Select Your Language

Notifications

webdunia
webdunia
webdunia
webdunia

ಹೃದಯದ ಆರೋಗ್ಯಕ್ಕೆ 5 ಸೂಪರ್‌ಫುಡ್‌ಗಳು ಇಲ್ಲಿವೆ

ಹೃದಯದ ಆರೋಗ್ಯಕ್ಕೆ 5 ಸೂಪರ್‌ಫುಡ್‌ಗಳು ಇಲ್ಲಿವೆ
ದೆಹಲಿ , ಶನಿವಾರ, 25 ಜೂನ್ 2016 (11:45 IST)
ಆರೋಗ್ಯಕರ ಆಹಾರ ಹಾಗೂ ಜೀವನಶೈಲಿ ನಿಮ್ಮ ಹೃದಯ ಆರೋಗ್ಯ ರಕ್ಷಿಸಲು ಸಹಾಯ ಮಾಡಬಲ್ಲದು. ಹೃದಯ ಸ್ನೇಹಿ ಆಹಾರ ಹ-ದಯ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯವನ್ನು ತಗ್ಗಿಸಬಹುದು. ತರಕಾರಿಗಳು, ಹಣ್ಣುಗಳು, ಕೊಬ್ಬು ರಹಿತ ಫುಡ್‌ಗಳು ಅಷ್ಟೇ ಅಗತ್ಯ. ಹೃದಯ ಸಂಬಂಧಿ ಕಾಯಿಲೆಯನ್ನು ತಪ್ಪಿಸಲು 5 ಆಹಾರಗಳನ್ನು ನೀವೂ ತಪ್ಪದೇ ಸೇವಿಸಬೇಕು. ಅವುಗಳ ಕುರಿತು ಮಾಹಿತಿ ಇಲ್ಲಿದೆ. 
ಬೆರಿಹಣ್ಣು:
ಕೊಬ್ಬಿನ ಅಂಶವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ಇದು ತಡೆಯಬಲ್ಲದು. 
webdunia
 

ನಟ್ಸ್: ನಟ್ಸ್ ಕೂಡ ಆರೋಗ್ಯಕ್ಕೆ ಉತ್ತಮವಾದದ್ದು, ನಿತ್ಯವು ನಟ್ಸ್ ಸೇವಿಸುವುದರಿಂದ ಹಲವು ಸಮಸ್ಯೆಗಳನ್ನು ತಡೆಗಟ್ಟಬಹುದು. ಅಲ್ಲದೇ ರಕ್ತ ಸಂಚಾರಕ್ಕೂ ಇದು ಸಹಾಯಕಾರಿ. ಆದ್ದರಿಂದ ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಕೊಬ್ಬಿನ ಅಂಶವನ್ನು ತಗ್ಗಿಸಿ ತೂಕವನ್ನು ಕಡಿಮೆ ಮಾಡುವಲ್ಲಿ ನಟ್ಸ್ ಸಹಾಯಕಾರಿಯಾಗಿದೆ 
webdunia



 
ಎಳೆಗೆಪ್ಪು ಮೀನು: ಎಳೆಗೆಪ್ಪು ಮೀನು ಆರೋಗ್ಯಕ್ಕೆ ಉತ್ತಮ.. ದಪ್ಪ ಚರ್ಮವನ್ನು ಹೊಂದಿರು ಈ ಫಿಶ್ ಆರೋಗ್ಯಕ್ಕೂ ಹಾಗೂ ತೂಕಕ್ಕು ಸಮತೋಲನ ಕಾಯ್ದುಕೊಂಡು ಬರಲು ಇದು ಸಹಾಯ ಮಾಡುತ್ತದೆ. ಅಲ್ಲದೇ ಎಣ್ಣೆಯುಕ್ತವಾದ ಈ ಮೀನು ಟ್ರೈಗ್ಲಿಸರೈಡ್‌ನ ಮಟ್ಟವನ್ನು ಕಡಿಮೆ ಮಾಡಬಹುದು.
webdunia

ಓಟ್ಸ್ ಧಾನ್ಯದ ಹಿಟ್ಟು: 
ಓಟ್ಸ್, ಓಟ್ಸ್‌ನಿಂದ ಮಾಡಿದ ಆಹಾರಗಳು ಉತ್ತಮ ಪರಿಣಾಮಕಾರಿ ಬೀರಬಲ್ಲದ್ದು. ಆಹಾರ ಫೈಬರ್ ಗುಣಗಳನ್ನು ಹೊಂದಿರು ಓಟ್ಸ್ ಕೊಲೆಸ್ಟ್ರಾಲ್ ಮತ್ತು ಹೃದಯ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. 
webdunia

 



ಕಿತ್ತಳೆ:
ಶೀತವನ್ನು ತಡೆಗಟ್ಟುತ್ತದೆ ಎನ್ನಲಾದ ಕಿತ್ತಳೆ ನಿಮ್ಮ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಪೆಕ್ಟಿನ್ ಹಾಗೂ ಪೋಟ್ಯಾಶಿಯಂ ಪೌಶ್ಟಿಕಾಂಶಗಳ ಇರುವುದರಿಂದ ರಕ್ತದೋತ್ತಡ ಹಾಗೂ ಹೃದಯಕ್ಕೂ ಇದು ಸಹಾಯ ಮಾಡುತ್ತದೆ.

webdunia



 

Share this Story:

Follow Webdunia kannada

ಮುಂದಿನ ಸುದ್ದಿ

ಅಂದದ ಉಗುರಿಗೆ..ಬೇಕಿದೆ ಚೆಂದದ ಆರೈಕೆ