Webdunia - Bharat's app for daily news and videos

Install App

ಭಕ್ತರ ಇಷ್ಟಾರ್ಥ ಸಿದ್ಧಿದಾಯಕ ಶ್ರೀ ಕ್ಷೇತ್ರ ತಿರುಪತಿ

Webdunia
ಶನಿವಾರ, 27 ಏಪ್ರಿಲ್ 2013 (14:53 IST)
PR
ಆಂದ್ರಪ್ರದೇಶದ ತಿರುಪತಿ ದೇಶದಲ್ಲೇ ಅತೀ ಶ್ರೀಮಂತ ಶ್ರೀಕ್ಷೇತ್ರಎಂದು ಪರಿಗಣಿಸಲಾಗಿದೆ. ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನ ಜಾಗತಿಕವಾಗಿ ಖ್ಯಾತಿಗಳಿಸಿದ್ದು, ಭಕ್ತಾಭಿಮಾನಿಗಳನ್ನು ಹೊಂದಿದೆ.

ಸುಪ್ರಸಿದ್ದ. 9 ನೇ ಶತಮಾನದಲ್ಲಿ ಕಾಂಚೀಪುರಂನ ಪಲ್ಲವರು,10 ನೇ ಶತಮಾನದಲ್ಲಿ ತಂಜಾವೂರಿನ ಚೋಳರು, ಮಧುರೈನ ಪಾಂಡವರು, 14ರಿಂದ 15 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅರಸರು ಭಗವಾನ್ ವೆಂಕಟೇಶ್ವನ ಭಕ್ತರಾಗಿದ್ದರೆಂದು ಐತಿಹಾಸಿಕ ಶಿಲ್ಪಗಳು, ಇತಿಹಾಸದ ಮೈಲುಗಲ್ಲುಗಳು ಹೇಳುತ್ತವೆ.

ವಿಜಯನಗರದ ಅರಸರ ಕಾಲದಲ್ಲಿ ರಾಜಾ ಶ್ರೀಕೃಷ್ಣದೇವರಾಯ ದೇವಾಲಯದ ಅಭುದ್ಯಯಕ್ಕಾಗಿ ಶ್ರಮಿಸಿದನೆಂದು ಇತಿಹಾಸ ಹೇಳುತ್ತದೆ. ಈಗಲೂ ದೇವಾಲಯದ ಮುಖ್ಯ ಮಂದಿರದಲ್ಲಿ ವೆಂಕಟಪತಿರಾಯ ಅವರ ಮೂರ್ತಿಯನ್ನು ಕಾಣಬಹುದಾಗಿದೆ. ವಿಜಯನಗರದ ಸಾಮ್ರಾಜ್ಯದ ಅವನತಿಯ ನಂತರವೂ ದೇಶದ ಎಲ್ಲೆಡೆ ಇರುವ ಭಕ್ತರು ಕೊಡುಗೆಗಳನ್ನು ನೀಡುವುದರ ಮೂಲಕ ದೇವಸ್ಥಾನವನ್ನು ಶ್ರೀಮಂತಗೊಳಿಸುತ್ತಲೇ ಪ್ರಖ್ಯಾತಗೊಳಿಸಿದರು.

ಮರಾಠಾ ಜನರಲ್ ಎಂದೇ ಖ್ಯಾತಿವೆತ್ತ ರಾಘೋಜಿ ಭೋಂಸ್ಲೇ ದೇವಸ್ಥಾನಕ್ಕೆ ಅತ್ಯಮೂಲ್ಯವಾದ ಆಭರಣ, ವಜ್ರಾಭರಣಗಳನ್ನು ನೀಡಿದ್ದು ಅವುಗಳನ್ನು ಇಂದಿನವರೆಗೆ ಭದ್ರವಾಗಿ ಇಡಲಾಗಿದೆ. ನಂತರ ಆಳಿದ ಮೈಸೂರು ಮಹಾರಾಜರು, ಗದ್ವಾಲ್‌ನ ರಾಜರು ದೇವಾಲಯಕ್ಕೆ ಸಂಪತ್ತಿನ ಹೊಳೆಯನ್ನೇ ಹರಿಸಿದರು.

ಹಿಂದು ಸಾಮ್ರಾಜ್ಯಗಳು ಅಳಿದ ನಂತರ, ಕರ್ನಾಟಕದಲ್ಲಿನ ಮುಸ್ಲಿಂ ರಾಜರು, ನಂತರದ ಬ್ರಿಟೀಷರು ಮಂದಿರವನ್ನು ತಮ್ಮ ಆಧೀನಕ್ಕೆ ತೆಗೆದುಕೊಂಡಿದ್ದಲ್ಲದೆ ಈ ದೇವಸ್ಥಾನದ ಅಡಿಯಲ್ಲಿ ಉಳಿದ ದೇವಾಲಯಗಳನ್ನು ಆಧೀನಕ್ಕೊಳಪಡಿಸಲಾಯಿತು. 1843ರಲ್ಲಿ ಈಸ್ಟ್ ಇಂಡಿಯಾ ಕಂಪನಿ ದೇವಸ್ಥಾನವನ್ನು ತಿರುಮಲೆಯ ಮಹಾಂತರಿಗೆ ಒಂದು ಶತಮಾನಗಳ ಕಾಲ ನೀಡಿತು. 1933ರಲ್ಲಿ ಮದರಾಸ್ ಸರಕಾರ ದೇವಸ್ಥಾನವನ್ನು ಟ್ರಸ್ಟನ್ನಾಗಿ ಪರಿವರ್ತಿಸಿ(ಟಿಟಿಡಿ) ಆದೇಶ ಹೊರಡಿಸಿತು.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

Show comments