2009 ರಲ್ಲೇ ಕೊನೆಯುಸಿರೆಳೆದಿದ್ದ ಪಾಪ್ ತಾರೆ ಮೈಕೆಲ್ ಜಾಕ್ಸನ್ ಅವರ ಆಸ್ತಿಯ ಹಕ್ಕಿಗಾಗಿ 2010ರಲ್ಲೇ ಶೆಲ್ಲಿ ಸ್ಮಿತ್ ಕೋರ್ಟ್ ಮೊರೆ ಹೋಗಿದ್ದರು. ಅಂದು ಸಲ್ಲಿಸಿದ್ದ ಅರ್ಜಿಯಲ್ಲಿ, ತಾನು ಮತ್ತು ಮೈಕೆಲ್ ಎಪ್ಪತ್ತರ ದಶಕದಲ್ಲಿ ನ್ಯೂಯಾರ್ಕ್ನ ಪ್ರಸಿದ್ಧ ಹೊಟೇಲ್ನ ಕೋಣೆಯೊಂದರಲ್ಲಿ ಗುಪ್ತವಾಗಿ ವಿವಾಹವಾಗಿದ್ದು, ಅದಕ್ಕೆ ಸಾಕ್ಷಿ ಆ ಹೊಟೇಲ್ನ ಸಿಬ್ಬಂದಿಗಳು ಎಂದು ತಾನು ಸಲ್ಲಿಸಿದ್ದ ಅಹವಾಲಿನಲ್ಲಿ ವಿಷಯ ಮಂಡಿಸಿದ್ದರು. ಆದರೆ ಇದನ್ನು ಶೀಘ್ರವೇ ಪರಿಶೀಲಿಸಿದ ನ್ಯಾಯಾಲಯ ಅರ್ಜಿಯನ್ನು ವಜಾಮಾಡಿತ್ತು.
ಒಮ್ಮೆ 1979, ನಂತರ 1977ರಲ್ಲಿ ಮೊದಲ ದೇಹ ಸಂಬಂಧ ಹೊಂದಿರುವುದಾಗಿ ಗೊಂದಲಮಯ ಹೇಳಿಕೆ ಸಲ್ಲಿಸಿರುವ ಶೆಲ್ಲಿ ಸ್ಮಿತ್ ಈ ಬಾರಿಯೂ ತನ್ನ ಕಾರ್ಯಸಾಧನೆಯ ಆರಂಭದಲ್ಲೇ ಎಡವಟ್ಟು ಮಾಡಿಕೊಂಡಿದ್ದಾರೆ.
ಮೈಕೆಲ್ ಶಂಕಾಸ್ಪದವಾಗಿ ಸತ್ತಾಗ ಈಕೆ ಹಾಜರಾಗಿಲ್ಲ!(ಮುಂದಿನ ಪುಟದಲ್ಲ ಿ)
ಮೈಕೆಲ್ ಜಾಕ್ಸನ್ ಸಾವಿಗೆ ವೈದ್ಯರೇ ಕಾರಣ ಎಂಬ ಆರೋಪ ಎದ್ದಿದ್ದಾಗ ಶೆಲ್ಲಿ ಸ್ಮಿತ್ ಕಾಣಿಸಿಕೊಂಡಿರಲಿಲ್ಲ. ಆತನ ಖಾಸಗಿ ವೈದ್ಯ ಕಾನ್ರಾಡ್ ಮುರ್ರೆ 'ಪ್ರೊಪೊಫೋಲ್' ಎಂಬ ಔಷಧಿಯನ್ನು ಅಗತ್ಯಕಿಂತ ಹೆಚ್ಚಾಗಿ ನೀಡಿದ್ದರಿಂದ ಆತ ಸಾವನ್ನಪ್ಪಿದ್ದಾನೆ. ಇದು ಮಾನವ ಹತ್ಯೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣದಲ್ಲಿ ಸಾಕ್ಷಿ ನುಡಿಯಲು ಮುಂದೆ ಇದ್ದವರು ಜಾಕ್ಸನ್ನ ಪತಿಯರಾದ ಡೆಬ್ಬಿ ರೋವ್, ಲೀಸಾ ಮೇರಿ ಪ್ರೆಸ್ಲಿ ಮತ್ತು ಸ್ವತಃ ಜಾಕ್ಸನ್ನಿಂದಲೇ ಪತ್ನಿ ಎಂದು ಕರೆಸಿಕೊಂಡಿದ್ದರೆನ್ನಲಾದ ಆಪ್ತಕಾರ್ಯದರ್ಶಿ ನ್ಯಾನಿ ಗ್ರೇಸ್ರ್ವಾರಂಬ!