Webdunia - Bharat's app for daily news and videos

Install App

ಹಿಮಾಲಯ ಪವಿತ್ರ ಕ್ಷೇತ್ರಗಳ ಸುಂದರ ತಾಣ

Webdunia
ಹಿಮಾಚಲ ಪ್ರದೇಶದ ಮನಾಲಿ-ಕೆಲಂಗ್‌ ರಾಜ ಮಾರ್ಗದಿಂದ 51ಕಿ.ಮೀ. ದೂರದಲ್ಲಿ 3,978 ಮೀಟರ್‌ ಎತ್ತರದ ರೋಹತಾಂಗ್‌ ಪ್ರದೇಶ ಇದೆ. ಇಲ್ಲಿ ಎಲ್ಲೆಲ್ಲೂ ಹಿಮಾಚ್ಛಾದಿತ ಪ್ರದೇಶಗಳೇ ತುಂಬಿವೆ. ಇಲ್ಲಿ ಹಸುರಿನ ದರ್ಶನವೇ ಇಲ್ಲ. ಇಲ್ಲಿ ಅಪರಾಹ್ನಗಳಲ್ಲಿ ಹಿಮದ ಬಿರುಗಾಳಿ ಬೀಸಿ ಜನರನ್ನು ಬಲಿ ತೆಗೆದುಕೊಳ್ಳುವುದೂ ಇದೆ.

ಸುಂದರ ನಿಸರ್ಗ ಸೌಂದರ್ಯ, ಪುರಾಣೋಕ್ತ ಪ್ರದೇಶಗಳ ವೀಕ್ಷಣೆಗಾಗಿ ಪ್ರವಾಸಿಗರು ಹಿಮಾಲಯದ ತಪ್ಪಲಿಗೆ ಬರುತ್ತಾರೆ. ವರ್ಷ ಪೂರ್ತಿ ಹಿಮವನ್ನೇ ಹೊದ್ದ ಬೆಳ್ಳನೆ ಬೆಟ್ಟಗಳು, ತಣ್ಣನೆಯ ಕಣಿವೆಗಳು. ಹಿಮಾಚಲದ ಮನಾಲಿ ಇಂತಹ ವಿವಿಧ ಪ್ರದೇಶಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ.

ರೋಹತಾಂಗ್‌ನ ತಪ್ಪಲು ಪ್ರದೇಶ ರೋಹತಾಂಗ್‌ ಟಾಪ್‌. ಮನಾಲಿ- ಲೇಹ್‌ ಮಾರ್ಗದಲ್ಲಿ ಸಮುದ್ರ ಮಟ್ಟದಿಂದ 13,050 ಅಡಿ ಎತ್ತರದಲ್ಲಿ ರೋಹತಾಂಗ್ ಟಾಪ್‌ ಇದೆ. ಹಿಮಾಚಲದ ಕುಲು ಘಟ್ಟ ಪ್ರದೇಶದ ಪ್ರಖ್ಯಾತ ಪ್ರವಾಸಿ ಜಾಗ ಇದು. ಮನಾಲಿಯಿಂದ ಇದು 51 ಕಿ.ಮೀ. ದೂರದಲ್ಲಿದೆ.

ರೋಹತಾಂಗ್‌ ಟಾಪ್‌ನಲ್ಲಿ ವಿಪರೀತ ಹಿಮಗಾಳಿ . ಇದರಿಂದ ರಕ್ಷಣೆ ಪಡೆಯಲು ಹೊಸ ಪ್ರವಾಸಿಗರು ಪಲ್‌ಚಾನ್‌ ಎಂಬ ಚಿಕ್ಕ ಊರಲ್ಲಿ ಬಾಡಿಗೆಗೆ ಲಭಿಸುವ ಕೋಟುಗಳನ್ನು ಖರೀದಿಸಿ ಬೆಟ್ಟ ಏರಲಾಗುತ್ತದೆ. ಮರಳುವಾಗ ವಾಪಸ್‌ ನೀಡಬೇಕು. ರೋಹತಾಂಗ್‌ ಟಾಪ್‌ನ ಬಳಿಕದ ಪ್ರದೇಶವೇ ಸೋಲಾಂಗ್‌ ಕಣಿವೆ.

ಸೋಲಾಂಗ್‌ ಕಣಿವೆ ಪ್ರದೇಶದಲ್ಲೇ ಅರ್ಜುನ ಗುಹೆ ಇದೆ. ಕಣ್ವ ಋಷಿ ಮತ್ತು ಶಾಂಡಿಲ್ಯ ಋಷಿಯ ತಪೋಭೂಮಿಯೂ ಇದೆ. ಮನಾಲಿ-ಲೇಹ್‌ ಮಾರ್ಗದಲ್ಲಿ ಮುನಿ ವಸಿಷ್ಠರ ಆಶ್ರಮವಿದೆ. ಇಲ್ಲಿ ಗಂಧಕಯುಕ್ತ ಬಿಸಿ ನೀರಿನ ಬುಗ್ಗೆ ಇದೆ.

ಅರ್ಜುನ ಪಾಶುಪತಾಸ್ತ್ರ ಪಡೆಯಲು ಇಂದ್ರನ ಕುರಿತ ತಪಸ್ಸು ಮಾಡಿದ 'ಇಂದ್ರಕಿಲ' ಕೂಡ ಇಲ್ಲೇ ಇದೆ. ವಸಿಷ್ಠ ಮತ್ತು ವ್ಯಾಸ ಋಷಿಗಳು ತಪಸ್ಸು ಮಾಡಿದ ಕ್ಷೇತ್ರ ವ್ಯಾಸ ಕುಂಡ ಇಲ್ಲಿದೆ. ಇಲ್ಲಿ ಎಲ್ಲೆಂದರಲ್ಲಿ ಪೈನ್‌ ವೃಕ್ಷಗಳು ಬೆಳೆದು ನಿಂತಿವೆ.ಪವಿತ್ರ ಸ್ಥಳಗಳನ್ನು ತನ್ನ ಮಡಿಲಲ್ಲಿ ಹೊದ್ದುಕೊಂಡು ತಣ್ಣಗೆ ಕಾಣುವ ಹಿಮಾಲಯ ಅನೇಕ ಪುಣ್ಯಕ್ಷೇತ್ರಗಳ ಸಂಗಮ.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

Show comments