Select Your Language

Notifications

webdunia
webdunia
webdunia
webdunia

ರಾತ್ರಿ ನಿದ್ದೆ ಬರುತ್ತಿಲ್ಲವೆ ? ಹೀಗೆ ಮಾಡಿ

ರಾತ್ರಿ ನಿದ್ದೆ ಬರುತ್ತಿಲ್ಲವೆ ? ಹೀಗೆ ಮಾಡಿ
ಬೆಂಗಳೂರು , ಗುರುವಾರ, 23 ಜೂನ್ 2016 (11:37 IST)
- ಅರುಣಕುಮಾರ ಧುತ್ತರಗಿ 
 
ರಾತ್ರಿ ನಿಮಗೆ ನಿದ್ದೆ ಬರುತ್ತಿಲ್ಲವೇ? ನೀವು ಸೀಗರೇಟು ಸೇದುತ್ತಿರಾ? ಆಫೀಸ್‌ ಇಂದ ಬಂದ ಮೇಲೆ ಕೆಲವರಿಗೆ ನಿದ್ದೆ ಬರಲ್ಲ.. ನಿದ್ದೆ ಬರಲಾಗದೇ ಇತ್ತ  ಹಾಸಿಗೆಯಲ್ಲೇ ಸುಮ್ಮನೆ ಮಲಗಿರೋದನ್ನು ನೋಡಿರುತ್ತೀವಿ.. ಅಷ್ಟಕ್ಕೂ ನಿಮ್ಮಗೆ ನಿದ್ದೆ ಬರಲಾಗದಿರುವುದಕ್ಕೆ ಕಾರಣವೇನು ಎಂಬುದಕ್ಕೆ ಇಲ್ಲಿದೆ ಉತ್ತರ. ಇಂದಿನಿಂದ ಸೀಗರೇಟು ಸೇದುವುದು ಬಿಟ್ಟು ಬಿಡಿ. ಸೀಗರೇಟು, ಬೀಡಿ ಮತ್ತಿತರ ತಂಬಾಕಿನ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಸೇದುವುದರಿಂದ ತಮ್ಮ ಒಟ್ಟು ನಿದ್ದೆಯ ಸಮಯದಲ್ಲಿ 1.2 ನಿಮಿಷ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. 
ಯುನಿವರ್ಸಿಟಿ ಆಫ್ ಪ್ಲೊರಿಡಾ ಮತ್ತು ರಿಸರ್ಚ್ ಟ್ರ್ಯಾಂಗಲ್ ಪಾರ್ಕ್ ಸಂಸ್ಥೆ ಜಂಟಿ ಆಶ್ರಯದಲ್ಲಿ . ಈ ಅಧ್ಯಯನ ನಡೆಸಲಾಗಿದೆ. ಸ್ಮೋಕಿಂಗ್ ಮತ್ತು ನಿದ್ದೆಯ ಕುರಿತು ಈ ಸಂಸ್ಥೆಗಳು ಸಂಶೋಧನೆ ನಡೆಸಿದೆ. ಈ ಅಧ್ಯಯನದ ಪ್ರಕಾರ ಸ್ಮೋಕಿಂಗ್ ಮಾಡುವ ಶೇ.11.9 ಜನರಿಗೆ ನಿದ್ರಾಹೀನತೆಯ ಸಮಸ್ಯೆ ಉಂಟಾಗುತ್ತದೆ . ಶೇ.10 .6 ಜನರಿಗೆ ರಾತ್ರಿ ನಿದ್ದೆಸರಿಯಾಗಿ ಆಗುವುದಿಲ್ಲ, ನಿದ್ದೆಯಲ್ಲಿಯೇ ಎಚ್ಚರವಾಗುತ್ತದೆ. ಹಾಗೇನೆ ಶೇ.9.5 ಜನರಿಗೆ ಬೆಳಗಿನ ಸಮಯದಲ್ಲಿ ನಿದ್ದೆ ಬರೋದೆ ಇಲ್ಲ, ಇವರಿಗೆ ಬೆಳಿಗ್ಗೆ ಬಹು ಬೇಗನೇ ಎಚ್ಚರವಾಗುತ್ತದೆ. 
 
ಸ್ಮೋಕಿಂಗ್ ಕಾರಣದಿಂದ ನಿದ್ದೆ ಸರಿಯಾಗಿ ಆಗದ ಕಾರಣ ಅನೇಕ ರೋಗಗಳು ಬರುತ್ತವೆ, ಉದಾಹರಣೆಗೆ ಖಿನ್ನತೆ ( ಡಿಫ್ರೆಶನ್) , ಮಧುಮೇಹ (ಡಯಾಬಿಟಿಸ) ಮತ್ತು ಹೈ ಬ್ಲಡ್‌ ಶುಗರ್ ರೋಗಗಳು ಬರುವ ಸಾಧ್ಯತೆ ಇವೆ.

ಅಧ್ಯಯನದ ಪ್ರಕಾರ ಸ್ಮೋಕಿಂಗ್ ಮಾಡುವುದರಿಂದ ಕ್ಯಾನ್ಸರ್ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಜೊತೆಗೆ ನಿದ್ದೆ ಬರದಿರುವುದು ಕೂಡ ದೇಹಕ್ಕೆ ಅನಾರೋಗ್ಯ ಉಂಟು ಮಾಡುತ್ತದೆ ಎಂದು ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.ಸೋ ಈಗಲೆ ಹಂತ ಹಂತವಾಗಿ ಸ್ಮೋಕಿಂಗ್ ಬಿಟ್ಟು ಬಿಡಿ, ಆರಾಮಾಗಿ ನಿದ್ದೆ ಮಾಡಿ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಮಗೆ ಗೊತ್ತಾ? ಬೆರಿಹಣ್ಣು ನಿಮ್ಮ ನೆನಪಿನ ಶಕ್ತಿ ಹೆಚ್ಚಿಸುತ್ತೆ