Select Your Language

Notifications

webdunia
webdunia
webdunia
webdunia

ಬೇಗ ಏಳುವವರು ಹೇಗೆ ಇರುತ್ತಾರೆ ಗೊತ್ತಾ ?

ಬೇಗ ಏಳುವವರು ಹೇಗೆ ಇರುತ್ತಾರೆ ಗೊತ್ತಾ ?
ನವದೆಹಲಿ , ಬುಧವಾರ, 23 ಜುಲೈ 2014 (18:48 IST)
ಬೆಳಿಗ್ಗೆ ಬೇಗ ಏಳುವವರ ಕುರಿತು ಒಂದು ಸಂಶೋಧನೆ ಮಾಡಲಾಗಿದೆ. ಈ ಸಂಶೋಧಕರ  ಪ್ರಕಾರ ಬೆಳಿಗ್ಗೆ ಬೇಗ ಏಳುವವರು ಮತ್ತು ರಾತ್ರಿ ತಡವಾಗಿ ಮಲಗುವವರ ಪ್ರಾಮಾಣಿಕತೆಯ ಸ್ಥರ ಬೇರೆ ಬೇರೆ ಇರುತ್ತದೆ ಎಂದು ತಿಳಿದು ಬಂದಿದೆ. ಈ ಅಧ್ಯಯನ ಸುಮಾರು 200 ಜನರ ಮೇಲೆ ಮಾಡಲಾಗಿದೆ. ಇದರಲ್ಲಿ ಸಮಸ್ಯೆಗೆ ಸಮಾಧಾನ ಹುಡುಕುವವರ ಟೆಸ್ಟ್‌ ಮತ್ತು ಆಟಗಳಲ್ಲಿ ಭಾಗಿಯಾಗುವಂತೆ ಮಾಡಲಾಗಿದೆ. 
 
ಈ ಜನರಿಗೆ ಇದರ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಹಾರ್ವರ್ಡ ವಿಶ್ವವಿಧ್ಯಾಲಯದ ಸಂಶೋಧಕಿ ಸುನಿತಾ ಸಾಹ್‌‌ರವರ ಪ್ರಕಾರ ವ್ಯವಹಾರದ ಈ ವ್ಯತ್ಯಾಸ ಕಾರ್ಯಸ್ಥಳದಲ್ಲಿ ನೋಡಲು ಸಿಗುತ್ತದೆ. 
 
ವ್ಯಕ್ತಿಯ ದಿನನಿತ್ಯದ ಕಾರ್ಯಗಳಲ್ಲಿ ಅವರ ನೈತಿಕ ನಿರ್ಧಾರದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ಅಧ್ಯಯನದಲ್ಲಿ ತಿಳಿಯುವ ಪ್ರಯತ್ನ ಮಾಡಲಾಯಿತು. ಅಧ್ಯಯನದ ಮೂಲಕ ತಿಳಿದು ಬಂದ ವಿಷಯವೇನೆಂದರೆ ಬೆಳಿಗ್ಗೆ ಏಳುವ ವ್ಯಕ್ತಿಗಳು  ಹೆಚ್ಚು ನೈತಿಕವಾಗಿರುತ್ತಾರೆ ಮತ್ತು ರಾತ್ರಿ ತಡವಾಗಿ ಮಲಗುವವರು ರಾತ್ರಿ ಹೆಚ್ಚು ಪ್ರಾಮಾಣಿಕವಾಗಿರುತ್ತಾರೆ. 
 
ಈ ಎರಡೂ ತರಹದ ಜನರು ಈ ಸಮಯದ ಹೊರತು ಉಳಿದ ಸಮಯದಲ್ಲಿ ಹೆಚ್ಚು ಅಪ್ರಾಮಾಣಿಕರಾಗಿರುತ್ತಾರೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. 
 
ರಾತ್ರಿ ಹೊತ್ತು ತಡವಾಗಿ ಮಲಗುವವರು ಕೆಟ್ಟ ವ್ಯವಹಾರದಲ್ಲಿ ತೊಡಗಿರುತ್ತಾರೆ ಎಂದು ಅಧ್ಯಯನದಿಂದ ಗೊತ್ತಾಗಿದೆ. ಈ ಸಂಶೋಧಕರಲ್ಲಿ ಜಾನ್ಸ್‌‌ ಹಾಪ್ಕಿನ್ಸ್‌‌ ವಿಶ್ವವಿಧ್ಯಾಲಯ ಮತ್ತು ವಾಶಿಂಗ್ಟನ್‌‌‌ ವಿಶ್ವವಿಧ್ಯಾಲಯದ ಸಂಶೋಧಕರ ಜೊತೆಗೆ ಹಾರ್ವರ್ಡ್‌ನಲ್ಲಿ ಸಂಶೋಧನೆ ಮಾಡುತ್ತಿರುವ ಪ್ರೋಫೆಸರ್‌ ಸುನಿತಾ ಸಾಹ ಕೂಡಾ ಭಾಗಿಯಾಗಿದ್ದರು. 

Share this Story:

Follow Webdunia kannada