Select Your Language

Notifications

webdunia
webdunia
webdunia
webdunia

ಅಣ್ವಸ್ತ್ರ ಪ್ರಯೋಗಿಸುವುದಿಲ್ಲ: ಜರ್ದಾರಿ ಹೇಳಿಕೆಗೆ ಪಾಕ್ ಅಸಮಾಧಾನ

ಅಣ್ವಸ್ತ್ರ ಪ್ರಯೋಗಿಸುವುದಿಲ್ಲ: ಜರ್ದಾರಿ ಹೇಳಿಕೆಗೆ ಪಾಕ್ ಅಸಮಾಧಾನ
ಇಸ್ಲಾಮಾಬಾದ್ , ಸೋಮವಾರ, 24 ನವೆಂಬರ್ 2008 (12:02 IST)
ಭಾರತದ ವಿರುದ್ಧ ನಾವೇ ಪ್ರಥಮವಾಗಿ ಅಣ್ವಸ್ತ್ರ ಪ್ರಯೋಗಿಸುವುದಿಲ್ಲ ಎಂದು ಹೇಳಿಕೆ ನೀಡಿದ ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರ ಮಾತು ಇದೀಗ ಪಾಕ್ ಜನತೆಯಲ್ಲಿ ಅಸಮಾಧಾನದ ಹೊಗೆ ಎಬ್ಬಿಸಿದೆ.

ಪಾಕ್ ಅಧ್ಯಕ್ಷರು ಸಾಮಾನ್ಯ ಜ್ಞಾನವಿಲ್ಲದ ಹೇಳಿಕೆಯೊಂದನ್ನು ನೀಡಿರುವುದಾಗಿ ಪಾಕಿಸ್ತಾನ ವಿಶ್ಲೇಷಕರು ಮತ್ತು ರಾಜಕಾರಣಿಗಳು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಿಂದುಸ್ತಾನ್ ಟೈಮ್ಸ್ ನಾಯಕತ್ವದ ಶೃಂಗಕ್ಕೆ ಇಸ್ಲಾಮಾಬಾದ್‌ನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಜರ್ದಾರಿಯವರು, ಇಸ್ಲಾಮಾಬಾದ್ ಯಾವುದೇ ಕಾರಣಕ್ಕೂ ಮೊದಲಾಗಿ ಅಣ್ವಸ್ತ್ರ ಪ್ರಯೋಗಿಸುವುದಿಲ್ಲ ಎಂದು ಹೇಳಿದ್ದರು.

ಈ ಲೋಕಜ್ಞಾನವಿಲ್ಲದ ಪಾಕ್ ಅಧ್ಯಕ್ಷರು ನೀಡುತ್ತಿರುವ ಹೇಳಿಕೆಯು ಭವಿಷ್ಯದಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸಲು ಕಾರಣವಾಗಲಿದೆ ಎಂದು ಪಾಕ್ ಪರಿಣತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಅಣ್ವಸ್ತ್ರ ಯೋಜನೆಯ ಬಗ್ಗೆ ಸಮರ್ಪಕವಾಗಿ ತಿಳಿದುಕೊಳ್ಳದೇ ಪಾಕ್ ಅಧ್ಯಕ್ಷರು ಇಂತಹ ಬೇಜಬ್ದಾರಿಯುತ ಹೇಳಿಕೆ ನೀಡುತ್ತಿರುವುದಾಗಿ ದೇಶದ ಭದ್ರತಾ ವ್ಯವಸ್ಥೆಯ ವಿಶ್ಲೇಷಣೆಕಾರ ನಿವೃತ್ತ ಜನರಲ್ ಕಮಾಲ್ ಮಾಟಿನುದ್ದೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada