Webdunia - Bharat's app for daily news and videos

Install App

ಜೂನ್ 29: ಭಾರತದಲ್ಲಿ ಅಮೆಜಿಂಗ್ ಸ್ಪೈಡರ್ ಮ್ಯಾನ್ ರಿಲೀಸ್

Webdunia
ಬುಧವಾರ, 27 ಜೂನ್ 2012 (20:16 IST)
WD
ಭರ್ಜರಿ ಬಜೆಟ್‌ನ ದಿ ಅಮೆಜಿಂಗ್ ಸ್ಪೈಡರ್ ಮ್ಯಾನ್ ಹಾಲಿವುಡ್ ಸಿನಿಮಾ ಜೂನ್ 29ರಂದು ಭಾರತದಾದ್ಯಂತ ಬಿಡುಗಡೆಗೊಳ್ಳಲಿದೆ. ಹಾಲಿವುಡ್‌ನ ಸ್ಪೈಡರ್ ಮ್ಯಾನ್ ಸಿನಿಮಾ ಸುಮಾರು ಸಾವಿರಕ್ಕೂ ಅಧಿಕ ಪ್ರಿಂಟ್ ಭಾರತದಾದ್ಯಂತ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಅಷ್ಟೇ ಅಲ್ಲ ಈ ಸಿನಿಮಾ 3ಡಿ, 2ಡಿ ಹಾಗೂ IMAX ಫಾರ್‌ಮ್ಯಾಟ್‌ನಲ್ಲೂ ಬಿಡುಗಡೆಯಾಗಲಿದೆ.

ಅಮೆಜಿಂಗ್ ಸ್ಪೈಡರ್ ಮ್ಯಾನ್ ಇಂಗ್ಲಿಷ್, ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ತಯಾರಿಸಲ್ಪಟ್ಟಿದೆ ಎಂದು ಭಾರತದ ಸೋನಿ ಪಿಕ್ಟರ್ಸ್ ತಿಳಿಸಿದೆ.

ದಿ ಅಮೆಜಿಂಗ್ ಸ್ಪೈಡರ್ ಮ್ಯಾನ್ ದೇಶದಲ್ಲಿ ಬಿಡುಗಡೆಗೊಳ್ಳುತ್ತಿರುವ ಬಹುದೊಡ್ಡ ಸಿನಿಮಾವಾಗಿದೆ. ಸ್ಪೈಡರ್ ಮ್ಯಾನ್ ಸಿನಿಮಾ ಸರಣಿ ಭಾರತದಲ್ಲಿ ಅತ್ಯಂತ ಯಶಸ್ವಿ ಮಾರುಕಟ್ಟೆ ಹೊಂದಿದ್ದು, ಆ ನಿಟ್ಟಿನಲ್ಲಿ ಇದು ಮತ್ತೊಂದು ದಾಖಲೆಯನ್ನು ನಿರ್ಮಿಸಲಿದೆ ಎಂಬ ನಂಬಿಕೆ ನಮ್ಮದು ಎಂದು ಸೋನಿ ಪಿಕ್ಚರ್ಸ್ ವಿಶ್ವಾಸ ವ್ಯಕ್ತಪಡಿಸಿದೆ.

ಸ್ಪೈಡರ್ ಮ್ಯಾನ್ ಜಾಗತಿಕ ಮಟ್ಟದ ಅತ್ಯಂತ ಜನಪ್ರಿಯ ಕಥೆಯಾಗಿದೆ. ಇದೀಗ ಮತ್ತೆ ಹೊಸ ಅವತಾರ, ಹೊಸ ಕಥೆಯೊಂದಿಗೆ ಬಿಗ್ ಸ್ಕ್ರೀನ್‌ನಲ್ಲಿ ತೆರೆ ಕಾಣುತ್ತಿದೆ. ದಿ ಅಮೆಜಿಂಗ್ ಸ್ಪೈಡರ್ ಮ್ಯಾನ್ ಸಿನಿಮಾ ಹಲವು ಕಥೆಗಳನ್ನು ವಿವಿಧ ರೀತಿಯಲ್ಲಿ ಸಿನಿಮಾದಲ್ಲಿ ಅನಾವರಣಗೊಳ್ಳಲಿದೆ.

ಈ ಹೊಸ ಸಿನಿಮಾದ ನಟರಾದ ಆಂಡ್ರ್ಯೂ ಗಾರ್‌ಫಿಲ್ಡ್, ಎಮ್ಮಾ ಸ್ಟೋನೆ, ರೈಯ್ಸ್ ಇಫ್ಯಾನ್ಸ್, ಡೇನಿಸ್ ಲೆಯರೈ, ಕ್ಯಾಂಬೆಲ್ ಸ್ಕಾಟ್, ಇರ್ಫಾನ್ ಖಾನ್, ಮಾರ್ಟಿನ್ ಶೇನ್ ಮತ್ತು ಸಾಲೈ ಫಿಲ್ಡ್ ತಾರಾಗಣದಲ್ಲಿದ್ದಾರೆ. ದಿ ಅಮೆಜಿಂಗ್ ಸ್ಪೈಡರ್ ಮ್ಯಾನ್ ಸಿನಿಮಾವನ್ನು ಮಾರ್ಕ್ ವೆಬ್ ನಿರ್ದೇಶಿಸಿದ್ದಾರೆ. ಜೇಮ್ಸ್ ವಾಂಡೆರ್‌ಬಿಲ್ಟ್ ಚಿತ್ರಕಥೆ(ಮಾರ್ವೆಲ್ ಕಾಮಿಕ್ ಬುಕ್ ಆಧಾರಿತ), ಮಾರ್ವೆಲ್ ಎಂಟರ್‌ಟೈನ್‌ಮೆಂಟ್ ಫಾರ್ ಕೊಲಂಬಿಯಾ ಪಿಕ್ಚರ್ಸ್ ಈ ಸಿನಿಮಾವನ್ನು ನಿರ್ಮಿಸಿದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಪಂಕಜಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜೆರಿವಾಲಾ ಇನ್ನಿಲ್ಲ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

ಒಟ್ಟಿಗೆ ಫೋಸ್ ಕೊಟ್ಟ ಶ್ರೀಲೀಲಾ, ಸಮಂತಾ ರುತ್ ಪ್ರಭು, ಹಾಟ್‌ ಲುಕ್‌ಗೆ ಎಲ್ಲರೂ ಫಿದಾ

Show comments