Select Your Language

Notifications

webdunia
webdunia
webdunia
webdunia

ಮಡಿವಂತ ರಾಷ್ಟ್ರದಲ್ಲಿ ಸ್ವಾತಂತ್ರ್ಯದ ವಿಭಿನ್ನ ಮುಖ

ಮಡಿವಂತ ರಾಷ್ಟ್ರದಲ್ಲಿ ಸ್ವಾತಂತ್ರ್ಯದ ವಿಭಿನ್ನ ಮುಖ
'ಪ್ರೀತಿ'

ಪ್ರತಿ ವರ್ಷದ ಸ್ವಾತಂತ್ರ್ಯೋತ್ಸವಕ್ಕೂ ಈ ಸ್ವಾತಂತ್ರ್ಯೋತ್ಸವಕ್ಕೂ ವ್ಯತ್ಯಾಸವಿದೆ. ಏಕೆಂದರೆ ಈ ವರ್ಷ ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಮೂಲೆಗುಂಪಾಗಿದ್ದ, ತುಚ್ಛವಾಗಿ ಪರಿಗಣಿಸಲ್ಪಟ್ಟಿದ್ದ ಪಂಗಡವೊಂದಕ್ಕೆ ವಿಶೇಷ ಸ್ವಾತಂತ್ರ್ಯ ದೊರಕಿದೆ. ಹೌದು, ನಾನು ಮಾತನಾಡುತ್ತಿರುವುದು ಸಲಿಂಗಕಾಮಿಗಳ ಬಗ್ಗೆ. ಭಾರತದಲ್ಲಿನ ಸಲಿಂಗಿಗಳು ಇಷ್ಟು ಕಾಲ ತಮ್ಮ ಉತ್ತಮ, ಸಮಾನವಾದ ಗೌರವಯುತ ಬದುಕಿಗಾಗಿ ಮಾಡಿದ ಹೋರಾಟಕ್ಕೆ ಅಂತಿಮವಾಗಿ ನ್ಯಾಯ ದೊರಕಿದೆ. ಇದು ಒಂದರ್ಥದಲ್ಲಿ ಅವರಿಗೆ ಸಿಕ್ಕ ಸ್ವಾತಂತ್ರ್ಯವೆಂದರೂ ತಪ್ಪಲ್ಲ. ಸಮ್ಮತ ಸಲಿಂಗಕಾಮ ಅಪರಾಧವೇನಲ್ಲ ಎಂಬ ತೀರ್ಪು ಸಾವಿರಾರು ಸಲಿಂಗಕಾಮಿಗಳ ಮುಖದಲ್ಲಿ ಸಂತಸ ಮೂಡಿಸಿದ್ದು, ಸಲಿಂಗ ವಿವಾಹಕ್ಕೂ ಕಾನೂನು ಮಾನ್ಯತೆ ದೊರೆತಂತಾಗಿದೆ. ಸುಮಾರು ಶತಮಾನಗಳಿಂದ ಭಾರತ ದೇಶದಲ್ಲಿ ಸಮಾಜದಿಂದ ದೂರವಿಟ್ಟಿದ್ದನ್ನು ಇದೀಗ ಸ್ವೀಕರಿಸಬೇಕಾಗಿ ಬಂದಿದೆ. ಆದ್ದರಿಂದ ಈ ವರ್ಷಕ್ಕೆ ಭಾರತದಲ್ಲಿ "ಸ್ವಾತಂತ್ರ್ಯ" ಎಂಬ ಪದಕ್ಕೆ ಉದಾಹರಣೆ ಕೊಡಬೇಕೆಂದಿದ್ದರೆ ಇದನ್ನೇ ಸ್ವೀಕರಿಸಬಹುದು.
PTI


ಭಾರತದಂತಹ ರಾಷ್ಟ್ರದಲ್ಲಿ ಸಮಾಜ ಸಲಿಂಗಕಾಮವನ್ನು ಒಪ್ಪಿಕೊಳ್ಳುವುದು ಅಷ್ಟು ಸುಲಭವದ ವಿಷಯವಲ್ಲ. ಆದ್ದರಿಂದ ಇಲ್ಲಿಯವರೆಗೂ ಸಲಿಂಗಿಗಳು ಬಹಿಷ್ಕೃತರಾಗಿಯೇ ಜೀವನ ಸಾಗಿಸಿದ್ದರು. ವೈದ್ಯಕೀಯದ ಪ್ರಕಾರ ಸಲಿಂಗಿಗಳ ನಡವಳಿಕೆ ಸಾಮಾನ್ಯರಿಗಿಂತ ಭಿನ್ನವಾಗಿರುತ್ತದೆ ಎಂದೇನೂ ಇಲ್ಲದಿದ್ದರೂ ಲೈಂಗಿಕ ಭಾವನೆಯಲ್ಲಿ ಮಾತ್ರ ಅವರು ಉಳಿದವರಿಗಿಂತ ಭಿನ್ನವಾಗಿರುತ್ತಾರೆ. ಹಾಗೆಯೇ ಇದಕ್ಕೆ ಪೂರಕವಾಗಿ 1992 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸಲಿಂಗಕಾಮವನ್ನು ಮಾನಸಿಕ ಕಾಯಿಲೆ ಎಂಬ ಗುಂಪಿನಿಂದ ತೆಗೆದುಹಾಕಿತು. ಆದರೂ ಸಲಿಂಗಕಾಮಿಗಳಿಗೆ ಸ್ವಾತಂತ್ರ್ಯ ಕಲ್ಪಿಸಿಕೊಟ್ಟಿದ್ದು ಸ್ವೀಡನ್, ಬ್ರಿಟನ್, ನೆದರ್ಲ್ಯಾಂಡ್, ಅಮೇರಿಕದಂತಹ ಕೆಲವು ದೇಶಗಳು ಮಾತ್ರ. ಗಮನಿಸಬೇಕಾದ ಅಂಶವೆಂದರೆ ವಿಶ್ವಸಂಸ್ಥೆಯ ನೋಂದಾಯಿತ 192 ರಾಷ್ಟ್ರಗಳ ಗುಂಪಿನಲ್ಲಿ 87 ದೇಶಗಳಲ್ಲಿ ವಯಸ್ಕರ ನಡುವಿನ ಸಲಿಂಗಕಾಮವನ್ನು ಇಂದೂ ಸಹ ಕ್ರಿಮಿನಲ್ ಕೇಸೆಂದು ಪರಿಗಣಿಸಲಾಗುತ್ತದೆ.
webdunia
PTI


ಆದ್ದರಿಂದ ಈ ಮೇಲಿನ ವಿಷಯಗಳನ್ನೆಲ್ಲಾ ಗಮನಿಸಿದಾಗ ಸಮಾಜ ಮತ್ತು ಕಾನೂನಿನ ಹೆದರಿಕೆಗೆ ಅಂಜಿ ಸಲಿಂಗಕಾಮಿಗಳು ತಮ್ಮ ಸ್ಥಿತಿಯನ್ನು ಹೇಳಿಕೊಳ್ಳಲು ಹಿಂಜರಿಯಬೇಕಾದ ಪರಿಸ್ಥಿತಿ ಇಲ್ಲಿಯವರೆಗೆ ಇತ್ತು. ಈ ಜೊತೆಗೆ ಅವನ ಅಥವಾ ಅವಳ ಕುಟುಂಬದ ಸದಸ್ಯರ ವಾತ್ಯಲ್ಯದಿಂದಲೂ ಅವರು ವಂಚಿತರಾಗಿದ್ದರು. ಮೊದಲೇ ಭಾರತದಂತಹ ರಾಷ್ಟ್ರ ಜಾತಿ-ಧರ್ಮಗಳ ಸಂಕೀರ್ಣತೆಯಲ್ಲಿ ಒದ್ದಾಡುತ್ತಿದೆ. ಇಂತಹ ಸಂದರ್ಭದಲ್ಲಿ ಈ ಭಾರತದ ಜೀವನ ಶೈಲಿಗೆ ಈಗಿನ ಕೊಡುಗೆಯಾದ ಸಲಿಂಗಕಾಮವನ್ನು ಸಮಾಜ ಒಪ್ಪುವ ಸ್ಥಿತಿಯಲ್ಲಿಯೂ ಇರಲಿಲ್ಲ ಮತ್ತು ಈಗಲೂ ಸಂಪೂರ್ಣವಾಗಿ ಇಲ್ಲ. ಜೊತೆಗೆ ಇದೊಂದು ಅನೈಸರ್ಗಿಕ ಚಟುವಟಿಕೆಯಾಗಿದ್ದು ಇದರಿಂದ ನಮ್ಮ ಕೌಟುಂಬಿಕ ವ್ಯವಸ್ಥೆ ನಾಶವಾಗಲಿದೆ ಎಂಬ ಮಾತು ಬೇರೆ. ಇವೆಲ್ಲಾ ಕೂಗುಗಳ ನಡುವೆ ಸಲಿಂಗಿಗಳು ಸಮಾಜದಲ್ಲಿ ಮುಖ ಎತ್ತಿ ನಡೆದಾಡುವ ಮಾತೇ ಇರಲಿಲ್ಲ.

ಆದ್ದರಿಂದ ತಮ್ಮ ಉತ್ತಮ, ಗೌರವಯುತ ಬದುಕಿಗಾಗಿ ಇಲ್ಲಿಯವರೆಗೂ ಹೋರಾಟ ಮಾಡುತ್ತಿದ್ದ ಸಲಿಂಗಿಗಳಿಗೆ ಕೊನೆಗೂ ಜಯ ಸಿಕ್ಕಿದೆ. ಜಯಕ್ಕಿಂತ ಒಂದರ್ಥದಲ್ಲಿ ಸ್ವಾತಂತ್ರ್ಯ ದೊರಕಿದೆ. ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು ವಯಸ್ಕರು ನಡೆಸುವ ಸಲಿಂಗಕಾಮ ಅಪರಾಧವಲ್ಲ ಎನ್ನುವ ದೆಹಲಿ ಹೈಕೋರ್ಟ್ ತೀರ್ಪು ಸಲಿಂಗಿಗಳಲ್ಲಿ ಆಶಾಭಾವನೆಯ ಮೂಡಿಸಿರುವುದರ ಜೊತೆಗೆ ಸಮಾಜದಲ್ಲಿ ಅವರಿಗೂ ಇದೀಗ ಮಾನ್ಯತೆ ಸಿಕ್ಕಿದೆ. ಸಲಿಂಗಕಾಮಕ್ಕೆ ಮಾನ್ಯತೆ ನೀಡುವುದು ನೈತಿಕತೆ ಮತ್ತು ಧಾರ್ಮಿಕ ಆಚರಣೆಗಳ ಮೇಲಿನ ದಾಳಿ ಎನ್ನುವುದಲ್ಲದೇ ಇನ್ನೂ ಹಲವಾರು ಆರೋಪ ಪ್ರತ್ಯಾರೋಪಗಳು ನಡೆದೇ ಇದ್ದರೂ, ಶತಮಾನಗಳಿಂದ ಬಹಿಷ್ಕಾರಕ್ಕೊಳಗಾಗಿದ್ದ ಸಮಾಜದ ಒಂದು ಪಂಗಡಕ್ಕೆ ಮಾನ್ಯತೆ ಸಿಕ್ಕಿರುವುದು ಒಂದರ್ಥದಲ್ಲಿ ಈ ಬಾರಿ ಸ್ವಾತಂತ್ರ್ಯ ಎಂಬ ಪದಕ್ಕೆ ನಿಜವಾಗಿಯೂ ಅನ್ವರ್ಥಕವಾಗಿದೆ.

Share this Story:

Follow Webdunia kannada