Webdunia - Bharat's app for daily news and videos

Install App

ಹೋಳಿ...ಹೋಳಿ...ಬಣ್ಣದೋಕುಳಿ...

Webdunia
PTI
ಹಿಂದೂಗಳ ಹಬ್ಬಗಳಲ್ಲಿ ಒಂದಾಗಿರುವ ಬಣ್ಣದೋಕುಳಿಯ ಹೋಳಿ ಹಬ್ಬ ಉತ್ತರ ಭಾರತ ಸೇರಿದಂತೆ ದೇಶದ ವಿವಿಧೆಡೆ ಜಾತಿ-ಮತ, ಧರ್ಮ ಮೀರಿ ಆಚರಿಸುವ ಹಬ್ಬವಾಗಿದೆ. ಪ್ರತಿಯೊಂದು ಹಬ್ಬಕ್ಕೂ ಪೌರಾಣಿಕ ಹಿನ್ನೆಲೆ ಇದೆ. ಆ ರೀತಿಯಲ್ಲಿ ಹೋಳಿ ಕೂಡ ಹಿರಣ್ಯಕಶ್ಯಪು ಮತ್ತು ಪುತ್ರ ಪ್ರಹ್ಲಾದನ ನಡುವೆ ಹೆಣೆದುಕೊಂಡಿರುವ ಕಥೆಯಾಗಿದ್ದು, ಇದು ಶೈವ-ವೈಷ್ಣವ ಹೊಯ್ದಾಟದ ತಿರುಳನ್ನು ಹೊಂದಿರುವಂಥದ್ದು. ಆ ಕಾರಣಕ್ಕಾಗಿ ಹೋಳಿ ಪ್ರಮುಖವಾಗಿ ಉತ್ತರ ಭಾರತದಲ್ಲಿ ಅದ್ದೂರಿಯಾಗಿ ಆಚರಿಸುವಂತೆ ದಕ್ಷಿಣದಲ್ಲಿ ಅದರ ಅಬ್ಬರ ಕಡಿಮೆ.

ಅದರಲ್ಲೂ ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಹೋಳಿ ಮೀನುಗಾರ (ಖಾರ್ವಿ) ಹಾಗೂ ಬುಡಕಟ್ಟಿನ ಕುಡುಬಿ ಜನಾಂಗಕ್ಕೆ ಮಾತ್ರ ಸೀಮಿತವಾಗಿದೆ. ಅದನ್ನು ಹೊರತುಪಡಿಸಿದರೆ ಬಣ್ಣದೋಕುಳಿ ಎರಚುವಿಕೆ ಹೆಚ್ಚಿನ ಶಾಲಾ-ಕಾಲೇಜುಗಳಲ್ಲಿ ಮಹತ್ವ ಪಡೆದಿದೆ. ಹಾಗಂತ ಧಾರ್ಮಿಕ ಹಿನ್ನೆಲೆಯ ಆಚರಣೆ ಅದಲ್ಲ, ಅಲ್ಲಿರುವುದು ಹೋಳಿ ಹೆಸರಿನ ಸಂಭ್ರಮ, ಕೀಟಲೆ ಮಾತ್ರ.

ದಕ್ಷಿಣ ಕನ್ನಡ ಹಾಗೂ ಉಡುಪಿ, ಕುಂದಾಪುರ ಪ್ರದೇಶಗಳಲ್ಲಿ ಖಾರ್ವಿ ಜನಾಂಗದವರು ಹೋಳಿ ದಿನಾಚರಣೆಯಂದು ತಮ್ಮ ಸಾಂಪ್ರದಾಯಿಕ ಹಾಡನ್ನು ಹಾಡುವ ಮೂಲಕ ಅದ್ದೂರಿಯಾಗಿ ಆಚರಿಸುತ್ತಾರೆ. ಆ ಸಂದರ್ಭದಲ್ಲಿ ಮೀನುಗಾರಿಕೆಗೆ ರಜೆ ಸಾರಲಾಗಿರುತ್ತದೆ. ಎಲ್ಲೆಡೆಯಿಂದ ಬಂಧು-ಬಳಗ ಆಗಮಿಸುತ್ತಾರೆ. ಹೋಳಿಯ ಎರಡನೇ ದಿನದಂದು ಕೈಯಲ್ಲಿ ಬಣ್ಣವನ್ನು ಹಿಡಿದು ಸಿಕ್ಕ-ಸಿಕ್ಕವರಿಗೆ ಎರಚುವ ಮೂಲಕ ಸಂಭ್ರಮಿಸುತ್ತಾರೆ.

ಹೋಳಿ...ಹೋಳಿ...: ಖಾರ್ವಿ ಜನಾಂಗದಂತೆ ಕುಡುಬಿ ಜಾತಿಯವರು ಕೂಡ ವಿಶಿಷ್ಟ ಜಾನಪದ ಹಾಡು ಹಾಗೂ ಅವರ ಸಾಂಪ್ರದಾಯಿಕ ಉಡುಗೆ-ತೊಡುಗೆ ತೊಟ್ಟುಕೊಂಡು ನರ್ತನದ ಮೂಲಕ ಆಚರಿಸುವ ಹೋಳಿ ತುಂಬಾ ವಿಭಿನ್ನವಾದದ್ದು. ಉಡುಪಿ ತಾಲೂಕಿನ ಸೂರಾಲು ಅರಮನೆಯಲ್ಲಿ ಹೋಳಿಯ ದಿನದಂದು ನೂರಾರು ಕುಡುಬಿ ಜನಾಂಗದವರು ಡಮರು ನಾದದ ಹಾಗೂ ಜಾನಪದ ಹಾಡಿನೊಂದಿಗೆ ಕುಣಿಯುತ್ತಾ ಜನಮನವನ್ನು ರಂಜಿಸುವುದನ್ನು ಅಲ್ಲಿ ಕಾಣಬಹುದಾಗಿದೆ.

ಡೊಳ್ಳು ಕುಣಿತ: ಉತ್ತರ ಕರ್ನಾಟಕದಲ್ಲಿ ಕುರುಬ ಜನಾಂಗವೂ ಕೂಡ ಕೊರಳಿಗೆ ಡೋಲು ಕಟ್ಟಿಕೊಂಡು ಹೋಳಿಯ ದಿನದಂದು ಬೀರೇಶ್ವರ ದೇವರನ್ನು ಆರಾಧಿಸುವುದು ಡೊಳ್ಳು ಕುಣಿತ ವಿಶಿಷ್ಟವಾದದ್ದು. ಮೂಲತಃ ಶೈವಾರಾಧಕರಾದ ಕುರುಬರು ಹೋಳಿಯಂದು ಬೀರೇಶ್ವರನನ್ನು ಸ್ತುತಿಸುತ್ತಾ ಡೊಳ್ಳು ಕುಣಿಯುವುದು ಆಕರ್ಷಕ ಜನಪದ ನರ್ತನವಾಗಿದೆ. 12ಮಂದಿಯ ತಂಡದೊಂದಿಗೆ ತಾಳ, ತಪ್ಪಾಡಿ, ಡೋಲು,ಕೊಳಲಿನ ಸುಶ್ರಾವ್ಯ ಸಂಗೀತದೊಂದಿಗೆ ಹೋಳಿಯ ನರ್ತನ ನಡೆಯುತ್ತದೆ. ಇದರಲ್ಲಿ ಡೊಳ್ಳು ಹಾಡು ಮತ್ತು ಡೋಲು ಹಾಡು ಎಂಬ ಎರಡು ವಿಧಗಳಲ್ಲಿ ನರ್ತನ ನಡೆಯುತ್ತದೆ. ಕೈಪಟ್ಟಿನೊಂದಿಗೆ ಡೋಲು ಬಾರಿಸುವ ಮೂಲಕ ಹಾಡುತ್ತ ನರ್ತಿಸುವುದು ಪ್ರಮುಖವಾದ ಅಂಶವಾಗಿದೆ. ಈ ಸಂದರ್ಭದಲ್ಲಿ ಹಾಲುಮಾತಾ ಪುರಾಣವನ್ನು ಕೂಡ ಹಾಡುತ್ತ ನರ್ತಿಸುವುದು ಕುರುಬ ಜನಾಂಗದ ಪ್ರಮುಖ ಆಕರ್ಷಣೆಯಾಗಿದೆ.

ಇನ್ನುಳಿದಂತೆ ಬೀದರ್ ,ಗುಲ್ಬರ್ಗಾ, ರಾಯಚೂರು, ಬಳ್ಳಾರಿ, ಮುಂಬೈ, ಹೈದರಾಬಾದ್‌ಗಳಲ್ಲೂ ಹೋಳಿಯನ್ನು ಹಿಂದೂ-ಮುಸ್ಲಿಮ್ ಎನ್ನುವ ಬೇಧವಿಲ್ಲದೆ ಆಚರಿಸುತ್ತಾರೆ.

ಬಣ್ಣದೋಕುಳಿ ಬಗ್ಗೆ ಎಚ್ಚರ !
ಧಾರ್ಮಿಕ ಆಚರಣೆಯ ಹಿನ್ನೆಲೆಯಲ್ಲಿ ಆಚರಿಸಲ್ಪಡುವ ಹೋಳಿಯ ಬಣ್ಣದೋಕುಳಿ ಎರಚುವಿಕೆ ಇಂದು ಕೇವಲ ಸಂಭ್ರಮವಾಗಿ ಉಳಿದಿಲ್ಲ, ಅದರ ಹಿಂದೆ ವಿಕೃತ ಮನಸ್ಸುಗಳು ಕೂಡ ಸೇರಿಕೊಂಡಿರುವ ಪರಿಣಾಮ ಅಪಾಯವೂ ಹೆಚ್ಚಿದೆ. ಬಣ್ಣಕ್ಕೆ ವಿವಿಧ ರಾಸಾಯನಿಕ ಸೇರಿಸುವುದು ಇಲ್ಲವೇ ದುರುದ್ದೇಶದಿಂದ ಆಸಿಡ್‌ನಂತಹ ದ್ರವ್ಯ ಸೇರಿಸಿ ಮುಖಕ್ಕೆ ಎರಚಿದ ಘಟನೆ ಸಾಕಷ್ಟು ಬಾರಿ ವರದಿಯಾಗಿದೆ.

ಆ ನಿಟ್ಟಿನಲ್ಲಿ ಜಾತ್ಯತೀತವಾಗಿ ನಡೆಯುವ ಬಣ್ಣದೋಕುಳಿಯ ನಡುವೆ ರಕ್ತದೋಕುಳಿ ಹರಿಯದಂತೆ ಎಚ್ಚರ ವಹಿಸಬೇಕಾಗಿದೆ. ಶಾಲಾ-ಕಾಲೇಜುಗಳಲ್ಲಿ ಮೋಜಿಗಾಗಿ ಮುಖಕ್ಕೆ ಬಣ್ಣ, ಸುನಾರಿಯಂತಹ ಪುಡಿ,ಪುಡಿಗಳನ್ನು ಹಚ್ಚಲಾಗುತ್ತದೆ. ಆದರೂ ವಿಕೃತ ಮನಸ್ಸಿನ ಅಪಾಯವನ್ನು ಅರಿಯುವ ಎಚ್ಚರವೂ ಅಗತ್ಯ.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

Show comments