Select Your Language

Notifications

webdunia
webdunia
webdunia
webdunia

ಎಟಿಎಂ ಅವಾಂತರ: ಆತನಿಗೆ ಬೇಕಾಗಿದ್ದು 140 ಡಾಲರ್, ಬಂದಿದ್ದು 37,000 ಡಾಲರ್

ಎಟಿಎಂ ಅವಾಂತರ: ಆತನಿಗೆ ಬೇಕಾಗಿದ್ದು 140 ಡಾಲರ್, ಬಂದಿದ್ದು 37,000 ಡಾಲರ್
ದಕ್ಷಿಣ ಪೋರ್ಟ್‌ಲ್ಯಾಂಡ್, ಮೈನೆ , ಶನಿವಾರ, 5 ಏಪ್ರಿಲ್ 2014 (16:38 IST)
140 ಡಾಲರ್ ಪಡೆಯಲು ಎಟಿಎಂ ಯಂತ್ರದಲ್ಲಿ ನಮೂದಿಸಿದ ವ್ಯಕ್ತಿಗೆ ಮನವಿಗೆ ಆಟೋಮೇಟೆಡ್ ಬ್ಯಾಂಕ್ ಯಂತ್ರ ಬರೊಬ್ಬರಿ 37,000 ಡಾಲರ್‌ ನಗದು ವಿತರಿಸಿದ ಘಟನೆ ದಕ್ಷಿಣ ಪೋರ್ಟ್‌ಲ್ಯಾಂಡ್‌ನಲ್ಲಿ ವರದಿಯಾಗಿದೆ.
PTI

ಮೈನೆ ಸಿಟಿ ಟಿಡಿ ಬ್ಯಾಂಕ್ ಬ್ರಾಂಚ್ ಎಟಿಎಂನ್ನು ಬಳಸಲು ಕಾಯುತ್ತಿದ್ದ ಮಹಿಳೆಯೊಬ್ಬಳು ಎಟಿಎಂ ಒಳಗೆ ಹೋದ ವ್ಯಕ್ತಿಯೋರ್ವ ತುಂಬ ಸಮಯಗಳಿಂದ ಅಲ್ಲೇ ಇದ್ದಾನೆ. ಹೊರಬರುತ್ತಿಲ್ಲ ಎಂದು ಪೋಲಿಸರಿಗೆ ದೂರವಾಣಿ ಕರೆ ಮಾಡಿ ತಿಳಿಸಿದಾಗ ಅಲ್ಲಿಗೆ ಬಂದ ಪೋಲಿಸರು, ಎಟಿಎಂನಿಂದ ಹೊರಬಂದ ಭಾರಿ ಮೊತ್ತದ ಹಣವನ್ನು ವ್ಯಕ್ತಿ ಶಾಪಿಂಗ್ ಬ್ಯಾಗಲ್ಲಿ ತುಂಬುತ್ತಿರುವುದನ್ನು ನೋಡಿದ್ದಾರೆ.

ಹಣವನ್ನು ಸಂಬಂಧಪಟ್ಟ ಬ್ಯಾಂಕಿಗೆ ಹಿಂತಿರುಗಿಸಲಾಯಿತು. ಪ್ರಕರಣವನ್ನು ದಾಖಲಿಸಲು ಬ್ಯಾಕ್ ಅಧಿಕಾರಿಗಳು ನಿರಾಕರಿಸಿದ್ದಾರೆ. ಪೋಲಿಸರು ತನಿಖೆಯನ್ನು ಮುಂದುವರೆಸಿದ್ದಾರೆ. ತನ್ನದಲ್ಲದ ಹಣವನ್ನು ಕಬಳಿಸ ಹೊರಟಿದ್ದ ವ್ಯಕ್ತಿಯ ಮೇಲೆ ಕೇಸ್ ದಾಖಲಿಸಲಾಗಿಲ್ಲ.

ಒಂದು "ಕೋಡ್ ದೋಷ" ದಿಂದಾಗಿ ಈ ಸಮಸ್ಯೆ ಸೃಷ್ಟಿಯಾಯಿತು. ಯಾವುದೇ ಗ್ರಾಹಕ ಖಾತೆಗಳು ಹಾನಿಗೊಳಗಾಗಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada