Webdunia - Bharat's app for daily news and videos

Install App

'ಉಗ್ರವಾದ ದಮನದ ಮೇಲೆ ಪಾಕ್ ಭವಿಷ್ಯ ನಿಂತಿದೆ'

Webdunia
ಮಂಗಳವಾರ, 16 ಡಿಸೆಂಬರ್ 2008 (11:27 IST)
PTI
ಪಾಕಿಸ್ತಾನಕ್ಕೆ ನಿಷ್ಠುರ ಸಂದೇಶವನ್ನು ರವಾನಿಸಿರುವ ಬ್ರಿಟಿಷ್ ಪ್ರಧಾನಿ ಜಾರ್ಡನ್ ಬ್ರೌನ್ ಪಾಕಿಸ್ತಾನಿ ನೆಲದಲ್ಲಿನ ಉಗ್ರವಾದಿಗಳ ವಿರುದ್ಧ ಪಾಕ್ ಕೈಗೊಳ್ಳುವ ಕ್ರಮಗಳ ಮೇಲೆ ಆ ರಾಷ್ಟ್ರದ ಭವಿಷ್ಯ ನಿಂತಿದೆ ಎಂದು ಹೇಳಿದ್ದಾರೆ ಮತ್ತು ಉಗ್ರರ ಸರಪಣಿಗಳನ್ನು ತುಂಡರಿಸಬೇಕಾಗಿ ಮತ್ತು 'ಕ್ಷಿಪ್ರ ಮತ್ತು ಫಲಿತಾಂಶ ತೋರಿಸುವಂತಹ' ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಸೋಮವಾರ ರಾತ್ರಿ ಭಾರತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಭೇಟಿಯಿಂದ ಮರಳಿದ ನಂತರ ಇಂಗ್ಲೆಂಡಿನ ಪ್ರಜಾ ಪ್ರತಿನಿಧಿ ಸಭೆಯಲ್ಲಿ ಮಾತನಾಡಿದ ಬುಷ್ ಭಾರತದ ಮೇಲೆ ದಾಳಿ ನಡೆಸಿದ ಪಾಕಿಸ್ತಾನ ಮೂಲದ ಉಗ್ರರು ಮತ್ತು ಅವರ ತರಬೇತಿ ಶಿಬಿರಗಳನ್ನು ಸಂಪೂರ್ಣವಾಗಿ ನಾಶಪಡಿಸಬೇಕು ಎಂದು ಹೇಳಿಕೆಯೊಂದರಲ್ಲಿ ಪಾಕಿಸ್ತಾನವನ್ನು ಒತ್ತಾಯಿಸಿದ್ದಾರೆ.

" ನಾವು (ಬ್ರಿಟನ್) ಪಾಕಿಸ್ತಾನದ ಪ್ರಜಾಪ್ರಭುತ್ವ ಸರಕಾರಕ್ಕೆ ನಮ್ಮ ಬೆಂಬಲವನ್ನು ನೀಡುತ್ತೇವೆ ಆದರೆ ಪಾಕ್ ಸರಕಾರ ತಮ್ಮ ನೆಲದಲ್ಲಿನ ಉಗ್ರರ ಜಾಲಗಳ ಬಗ್ಗೆ ಕ್ಷಿಪ್ರ ಮತ್ತು ದೃಢ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಬ್ರೌನ್ ಹೇಳಿದ್ದಾರೆ.

" ಪಾಕಿಸ್ತಾನದ ಭವಿಷ್ಯವು ಅದರದೇ ಗಡಿಯೊಳಗೆ ಪ್ರಜಾಸತ್ತಾತ್ಮಕ ಸರಕಾರಕ್ಕೆ ಭಂಗಪಡಿಸಲು ಪ್ರಯತ್ನಿಸುತ್ತಿರುವ ಮತ್ತು ನೆರೆ ರಾಷ್ಟ್ರಗಳೊಂದಿಗೆ ಪಾಕಿಸ್ತಾನದ ಸಂಬಂಧವನ್ನು ಕೆಡಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ಅವರು ಕೈಗೊಳ್ಳುವ ಕ್ರಮಗಳ ಮೇಲೆ ನಿಂತಿದೆ" ಎಂದು ಬ್ರೌನ್ ಎಚ್ಚರಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments