Webdunia - Bharat's app for daily news and videos

Install App

ಶಬರಿಮಲೆ ಪುಣ್ಯ ಕ್ಷೇತ್ರದ ತೀರ್ಥಯಾತ್ರೆ

Webdunia
PR
ಅಯ್ಯಪ್ಪ ಭಕ್ತರ ಶಬರಿಮಲೆ ತೀರ್ಥಯಾತ್ರೆಯು ಈಗಾಗಲೇ ಆರಂಭವಾಗಿದೆ. ಕೇರಳದಲ್ಲಿ ನೆಲೆಸಿರುವ ಈ ಪ್ರಸಿದ್ಧ ತೀರ್ಥಕ್ಷೇತ್ರಕ್ಕೆ ಭಕ್ತರು ಹಮ್ಮಿಕೊಳ್ಳುವ ಈ ಯಾತ್ರೆಯು ವರ್ಷದ ಸುಮಾರು ಎರಡು ತಿಂಗಳ ಕಾಲ ನಡೆಯುತ್ತದೆ. ಈ ವೇಳೆ ಹೆಚ್ಚೂಕಮ್ಮಿ ಐದು ಲಕ್ಷ ಭಕ್ತರು ಈ ಪುಣ್ಯ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಯಾತ್ರೆಯ ಕಾಲದಲ್ಲಿ ಭಗವಾನ್ ಅಯ್ಯಪ್ಪ ಎಲ್ಲಾ ರಾಜ್ಯಗಳಿಂದಲೂ ಭಕ್ತರನ್ನು ತನ್ನೆಡೆ ಸೆಳೆಯುತ್ತಾನೆ.

ದೇವಸ್ಥಾನವು ಸಮುದ್ರಮಟ್ಟದಿಂದ 914ಮೀಟರ್ ಎತ್ತರದಲ್ಲಿ ಬೆಟ್ಟದ ಮೇಲಿದ್ದು, ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪಂಬಾ ನಗರದಿಂದ ನಾಲ್ಕು ಕಿ.ಮೀ ದೂರದಲ್ಲಿದೆ. ಅಯ್ಯಪ್ಪ ದರ್ಶನಕ್ಕೆ ತೆರಳುವ ಭಕ್ತರು ಕಾಲ್ನಡಿಗೆಯಲ್ಲೇ ತೆರಳಬೇಕು. ಬಹಳಷ್ಟು ಪುಣ್ಯ ಸ್ಥಳಗಳನ್ನು ದಾಟಿ ಅರಣ್ಯದ ಮೂಲಕ ಕಾಲ್ನಡಿಗೆ ಮೂಲಕ ಈ ಯಾತ್ರೆಯು ಭಕ್ತರಿಗೆ ಆತ್ಮಶುದ್ಧಿಗಿರುವ ದಾರಿಯಾಗಿದೆ. 41 ದಿವಸದ ವೃತವನ್ನಾಚರಿಸಿ ಬರುವ ಭಕ್ತರ ಸಂಖ್ಯೆ ಈಗ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಮಕರ ತಿಂಗಳ ಮೊದಲ ವಾರ ಅಂದರೆ ಜನವರಿ 14ರಂದು ತೀರ್ಥಾಟಕರು ಪರಮ ಪವಿತ್ರವಾದ ಹದಿನೆಂಟು ಮೆಟ್ಟಿಲುಗಳನ್ನು ಏರಿ ಮಕರಂ ಜೋತಿಯನ್ನು ವೀಕ್ಷಿಸಿ ದೇವರ ಪ್ರೀತಿಗೆ ಪಾತ್ರವಾಗಿ ಪಾವನರಾಗುತ್ತಾರೆ.

ರಾಜ್ಯದಲ್ಲಿ ಯಾತ್ರಿಕರ ಅನುಕೂಲಕ್ಕಾಗಿ ಹಲವು ಸಿದ್ಧತೆಗಳನ್ನು ಮಾಡಲಾಗಿದೆ. ಕಾಲ್ನಡಿಗೆಯಲ್ಲಿ ತೆರಳುವ ಭಕ್ತರಿಗೆ ಉಸಿರಾಟದ ಸಮಸ್ಯೆ ಬರಬಾರದೆಂದು ತಿರುವಾಂಕೂರ್ ದೇವಸ್ವಂ ಮಂಡಲಿ(ಟಿಡಿಬಿ)ಯು ಆಮ್ಲಜನಕ ಪಾರ್ಲರನ್ನು ದಾರಿಮಧ್ಯದಲ್ಲಿ ಸ್ಥಾಪಿಸಿದ್ದಾರೆ. ಭಕ್ತರಿಗೆ ಸುಲಭವಾಗಿ ಪ್ರಸಾದವು ದೊರಕಲು ಟಿಡಿಬಿಯು ಧನಲಕ್ಷ್ಮೀ ಬ್ಯಾಂಕ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ರಾಜ್ಯದ 182 ಬ್ಯಾಂಕ್ ಶಾಖೆಗಳಲ್ಲಿ ಯಾತ್ರಿಕರಿಗೆ ಪ್ರಸಾದ ಕೂಪನನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ, ಈ ಕೂಪನನ್ನು ಪಡೆದು ದೇವಾಲಯದಲ್ಲಿ ನೀಡಿ ಪ್ರಸಾದವನ್ನು ಸ್ವೀಕರಿಸಬಹುದಾಗಿದೆ.

PTI
ರಾಜ್ಯದ ಅರಣ್ಯ ಇಲಾಖೆಯು ಯಾತ್ರಿಕರಿಗೆ ನೆರವಾಗುವ ನಿಟ್ಟಿನಲ್ಲಿ 12 ರೂಪಾಯಿಗೆ ಒಂದು ಲೀಟರ್ ನೀರಿನ ವ್ಯವಸ್ಥೆಯನ್ನು ಕೂಡ ಮಾಡಿದೆ. ಪರಿಸರವನ್ನು ಸ್ವಚ್ಛವಾಗಿರಿಸುವ ಸಲುವಾಗಿ ಪ್ಲಾಸ್ಟಿಕ್ ಖಾಲಿ ಬಾಟಲಿಯನ್ನು ಹಿಂತಿರುಗಿಸಿದರೆ ಅದಕ್ಕೆ ಒಂದು ರೂಪಾಯಿ ಮರಳಿಸಲು ನಿರ್ಧರಿಸಿರುವುದಾಗಿ ಎಂದು ಅರಣ್ಯ ಇಲಾಖೆ ಸಚಿವ ಬಿನೋಯಿ ವಿಶ್ವಂ ತಿಳಿಸಿದ್ದಾರೆ.

ರೈಲ್ವೆ ಇಲಾಖೆಯು ಹೆಚ್ಚುವರಿ ಬೋಗಿಗಳಿರುವ ರೈಲುಗಳ ವ್ಯವಸ್ಥೆಗಳನ್ನು ಮಾಡಿದೆ ಮತ್ತು ರಾಜ್ಯದ ಸಾರಿಗೆ ಸಂಸ್ಥೆಯು ಯಾತ್ರಿಕರಿಗಾಗಿ ಶಬರಿಮಲೆಗೆ ಹೆಚ್ಚುವರಿ ಬಸ್ಸುಗಳನ್ನು ಓಡಿಸುವ ಕ್ರಮವನ್ನು ಕೈಗೊಂಡಿದೆ. ತೀರ್ಥಾಟನೆಯ ಸಮಯದಲ್ಲಿ ಭಕ್ತರಿಗೆ ಅನುಕೂಲಕ್ಕಾಗಿ 3,000 ಪೊಲೀಸ್ ಮತ್ತು ಆರೋಗ್ಯ ಸಿಬ್ಬಂದಿಗಳು ಸೇರಿದಂತೆ ಸುಮಾರು 5,000 ಸರಕಾರಿ ಸಿಬ್ಬಂದಿಗಳನ್ನು ನೇಮಿಸಲಾಗಿದೆ.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

Show comments