Webdunia - Bharat's app for daily news and videos

Install App

ಕೇಟ್ ಉಳಿಯಲಿರುವ ಕೋಣೆ ಅಲಂಕಾರಕ್ಕೆ ಒಂದೂವರೆ ಲಕ್ಷ ಪೌಂಡ್!

Webdunia
ಬ್ರಿಟನ್ ರಾಜಕುಮಾರ ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್‌ಟನ್ ವಿವಾಹಕ್ಕೆ ಏನೆಲ್ಲ ಮೆರುಗು ಇದೆ ಎಂಬುದಕ್ಕಿಂತ ಏನೇನು ಇಲ್ಲ ಎನ್ನುವುದು ತುಂಬಾ ಸುಲಭವೇನೊ. ಅಷ್ಟರ ಮಟ್ಟಿಗೆ ಅದ್ಧೂರಿಯಾಗಿ, ವಿಜ್ರಂಭಣೆಯಿಂದ ಈ ವಿವಾಹ ಮಹೋತ್ಸವವನ್ನು ನಡೆಸಲು ಉದ್ದೇಶಿಸಲಾಗಿದೆ.

ಈ ರಾಜಕುಡಿಯ ವಿವಾಹಕ್ಕೆ ಬ್ರಿಟನ್ ಸರ್ಕಾರ ಇನ್ನಿಲ್ಲದ ಆಸಕ್ತಿವಹಿಸಿರುವುದಲ್ಲದೆ, ಇವರ ವಿವಾಹ ಮಹೋತ್ಸವವನ್ನು ನೋಡಲು ಉತ್ಸುಕರಾಗಿರುವ ಅಪಾರ ಜನಸ್ತೋಮಕ್ಕೆ ಸಿದ್ಧತೆ ನಡೆಸುವುದರಲ್ಲಿ ತನ್ನೆಲ್ಲ ಜವಾಬ್ದಾರಿಯುತ ಸೇವೆಯನ್ನು ಕೈಗೊಂಡಿದೆ.

ಈ ಸೇವೆಯಲ್ಲಿ ಮತ್ತೊಂದು ಸೇರ್ಪಡೆಯೆಂದರೆ ರಾಜಕುಮಾರನ ಪತಿಯಾಗಲಿರುವ ಕೇಟ್ ಮಿಡ್ಲ್‌ಟನ್ ಅವರ ವಿವಾಹ ಪೂರ್ವ ಕೊನೆಯ ದಿನ ಕಳೆಯಲು ಲಂಡನ್‌ನ ಅದ್ದೂರಿ ಗೋರಿಂಗ್ ಹೊಟೇಲ್‌ನಲ್ಲಿ ರೂಮ್ ಕಾದಿರಿಸಲಾಗಿದೆ. ಈ ಹೊಟೇಲ್‌ನಲ್ಲಿರುವ ಐದು ರೂಮಿನ ಕೋಣೆಯನ್ನು ಅಲಂಕರಿಸಲು ವ್ಯಯಿಸಿರುವ ವೆಚ್ಚ ಬರೋಬ್ಬರಿ ಒಂದು ಲಕ್ಷದ ಐವತ್ತು ಸಾವಿರ ಪೌಂಡ್. ಇವೆಲ್ಲ ಮಹಾರಾಣಿಯಾಗಲಿರುವ ಕೇಟ್‌ರನ್ನು ರೋಮಾಂಚನವಾಗಿ ಚಕಿತಗೊಳಿಸಲು ಅಷ್ಟೆ.

ಅತ್ಯಾಧುನಿಕ ಶೈಲಿಯ ಬಾತ್‌ರೂಂ ನಲ್ಲಿ ದ್ರವ ನಿರೋಧಕ ಟಿ.ವಿ, ಹಳೆಯ ಕಾಲದ ಮತ್ತು ನವೀನ ಯುಗದ ಮಿಶ್ರಿತ ಶೈಲಿಯ ಪೀಠೋಪಕರಣ, ಅದಕ್ಕೆ ಬಳಸಿದ ಉತ್ತಮ ಗುಣಮಟ್ಟದ ಮರ, ಚಿತ್ರಕಲಾಕೃತಿ, ಗ್ರಂಥಾಲಯ ಇತ್ಯಾದಿ, ಇತ್ಯಾದಿ. ಹೇಳುತ್ತಾ ಹೋದರೆ ಸುಲಭದಲ್ಲಿ ಮುಗಿಯುವುದಿಲ್ಲ ಆ ಪಟ್ಟಿ. ಒಂದು ರಾತ್ರಿಯಲ್ಲಿ ಏನೇನಿಲ್ಲ ಎಂಬ ಕಲ್ಪನೆಯೇ ಕೇಟ್‌ಗೆ ಬರಬಾರದು ಅದಕ್ಕಾಗಿ ಈ ಸಿದ್ಧತೆ.

ಏಪ್ರಿಲ್ 28ರಂದು ರಾತ್ರಿ ತನ್ನ 54ವರ್ಷದ ತಾಯಿ ಕಾರೋಲ್ ಮತ್ತು ಇಪ್ಪತ್ತೇಳು ವರ್ಷದ ಸಹೋದರಿ ಪಿಪ್ಪಾ ಜತೆ ಕೇಟ್ ಮಿಡ್ಲ್‌ಟನ್ ತಂಗಲಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಪಂಕಜಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜೆರಿವಾಲಾ ಇನ್ನಿಲ್ಲ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

ಒಟ್ಟಿಗೆ ಫೋಸ್ ಕೊಟ್ಟ ಶ್ರೀಲೀಲಾ, ಸಮಂತಾ ರುತ್ ಪ್ರಭು, ಹಾಟ್‌ ಲುಕ್‌ಗೆ ಎಲ್ಲರೂ ಫಿದಾ

Show comments