Select Your Language

Notifications

webdunia
webdunia
webdunia
webdunia

ಬಾಯ್ತುಂಬಾ ಮೊಸರು ತಿಂದು ಗಟ್ಟಿಯಾಗಿ

ಬಾಯ್ತುಂಬಾ ಮೊಸರು ತಿಂದು  ಗಟ್ಟಿಯಾಗಿ
Bangalore , ಶನಿವಾರ, 28 ಜನವರಿ 2017 (11:23 IST)
ಬೆಂಗಳೂರು: ಊಟವಾದ ಮೇಲೆ ಸಕ್ಕರೆ ಹಾಕಿಕೊಂಡು ಮೊಸರು ತಿನ್ನುವುದೆಂದರೆ.. ವಾವ್ ಸೂಪರ್ ರುಚಿ. ಬಾಯಲ್ಲಿ ನೀರೂರುತ್ತದಲ್ಲಾ? ಈ ಮೊಸರು ಬಾಯ್ತುಂಬಾ ತಿಂದರೆ ಏನೆಲ್ಲಾ ಆರೋಗ್ಯಕರ ಉಪಯೋಗಗಳಿವೆ ಎನ್ನುವುದನ್ನು ನೋಡೋಣ ಬನ್ನಿ.

 
ಮೊಸರು ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಮೊಸರು ನಾವು ಸೇವಿಸುವ ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳುವ ಗುಣ ಹೊಂದಿದೆ. ಅಲ್ಲದೆ ಹೊಟ್ಟೆಗೆ ಸಂಬಂಧಿಸಿದ ಹಲವು ಖಾಯಿಲೆಗೆ ಮೊಸರು ಸೇವನೆ ಉತ್ತಮ.

ಮೊಸರಿನಲ್ಲಿ ಕ್ಯಾಲ್ಶಿಯಂ ಅಂಶ ಹೆಚ್ಚು. ಹೀಗಾಗಿ ಎಲುಬು ಮತ್ತು ಹಲ್ಲಿನ ಸದೃಡತೆಗೆ ಮೊಸರು ಸೇವನೆ ಉತ್ತಮ. ಆರ್ಥರೈಟಿಸ್, ಹಾಗೂ ಎಲುಬಿಗೆ ಸಂಬಂಧಿಸಿದ ಹಲವು ಖಾಯಿಲೆಗಳನ್ನು ಮೊಸರು ಸೇವನೆಯಿಂದ ದೂರ ಮಾಡಬಹುದು.

ಮೊಸರು ತಿಂದು ದಪ್ಪಗಾಗುತ್ತೇವೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಮೊಸರು ನಿಜವಾಗಿ ನಮ್ಮ ದೇಹದಲ್ಲಿರುವ ಅನಗತ್ಯ ಕೊಬ್ಬು ನಾಶ ಮಾಡುತ್ತದೆ ಮತ್ತು ತೂಕ ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಮೊಸರಿನಲ್ಲಿ ವಿಟಮಿನ್ ಇ, ಜಿಂಕ್ ಮತ್ತು ಪೋಸ್ಪರಸ್ ಅಂಶಗಳು ಹೆಚ್ಚಿರುವುದರಿಂದ, ಚರ್ಮದ ಆರೋಗ್ಯಕ್ಕೆ ಉತ್ತಮ. ಕೂದಲು ಕಾಂತಿಯುತವಾಗಲು,  ತಲೆ ಹೊಟ್ಟು ನಿವಾರಿಸಲೂ ಮೊಸರನ್ನು ಹಚ್ಚಿಕೊಳ್ಳಬಹುದು. ಮತ್ಯಾಕೆ ತಡ, ಬಾಯ್ತುಂಬಾ ಮೊಸರು ತಿನ್ನಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಅಡುಗೆಯಲ್ಲಿ ಬಳಸಬಹುದಾದ ಆರೋಗ್ಯಕರ ಐದು ಬಗೆ ಎಣ್ಣೆಗಳು!