Webdunia - Bharat's app for daily news and videos

Install App

ನಟಿ ಟಬು, ಇರ್ಫಾನ್ ಖಾನ್ ನಟಿಸಿದ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ

Webdunia
ಸೋಮವಾರ, 25 ಫೆಬ್ರವರಿ 2013 (17:16 IST)
PTI
ಇರ್ಫಾನ್ ಖಾನ್ ಹಾಗೂ ಟಬು ಅಭಿನಯದ 'ಲೈಫ್ ಆಫ್ ಪೈ' ಚಿತ್ರ ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ಲಾಸ್ ಏಂಜಲೀಸ್ ಡಾಲ್ಬಿ ಥಿಯೇಟರ್ನಲ್ಲಿ ನಡೆಯುತ್ತಿರುವ 85ನೇ ವರ್ಣರಂಜಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೈಫ್ ಆಫ್ ಫೈ ಚಿತ್ರ ನಾಲ್ಕು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

' ಲೈಫ್ ಆಫ್ ಪೈ' ಅತ್ಯುತ್ತಮ ಛಾಯಾಗ್ರಹಣ, ನಿರ್ದೇಶನ, ವಿಶ್ಯುವಲ್ ಎಫೆಕ್ಟ್ ಹಾಗೂ ಒರಿಜಿನಲ್ ಸ್ಕೋರ್ಗಾಗಿ ನಾಲ್ಕು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಚಿತ್ರ ಬಿಡುಗಡೆಯಾದ ಮೊದಲ ದಿನವೇ ನಾಲ್ಕು ಕೋಟಿ ರುಪಾಯಿ ಗಳಿಸಿತ್ತು. ಮತ್ತೊಂದು ವಿಶೇಷವೆಂದರೆ 'ಲೈಫ್ ಆಫ್ ಪೈ ಚಿತ್ರದಲ್ಲಿ ಬೆಂಗಳೂರಿನ ಹುಡುಗ ಗೌತಮ್ ಬೇಳೂರು ಅವರು ಅಭಿನಯಿಸಿದ್ದಾರೆ.

' ಲಿಂಕೊನ್' ಚಿತ್ರದ ಅಭಿನಯಕ್ಕಾಗಿ ಡೇನಿಯಲ್ ಡೇ ಲೆವಿಸ್ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ಸಿಲ್ವರ್ ಲೈನಿಂಗ್ ಪ್ರೇ ಬುಕ್ ಚಿತ್ರದ ಅಭಿನಯಕ್ಕಾಗಿ ಜೆನ್ನಿಫರ್ ಲಾರೆನ್ಸ್ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಡೇನಿಯಲ್ ಅವರಿಗೆ ಇದು ಮೂರನೇ ಆಸ್ಕರ್ ಪ್ರಶಸ್ತಿಯಾಗಿದೆ. ಇನ್ನು ಜ್ಯಾಂಗೋ ಅನ್ಚೈನ್ಡ್ ಚಿತ್ರದ ಅಭಿನಯಕ್ಕಾಗಿ ಕ್ರಿಸ್ಟೋಫರ್ ವಾಲ್ಟ್ ಅವರು ಉತ್ತಮ ಪೋಷಕ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

' ಲೆಸ್ ಮಿಸರೆಬಲ್' ಹಾಗೂ 'ಆರ್ಗ್ರೋ' ತಲಾ ಮೂರು ಆಸ್ಕರ್ ಪ್ರಶಸ್ತಿ ಪಡೆದುಕೊಂಡಿವೆ. 'ಸ್ಕೈಪಾಲ್' ಚಿತ್ರಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರೆ, 'ಬ್ರೇವ್' ಅತ್ಯುತ್ತಮ ಅನಿಮೇಟೆಡ್ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಪಂಕಜಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜೆರಿವಾಲಾ ಇನ್ನಿಲ್ಲ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

ಒಟ್ಟಿಗೆ ಫೋಸ್ ಕೊಟ್ಟ ಶ್ರೀಲೀಲಾ, ಸಮಂತಾ ರುತ್ ಪ್ರಭು, ಹಾಟ್‌ ಲುಕ್‌ಗೆ ಎಲ್ಲರೂ ಫಿದಾ

Show comments