Select Your Language

Notifications

webdunia
webdunia
webdunia
webdunia

ನೀರು ಕುಡಿದು ನಿರೋಗಿಯಾಗಿರಿ

ನೀರು ಕುಡಿದು ನಿರೋಗಿಯಾಗಿರಿ
ಚೆನ್ನೈ , ಬುಧವಾರ, 19 ನವೆಂಬರ್ 2014 (16:11 IST)
ನೀರು ದೇಹದ ಒಳಅಂಗಾಂಗಗಳನ್ನು ಕೂಡ ಸ್ವಚ್ಛಗೊಳಿಸುತ್ತದೆ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ದೇಹದಲ್ಲಿ ಅಂತರ್ಗತವಾದ ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ. ನೀರನ್ನು ಯಥೇಚ್ಛ ಸೇವಿಸುವುದರಿಂದ ಚರ್ಮ ಸುಕ್ಕುಗಟ್ಟದಂತೆ ಸುಂದರವಾಗಿಡುತ್ತದೆ. 
 
ಮೂತ್ರಪಿಂಡದ ಕಲ್ಲುಗಳನ್ನು ಮತ್ತು ದೇಹದಲ್ಲಿ ನೀರಿನ ಇಂಗುವಿಕೆ ಸಮಸ್ಯೆಗೆ ನೀರು ಕುಡಿಯುವಿಕೆಯಿಂದ ಸಮಸ್ಯೆ ಸಿಗುತ್ತದೆ. ನೀರು ನಮ್ಮ ಬಾಯಾರಿಕೆಯನ್ನು ನೀಗಿಸುತ್ತದೆ ಮತ್ತು ಹಸಿವನ್ನು ಕೂಡ ಇಂಗಿಸುತ್ತದೆ.
 
 ಜಗತ್ತಿನಲ್ಲಿ ಅಗ್ಗವಾಗಿ ಸಿಗುವ ವಸ್ತು ನೀರೊಂದೇ ಆಗಿರುವುದರಿಂದ ಹೆಚ್ಚು ಹೆಚ್ಚು ನೀರು ಕುಡಿಯುವುದನ್ನು ರೂಢಿ ಮಾಡಿಕೊಳ್ಳಿ. ನೀವು ಯಾವುದಾದರೂ ತಂಪು ಪಾನೀಯ ಕುಡಿಯಬೇಕೆಂದು ಭಾವಿಸಿದ್ದರೆ ಕೂಡಲೇ ಅದಕ್ಕೆ ಬ್ರೇಕ್ ಹಾಕಿ. ಬದಲಿಗೆ ನೀರನ್ನು ಕುಡಿಯಿರಿ. ನಿಮಗೆ ನೀರು ಕುಡಿಯುವುದು ಕೆಲವು ಬಾರಿ ಇಷ್ಟವಾಗದಿದ್ದರೆ ಮಜ್ಜಿಗೆ ಕುಡಿಯಿರಿ.ಹಸಿವಾದ ಒಂದು ಲೋಟ ಮಜ್ಜಿಗೆ ಕುಡಿದರೆ ಹಸಿವು ಸ್ವಲ್ಪ ಮಟ್ಟಿಗೆ ಶಮನವಾಗುತ್ತದೆ. ಇದು ಪೌಷ್ಠಿಕಾಂಶದಿಂದಲೂ ಕೂಡಿರುತ್ತದೆ.

Share this Story:

Follow Webdunia kannada