ಬೆಂಗಳೂರು: ಈಗೀಗ ಬೆಳಿಗ್ಗೆಯಿಂದ ಸಂಜೆವರೆಗೆ ಹೊರಗೆ ಕಾಲಿಡುವಂತೆಯೇ ಇಲ್ಲ. ಅಷ್ಟೊಂದು ಬಿಸಿಲಿನ ಝಳ. ಹಾಗೆಂದು ಮನೆಯೊಳಗೇ ಕೂರುವ ಹಾಗಿಲ್ಲವಲ್ಲ? ಆದರೆ ಬಿಸಿಲಿನ ತಾಪದಿಂದ ಚರ್ಮವನ್ನು ಹೇಗೆಲ್ಲಾ ಕಾಪಾಡಬಹುದು ನೋಡೋಣ.
ಕಡಲೆ ಹಿಟ್ಟು
ಕಡಲೆ ಹಿಟ್ಟು ಬಳಸಿ ನಿಮ್ಮ ಚರ್ಮ ಬಿಸಿಲಿಗೆ ಒಣಗುವುದರಿಂದ ರಕ್ಷಿಸಬಹುದು. ಬಿಸಿಲಿಗೆ ಚರ್ಮ ಒಣಗಿದಂತೆ ಆಗುತ್ತದೆ. ಈ ಭಾಗಕ್ಕೆ ಕಡಲೆ ಹಿಟ್ಟು ಮತ್ತು ನೀರು ಹಾಕಿ ಪೇಸ್ಟ್ ಮಾಡಿಕೊಂಡು ಹಚ್ಚಿಕೊಳ್ಳಬಹುದು.
ನಿಂಬೆ ಹಣ್ಣಿನ ರಸ
ನಿಂಬೆ ಹಣ್ಣಿನಲ್ಲಿ ಬಿಳುಚುವಿಕೆಯ ಗುಣವಿದೆ. ನಿಂಬೆ ಹಣ್ಣಿನ ರಸಕ್ಕೆ ಜೇನು ತುಪ್ಪ ಅಥವಾ ಕಡಲೆ ಹಿಟ್ಟು ಮಿಕ್ಸ್ ಮಾಡಿಕೊಂಡು ಹಚ್ಚಿಕೊಳ್ಳಿ. ಇದನ್ನು 15 ನಿಮಿಷಗಳ ಕಾಲ ಹಾಗೇ ಬಿಟ್ಟುಕೊಂಡು ನಂತರ ಶುದ್ಧ ನೀರಿನಿಂದ ತೊಳೆದುಕೊಳ್ಳಿ.
ತೆಂಗಿನ ಹಾಲು ಮತ್ತು ಶ್ರೀಗಂಧ
ಚಿಕ್ಕಮಕ್ಕಳಿಗೂ ಶ್ರೀಗಂಧ ಮೈಗೆ ಹಚ್ಚಿಕೊಳ್ಳುವುದರಿಂದ ಚರ್ಮ ನುಣುಪಾಗುತ್ತದೆ. ಶ್ರೀಗಂಧದ ಪುಡಿಗೆ ಸ್ವಲ್ಪ ತೆಂಗಿನ ಹಾಲು ಸೇರಿಸಿ ಹಚ್ಚಿಕೊಳ್ಳುವುದು ಚರ್ಮ ಸುಟ್ಟಂತಾಗುವುದಕ್ಕೆ ಪರಿಹಾರ ನೀಡುತ್ತದೆ.
ಅಲ್ಯುವೀರಾ
ಇನ್ನೂ ಸುಲಭ ಉಪಾಯವೆಂದರೆ, ಅಲ್ಯುವೀರಾ ರಸವನ್ನು ಹಚ್ಚಿಕೊಳ್ಳುವುದು. ಇದು ತಂಪು ಗುಣವನ್ನು ಹೊಂದಿದೆ. ಹೀಗಾಗಿ ಚರ್ಮ ಕೂಲ್ ಆಗುವುದಲ್ಲದೆ, ಮೃದುವಾಗುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ