Webdunia - Bharat's app for daily news and videos

Install App

2000 ಯುವತಿಯರಿಂದ ಹಾಲಿವುಡ್ ನಟಿಗೆ ಜೀವ ಬೆದರಿಕೆ!

Webdunia
PR
ಹದಿನೆಂಟು ವರ್ಷದ ಪ್ರಸಿದ್ದ ಹಾಲಿವುಡ್ ನಟಿ ಸೆಲೆನಾ ಗೊಮೆಜ್‌ಗೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಯುವತಿಯರು ಪ್ರಾಣ ಬೆದರಿಕೆಯೊಡ್ಡಿದ್ದಾರೆ. ತನಗಿಂತಲೂ ಕಿರಿಯ ಯುವತಿಯೊಬ್ಬಳು 'ಜಸ್ಟಿನ್ ಸಹವಾಸ ಮಾಡಿದ್ರೆ ಕೊಂದು ಬಿಡುತ್ತೇನೆ. ಆತನಿಂದ ದೂರ ಇರು' ಎಂದು ಟ್ವಿಟ್ಟರ್‌ನಲ್ಲಿ ಬೆದರಿಕೆಯೊಡ್ಡಿರುವುದಾಗಿ ಹೇಳಿಕೊಂಡಿದ್ದಾರೆ ಸೆಲೆನಾ. 'ನನ್ನವನೊಂದಿಗೆ ಡೇಟಿಂಗ್ ಮಾಡುತ್ತಿರುವ ಸೆಲೆನಾಳನ್ನು ದ್ವೇಷಿಸುತ್ತೇನೆ' ಎಂದು ಮತ್ತೊಬ್ಬಳು ಯುವತಿ ಫೇಸ್ ಬುಕ್‌ನಿಂದ ಸಂದೇಶ ರವಾನಿಸಿರುವುದಾಗಿ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ ಸೆಲೆನಾ.

ಇತ್ತೀಚೆಗೆ ತನ್ನ ಪ್ರಿಯಕರ ಪ್ರಸಿದ್ಧ ಪಾಪ್ ಗಾಯಕ ಜಸ್ಟಿನ್ ಬೈಬರ್ ನೊಡನೆ ಹವಾಯಿ ಸಮುದ್ರದಲ್ಲಿ ಜಲಕ್ರೀಡೆಯಾಡಿದ್ದೇ ಇಷ್ಟೆಲ್ಲಾ ಬೆದರಿಕೆಗೆ ಕಾರಣ. ತನಗಿಂತ ಕಿರಿಯನಾದ ಜಸ್ಟಿನ್‌ಗೆ ನಟಿ ಸೆಲೆನಾ ಹವಾಯಿ ಸಮುದ್ರದ ದಡದಲ್ಲಿ, ಮರಳಿನಲ್ಲಿ ವಿವಿಧ ಭಂಗಿಗಳಲ್ಲಿ ಮುತ್ತುಕೊಟ್ಟಿದ್ದರು. ಇದರ ಸಂಪೂರ್ಣ ಛಾಯಾಚಿತ್ರಗಳು ದಿ ಸನ್ ಪತ್ರಿಕೆಯಲ್ಲಿ ಪ್ರಕಟವಾದಂತೆ ಕೆರಳಿದ ಜಸ್ಟಿನ್‌‌ನ ಅಭಿಮಾನಿ ಯುವತಿಯರು ಆಕೆಯ ವರ್ತನೆಯ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ನಿನಗಿಂತ ಕಿರಿಯ ವಯಸ್ಸಿನವನನ್ನು ಹಾಳು ಮಾಡುತ್ತಿದ್ದೀಯಾ ಎಂಬುದು ಈ ಯುವತಿಯರ ಆರೋಪ.

ಕಳೆದ ಒಂದು ವರ್ಷದಿಂದ ಒಟ್ಟಿಗೆ ಸುತ್ತುತ್ತಿರುವ ಈ ಜೋಡಿ, ಗಾಯಕ ಜಸ್ಟಿನ್‌ನ ಅಭಿಮಾನಿಗಳಿಗೆ ನೋವಾಗಬಾರದೆಂಬ ಕಾರಣಕ್ಕೆ ತಮ್ಮ ಸರಸವನ್ನು ಗುಪ್ತವಾಗಿಟ್ಟಿದ್ದರು. ಆದರೆ ಮೊನ್ನೆ ಮೊನ್ನೆ ರಜಾದಿನವನ್ನು ಸಂತೋಷದಿಂದ ಕಳೆಯಲು ಹವಾಯಿ ದ್ವೀಪಕ್ಕೆ ಹೋಗಿದ್ದರು. ಅಲ್ಲಿ ತಾವು ಕಳೆದ ಸಂತೋಷದ ಕ್ಷಣಗಳನ್ನು ಮಾಧ್ಯಮಗಳ ಕ್ಯಾಮೆರಾ ಕ್ಲಿಕ್ಕಿಸಿಬಿಟ್ಟಿವೆ. ವಿಷಯ ಭಹಿರಂಗವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸೆಲೆನಾ, 'ಜಸ್ಟಿನ್‌ನೊಂದಿಗೆ ಬಹಳ ಹಿಂದಿನಿಂದಲೂ ಉತ್ತಮ ಗೆಳೆತನವಿದ್ದು, ನನಗೇನು ತಪ್ಪುಮಾಡಿದ್ದೇನೆ ಎಂದು ಅನಿಸುತ್ತಿಲ್ಲ' ಎಂದಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಪಂಕಜಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜೆರಿವಾಲಾ ಇನ್ನಿಲ್ಲ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

ಒಟ್ಟಿಗೆ ಫೋಸ್ ಕೊಟ್ಟ ಶ್ರೀಲೀಲಾ, ಸಮಂತಾ ರುತ್ ಪ್ರಭು, ಹಾಟ್‌ ಲುಕ್‌ಗೆ ಎಲ್ಲರೂ ಫಿದಾ