Select Your Language

Notifications

webdunia
webdunia
webdunia
webdunia

ಶಿವನ ಸಾನಿಧ್ಯದಲ್ಲಿ ಶಿವರಾತ್ರಿಯ ಸಂಭ್ರಮ

ಶಿವನ ಸಾನಿಧ್ಯದಲ್ಲಿ ಶಿವರಾತ್ರಿಯ ಸಂಭ್ರಮ
ಮಹಾ ಶಿವರಾತ್ರಿ ಆಂಗವಾಗಿ ಹೊಸೂರು ರಸ್ತೆಯ ಕೂಡ್ಲು ಗ್ರಾಮದ ಬೃಹತ್ ಶಿವನ ದೇವಾಲಯದಲ್ಲಿ ಈಗ ಸಂಭ್ರಮದ ವಾತಾವರಣ. 26 ಅಡಿ ಎತ್ತರದ ಧ್ಯಾನಸ್ಥ ಶಿವನ ವಿಗ್ರಹದಿಂದ ಪ್ರಸಿದ್ದಿಯಾಗಿರುವ ಕೂಡ್ಲುವಿನ ಮಾರುತಿ ಬಡಾವಣೆಯ ವೀರಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶಿವರಾತ್ರಿ ಪ್ರಯುಕ್ತ ಅದ್ದೂರಿ ಕಾರ್ಯಕ್ರಮ ಜರುಗಲಿದೆ. ಲೋಕ ಕಲ್ಯಾಣಾರ್ಥಕ್ಕಾಗಿ ಶೃಂಗೇರಿ ಮಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಏಪ್ರಿಲ್ ತಿಂಗಳಲ್ಲಿ ಮಹಾನ್ ಯಜ್ಞವೊಂದು ನಡೆಯಲಿದ್ದು, ಸಿದ್ಧತೆಗಳು ಆರಂಭಗೊಂಡಿದೆ.

ಏಪ್ರಿಲ್ 1 ರಿಂದ ಏಪ್ರಿಲ್ 12ರವರೆಗೆ ಈ ಮಹಾಯಜ್ಞಗಳನ್ನು ನಡೆಸಲು ಸಂಕಲ್ಪಿಸಿದ್ದು, ವೇದ ಬ್ರಹ್ಮಶ್ರೀ ಶ್ರೀ ಸುಬ್ರಮಣ್ಯ ಉಡುಪ ಮತ್ತು ರಮೇಶ ಬಾಯರಿ ಇವರುಗಳ ಸಮ್ಮುಖದಲ್ಲಿ 500 ಜನ ಪುರೋಹಿತರನ್ನೊಳಗೊಂಡ ಯಾಗಭೂಮಿಯಲ್ಲಿ ಸಹಸ್ರನಾಕೇರ ಮಹಾಗಣಪತಿ ಯಾಗ, ಸಹಸ್ರ ಚಂಡಿಕಾ ಹೋಮ, ಅಷ್ಟಪವಿತ್ರ ನಾಗಮಂಡಲದ ಜೊತೆಗೆ ಅತಿರುದ್ರ ಮಹಾಯಾಗ ನಡೆಯಲಿದೆ. ಮಹಾ ಶಿವರಾತ್ರಿಯ ಆಚರಣೆಯ ಜೊತೆಗೆ ಏಪ್ರಿಲ್ ತಿಂಗಳಲ್ಲಿ ಯಾಗ ನಡೆಸಲು ಸಂಪೂರ್ಣ ತಯಾರಿ ಸಹ ಸಾಗುತ್ತಿದೆ.

ಶಿವನ ಮೇಲಿನ ಭಕ್ತಿಯನ್ನು ಉದ್ದೀಪಿಸುವ ಸೆಲೆ ಮತ್ತು ಒಂದು ರಮಣೀಯ ಪ್ರವಾಸಿ ನೆಲೆ ಎರಡೂ ಒಂದೇ ಸ್ಥಳದಲ್ಲಿ ಸಿಗುವಂತಾಗಬೇಕು ಎಂದು ಕನಸು ಕಂಡ ನಗರದ ಖ್ಯಾತ ಉದ್ಯಮಿ ಆರ್.ಪ್ರಭಾಕರ್ ರೆಡ್ಡಿ ಹಾಗೂ ಅವರ ಪತ್ನಿ ದೀಪಾರವರು 2 ವರ್ಷಗಳ ಹಿಂದೆ ಈ ಶಿವನ ಮೂರ್ತಿಯನ್ನು ಸ್ಥಾಪಿಸಿದ್ದರು. ನಗರದ ಆಸ್ತಿಕ ಜನರನ್ನು ಈ ಕ್ಷೇತ್ರದತ್ತ ಸೆಳೆದು ಧಾರ್ಮಿಕ ಹಾಗೂ ಪ್ರವಾಸಿ ತಾಣವನ್ನಾಗಿ ರೂಪಿಸುವ ಉದ್ದೇಶ ಈ ದಂಪತಿಗಳದ್ದಾಗಿದೆ. ಅಲ್ಲದೆ, ಪ್ರತಿವರ್ಷ ನಡೆಯುವ ಹೋಮ ಹವನ ಹಾಗೂ ಶಿವರಾತ್ರಿ ಆಚರಣೆಯ ಜವಾಬ್ದಾರಿಯನ್ನೂ ಅವರು ಹೊತ್ತುಕೊಂಡಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಎಡೆಬಿಡದೆ 11 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಮೂರನೇ ವರ್ಷದ ಮಹಾಯಾಗ ಇದಾಗಿದ್ದು, ಪ್ರತಿದಿನ ಅನ್ನಸಂತರ್ಪಣೆಯೂ ನಡೆಯಲಿದೆ. ಈ ಐತಿಹಾಸಿಕ ಯಾಗ ಅತಿದೊಡ್ಡ ಯಾಗವಾಗಿ ಹೊರಹೊಮ್ಮಲಿದ್ದು, ಭಕ್ತರ ಮನದಲ್ಲಿ ಋುಷಿ ಮುನಿಗಳ ಕಾಲವನ್ನು ನೆನಪಿಸಲಿದೆ. ಈ ಯಜ್ಞದಲ್ಲಿ ಹಲವಾರು ಮಠದ ಸ್ವಾಮೀಜಿಗಳು ಹಾಗೂ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

Share this Story:

Follow Webdunia kannada