಿತ ಶೋಧ ನಡೆಸಿದ್ದು, ಚಂದ್ರನ ನೆಲ ಒಣಪ್ರದೇಶವೆಂಬ ಸುದೀರ್ಘಾವಧಿಯ ಅಭಿಪ್ರಾಯ ಸುಳ್ಳಾಗಿಸಿದೆ.ನಾಸಾದ ಮ‌ೂನ್ ಮಿನರಾಲಜಿ ಮ್ಯಾಪರ್ ಉಪಕರಣ ಚಂದ್ರನ ಮೇಲ್ಮೈನಲ್ಲಿ ಪ್ರತಿಫಲಿಸುವ ಬೆಳಕನ್ನು ಅಳತೆ ಮಾಡಿದ್ದು, ಚಂದ್ರನಲ್ಲಿ ನೀರಿನ ಕಣಗಳ ಉಪಸ್ಥಿತಿಯನ್ನು ಸಾಬೀತುಮಾಡಿದೆ. ಚಂದ್ರಯಾನ ಕಳಿಸಿದ ಅಂಕಿಅಂಶವನ್ನು ಇನ್ನೂ ಪರಿಶೀಲಿಸಲಾಗುತ್ತಿದ್ದು, ಇನ್ನಷ್ಟು ಶೋಧಗಳು ಹಿಂಬಾಲಿಸಲಿವೆ.

ಚಂದ್ರನಲ್ಲಿ ಜೀವಜಲ ಪತ್ತೆಹಚ್ಚಲು ಇಸ್ರೊ ನಿರ್ಣಾಯಕ ಪಾತ್ರವಹಿಸಿದೆಯೆಂದು ಎ3 ಮುಖ್ಯ ಇನ್‌ವೆಸ್ಟಿಗೇಟರ್ ಕಾರ್ಲ್ ಪೀಟರ್ಸ್ ತಿಳಿಸಿದ್ದು, ಬಾಹ್ಯಾಕಾಶದ ಬಗ್ಗೆ ಮಾನವಪೀಳಿಗೆಯ ದಾಪುಗಾಲು ಎಂದು ಬಣ್ಣಿಸಿದ್ದಾರೆ.

ಇಸ್ರೊ ನೆರವಿಲ್ಲದೇ ಈ ಶೋಧ ಮಾಡಲು ತಮಗೆ ಸಾಧ್ಯವಾಗುತ್ತಿರಲಿಲ್ಲವೆಂದು ಈ ಪಾತ್ರದಲ್ಲಿ ಇಸ್ರೊಗೆ ಕ್ರೆಡಿಟ್ ನೀಡುತ್ತಾ ಹೇಳಿದ್ದಾರೆ.ಇಸ್ರೋ ವಿಜ್ಞಾನಿಗಳಾದ ಜೆ.ಎನ್. ಗೋಸ್ವಾಮಿ ಮತ್ತು ಮೈಲಾಸ್ವಾಮಿ ಅಣ್ಣಾದೊದೊರೈ, ಈ ಶೋಧದಿಂದ ಪುಳಕಿತರಾಗಿದ್ದು, ಇನ್ನೊಂದು ಸುತ್ತು ಚಂದ್ರಯಾನ ಯಾತ್ರೆಗೆ ಪ್ರೇರೇಪಿಸಿದೆ.

Share this Story:

Follow Webdunia kannada