Webdunia - Bharat's app for daily news and videos

Install App

ಮೊದಲು ಭಾರತದಲ್ಲೇ ದೀಪಿಕಾ ಪಡುಕೋಣೆ xXx ಸಿನಿಮಾ

Webdunia
ಶುಕ್ರವಾರ, 30 ಡಿಸೆಂಬರ್ 2016 (13:26 IST)
ಸ್ಯಾಂಡಲ್‍ವುಡ್‌ನಿಂದ ಬಾಲಿವುಡ್‌ಗೆ ಹೋಗಿ ಅಲ್ಲಿಂದ ಹಾಲಿವುಡ್‍ಗೆ ನೆಗೆದಿರುವ ಬೆಡಗಿ ದೀಪಿಕಾ ಪಡುಕೋಣೆ. ಅವರ ಚೊಚ್ಚಲ ಹಾಲಿವುಡ್ ಚಿತ್ರ xXx ಮೊದಲು ಭಾರತದಲ್ಲಿ ಬಿಡುಗಡೆಯಾಗಿ ಆ ಬಳಿಕ ಜಗತ್ತಿನ ಉಳಿದ ಕಡೆ ತೆರೆಕಾಣಲಿದೆಯಂತೆ. 
 
ಇದೇ ಜನವರಿ 14ಕ್ಕೆ ಚಿತ್ರಮಂದಿರಗಳಲ್ಲಿ ದೀಪಿಕಾ ಅಭಿನಯದ ಹಾಲಿವುಡ್ ಚಿತ್ರ xXx ರಿಟರ್ನ್ ಆಫ್ ಕ್ಸಾಂಡಲ್ ಕೇಜ್ ರಿಲೀಸ್ ಆಗುತ್ತಿದೆ. ಈ ಬಗ್ಗೆ ಟ್ವೀಟಿಸಿ ದೀಪಿಕಾ ಪಡುಕೋಣೆ ಸಂತಸ ವ್ಯಕ್ತಪಡಿಸಿದ್ದಾರೆ. ಹಾಲಿವುಡ್‌‍ನಲ್ಲಿ ಏನೆಲ್ಲಾ ಮಾಡಿದ್ದಾರೆ ಎಂಬ ದೀಪಿಕಾ ಅಭಿಮಾನಿಗಳ ಕುತೂಹಲಕ್ಕೆ ತೆರೆಬೀಳುವ ಸಮಯ ಬಂದಿದೆ. 
 
ಚಿತ್ರದಲ್ಲಿ ದೀಪಿಕಾ ಹೆಸರು ಸೆರೆನಾ ಉಂಗರ್ ಅಂತ. ಹಾಲಿವುಡ್‌ನ ಖ್ಯಾತ ನಟ ವಿನ್ ಡೀಸೆಲ್ ನಾಯಕನಟನಾಗಿದ್ದು ದೀಪಿಕಾ ಈ ಸಿನಿಮಾದಲ್ಲಿ ಯಾವ ರೀತಿ ಕಾಣಿಸಲಿದ್ದಾರೆ ಎಂಬುದು ಜನವರಿ 14ರಂದು ತಿಳಿಯಲಿದೆ.  ಡಿಜೆ ಕಾರುಸೋ ನಿರ್ದೇಶಿಸರುವ 'xXx : ರಿಟರ್ನ್ ಆಫ್ ಕ್ಸಾಂಡರ್ ಕೇಜ್', ೨೦೦೨ ರಲ್ಲಿ ಬಿಡುಗಡೆಯಾದ 'xXx ' ಮತ್ತು ೨೦೦೫ ರಲ್ಲಿ ಬಿಡುಗಡೆಯಾದ 'xXx : ಸ್ಟೇಟ್ ಆಫ್ ಯೂನಿಯನ್' ಸಿನೆಮಾ ಸರಣಿಗಳ ಮುಂದಿನ ಭಾಗ. ಈ ಸಿನೆಮಾದಲ್ಲಿ ರೂಬಿ ಜೋಸ್, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ಡಾನ್ನಿ ಯೆನ್ ಮತ್ತು ಟೋನಿ ಜಾ ಕೂಡ ನಟಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಥಗ್ ಲೈಫ್‌ ಸಿನಿಮಾಗೆ ಸೋಲಿನ ನಡುವೆ ಕಮಲ್ ಹಾಸನ್ ಸಿನಿಮಾಗೆ ಬಿಗ್ ಶಾಕ್‌

ತಮಿಳು ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ ಡ್ರಗ್ಸ್ ಪ್ರಕರಣ: ಖ್ಯಾತ ನಿರ್ದೇಶಕನ ಸಹೋದರ ಅರೆಸ್ಟ್‌

Video, ಇವರೇನಾ ಸೂರ್ಯವಂಶದ ಸೊಸೆ: ಇಶಾ ಕೊಪ್ಪಿಕರ್ ನ್ಯೂ ಲುಕ್‌ಗೆ ದಂಗಾದ ಕನ್ನಡ ಫ್ಯಾನ್ಸ್‌

ಒಂದೇ ಬಾರಿಗೆ ಏಳು ಸಿನಿಮಾಗಳನ್ನು ಅನೌನ್ಸ್ ಮಾಡಿದ ಹೊಂಬಾಳೆ ಫಿಲ್ಸ್‌, ಇಲ್ಲಿದೆ ಡೀಟೆಲ್ಸ್‌

ಪ್ರಶಾಂತ್ ನೀಲ್, ಅಲ್ಲು ಅರ್ಜುನ್ ಜೋಡಿಯಲ್ಲಿ ಹೊಸ ಸಿನಿಮಾ

ಮುಂದಿನ ಸುದ್ದಿ
Show comments