Select Your Language

Notifications

webdunia
webdunia
webdunia
webdunia

ಅಪ್ರಾಪ್ತರೊಂದಿಗೆ ಸೆಕ್ಸ್‌ಗಾಗಿ ವಿದೇಶಗಳಿಗೆ ತೆರಳುವ ಇಟಲಿ ಪ್ರವಾಸಿಗರು

ಅಪ್ರಾಪ್ತರೊಂದಿಗೆ ಸೆಕ್ಸ್‌ಗಾಗಿ ವಿದೇಶಗಳಿಗೆ ತೆರಳುವ ಇಟಲಿ ಪ್ರವಾಸಿಗರು
ರೋಮ್ , ಸೋಮವಾರ, 31 ಮಾರ್ಚ್ 2014 (16:33 IST)
ಇಟಲಿ ಮೂಲದ ಕನಿಷ್ಠ 80 ಸಾವಿರ ಪ್ರವಾಸಿಗರು ಮಕ್ಕಳೊಂದಿಗೆ ಸೆಕ್ಸ್ ನಡೆಸಲು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಪ್ರವಾಸ ಹಮ್ಮಿಕೊಳ್ಳುತ್ತಾರೆ ಎಂದು ನೂತನ ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.

ವಿಶ್ವದಾದ್ಯಂತ ಪ್ರತಿ ಎರಡು ನಿಮಿಷಕ್ಕೆ ಮಕ್ಕಳ ಮೇಲೆ ಅತ್ಯಾಚಾರವೆಸಗಲಾಗುತ್ತಿದೆ ಎಂದು ಅಧ್ಯಯನ ಸಂಸ್ಥೆ ಎಕ್‌ಪಾಟ್ ಇಟಾಲಿಯಾ ವರದಿ ಮಾಡಿದೆ.

ಮಕ್ಕಳ ವೇಶ್ಯಾವಟಿಕೆ, ಮಕ್ಕಳ ವೇಶ್ಯಾವಾಟಿಕೆ ಪ್ರವಾಸ, ಮಕ್ಕಳ ಬ್ಲ್ಯೂ ಫಿಲ್ಮ್, ಸೆಕ್ಸ್‌ಗಾಗಿ ಮಕ್ಕಳ ಅಪಹರಣ ಬಡತನ ಹೊಂದಿರುವ ರಾಷ್ಟ್ರಗಳಲ್ಲಿ ಸರ್ವೇಸಾಮಾನ್ಯವಾಗಿವೆ. ಇಟಲಿಯಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರ ಕೂಡಾ ಮಕ್ಕಳ ಅಪಹರಣಕಾರರ ತವರೂರಾಗಿದೆ ಎಂದು ವರದಿಯಲ್ಲಿ ಪ್ರಕಟಿಸಲಾಗಿದೆ.

ಎಕ್‌ಪಾಟ್ ಅಧ್ಯಯನ ಸಂಸ್ಥೆ 70 ದೇಶಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು, ದೇಶಗಳು, ಏಜೆನ್ಸಿಗಳು ಮತ್ತು ಸಂಸ್ಥೆಗಳಿಗೆ ಮಕ್ಕಳ ಶೋಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದೆ.

Share this Story:

Follow Webdunia kannada