Daily Horoscope
✕

ಎಂಜಲಿನಾ ಜೋಲಿ ಕ್ಲಿಯೋಪಾತ್ರ ಪಾತ್ರದಲ್ಲಿ.. ಇದು ಅವರ ಕೊನೆ ಚಿತ್ರ?

Webdunia
ಗುರುವಾರ, 5 ಜೂನ್ 2014 (09:47 IST)
ಎಂಜಲಿನ ಜೋಲಿ ಹಾಲಿವುಡ್ ನ ಅಪರೂಪದ ನಟಿ. ತನ್ನ ರೂಪ ಮತ್ತು ಸಮಾಜ ಸೇವೆಯಿಂದ ಹೆಚ್ಚು ಗಮನ ಸೆಳೆದಿದ್ದಾರೆ ವಿಶ್ವದಲ್ಲಿ. ಅದೇರೀತಿ ಆಕೆ ತನ್ನ ಕಾಯಿಲೆಯ ಮುಖಾಂತರವೂ ಸಹ ಎಲ್ಲರು ಆಕೆಯ ನಿರ್ಧಾರ ಮೆಚ್ಚುವಂತೆ ಮಾಡಿ ಆ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಪ್ರಸ್ತುತ ಎಂಜಲಿನ ಜೋಲಿ ನಟನೆಗೆ ವಿದಾಯ ಹೇಳುವತ್ತ ತಮ್ಮ ಗಮನ ನೆಟ್ಟಿದ್ದಾರೆ. ಅವರ ನಟನೆಯ ಚಿತ್ರಗಳು ಇನ್ನು ಕೆಲವೇ ಕೆಲವು ಮಾತ್ರ ಅಭಿಮಾನಿಗಳು ನೋಡಲು ದೊರಕುತ್ತದೆ.
 
ಪ್ರಸ್ತುತ ಎಂಜಲಿನ ಜೋಲಿ ವಿಶ್ವದ ಅಪರೂಪದ  ಸುಂದರಿ ಕ್ಲಿಯೋಪಾತ್ರ   ಅವರ  ಪಾತ್ರ 
ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಈಜಿಪ್ಟ್ ದೇಶದ ಈ ಸುಂದರ ಚಕ್ರವರ್ತಿನಿ ಕಥೆಯ ಬಗ್ಗೆ ಮತ್ತು ರೂಪದ ಬಗ್ಗೆ ವಿಶ್ವದ ಎಲ್ಲರಿಗೂ ಸಿಕ್ಕಾಪಟ್ಟೆ ಆಸಕ್ತಿ ಇದೆ. ಪ್ರಾಯಶಃ ಇದು ಎಂಜಲಿನ ಅವರ ಕಟ್ಟಕಡೆಯ ಚಿತ್ರವಾಗಲಿದೆ. ಚಿತ್ರಕ್ಕೆ ಎರಿಕ್ ರೂಥ್ ಸಂಭಾಷಣೆ ಬರೆಯುತ್ತಿದ್ದಾರೆ ಎಂದು ಕಾಂಟಾಕ್ಟ್ ಮ್ಯುಸಿಕ್   ಡಾಟ್ ಕಾಂ ಎನ್ನುವ ವೆಬ್ ಸೈಟ್ ವರದಿ ಮಾಡಿದೆ. ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಅನೇಕ ಬಗೆಯ ಐಡಿಯಾಗಳು , ಸಾಕಷ್ಟು ನಿರ್ದೇಶಕರ ಜೊತೆ ಚರ್ಚೆ ಮಾಡಲಾಯಿತಂತೆ. ಅಂತಿಮವಾಗಿ ಈ ಚಿತ್ರಕ್ಕೆ ಸಂಭಾಷಣೆ ಬರೆಯುವ  ಹೊಣೆಗಾರಿಕೆ ಎರಿಕ್ ರೂಥ್ ಅವರದ್ದಾಗಿದೆ. 
 
ಆತ ಈಕೆಯ ಉತ್ತಮ ಗೆಳೆಯ ಮತ್ತು ಹಾಲಿವುಡ್ ಅತ್ಯುತ್ತಮ ಸಂಭಾಷಣೆಕಾರ ಆಗಿದ್ದಾರೆ. ಇದಕ್ಕೆ ಮುನ್ನ 1963  ರಲ್ಲಿ ಎಲಿಜೆಬೆತ್ ಟೈಲರ್  ಈ ಪಾತ್ರದಲ್ಲಿ ನಟಿಸಿದ್ದರು. ಅದಾದ ಬಳಿಕ ಇಂತಹ  ಅದ್ಭುತ ಪ್ರಾಜೆಕ್ಟ್  ಜೋಲಿ ಕೈಗೆತ್ತಿ ಕೊಂಡಿದ್ದಾರೆ. ತನ್ನ ನಟನಾ ಬದುಕಿಗೆ ವಿದಾಯ ಹೇಳುವ ಮುನ್ನ ಅತ್ಯುತ್ತಮ ಅಭಿನಯ ನೀಡುವ ಆಶಯ. ಅದಕ್ಕಾಗಿ ಈ ಪ್ರಯತ್ನ ಎಂದಿದ್ದಾರೆ ಜೋಲಿ. ನಟನೆ ಬಿಟ್ಟ ನಂತರ ಅವರು ನಿರ್ದೇಶನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ನೀವು ಮದುವೆಯಾಗಿಲ್ಲಾಂದ್ರೆ ನಿಮ್ಮನ್ನೇ ಮದುವೆಯಾಗ್ತಿದ್ದೆ ಎಂದು ಸಂಗೀತಾ ಗಂಡನಿಗೆ ಹೇಳಿದ್ದರಂತೆ ಕಾವ್ಯಾ

ಚಿಲ್ಲರೆ ಬದಲಿಗೆ ಚಾಕಲೇಟ್ ನೀಡಿದಾಗ ನಾನಾ ಪಾಟೇಕರ್ ಏನು ಮಾಡಿದ್ರು: ಈ ಐಕಾನಿಕ್ ದೃಶ್ಯ ಈಗಲೂ ವೈರಲ್ Video

ನಟ ನಾನಾ ಪಾಟೇಕರ್ ಇನ್ನಿಲ್ಲ: ಹೃದಯಾಘಾತಕ್ಕೆ ಬಲಿಯಾಯ್ತು ಚಿತ್ರರಂಗದ ಮತ್ತೊಂದು ಪ್ರತಿಭೆ

ಚಿತ್ರದುರ್ಗದಲ್ಲಿ ಶಿವಣ್ಣನ ಎದುರೇ ಬ್ಲಾಸ್ಟ್ ಆದ ಪಟಾಕಿ: ಬೇಲ್ ಪ್ರಚಾರದ ವೇಳೆ ಕೂದಲೆಳೆ ಅಂತರದಲ್ಲಿ ಪಾರಾದ ನಟ

BBK13: ಕಿಚ್ಚನ ಬುದ್ಧಿ ಮಾತಿಗೂ ಬೆಲೆ ಇಲ್ಲ.. ವೀಕೆಂಡ್ ನಲ್ಲಿ ತಪ್ಪಾಯ್ತು ಎನ್ನೋದು, ಗೇಮ್ ನಲ್ಲಿ ಮತ್ತದೇ ತಪ್ಪು ಮಾಡೋದು

Show comments