Select Your Language

Notifications

webdunia
webdunia
webdunia
webdunia

ಜಿರಳೆ ಹಾಲು ಜಗತ್ತಿನ ಅತ್ಯಂತ ಶ್ರೇಷ್ಟ ಆಹಾರ.. ಆಶ್ಚರ್ಯವಾದ್ರೂ ಸತ್ಯ

ಜಿರಳೆ ಹಾಲು ಜಗತ್ತಿನ ಅತ್ಯಂತ ಶ್ರೇಷ್ಟ ಆಹಾರ.. ಆಶ್ಚರ್ಯವಾದ್ರೂ ಸತ್ಯ
ದೆಹಲಿ , ಗುರುವಾರ, 28 ಜುಲೈ 2016 (10:29 IST)
ಅಸಹ್ಯಕ್ಕೆ ಹೆಸರೇ ಅದು ಜಿರಳೆ... ಮನೆಯಲ್ಲಿ ಜಿರಳೆ ಕಾಟ ಇದೆ ಎಂದು ಜಿರಳೆಯನ್ನು ನಾಶ ಮಾಡಲು ಪ್ರಯತ್ನ ಮಾಡುತ್ತೇವೆ.
ಆದ್ರೆ ಜಿರಳೆ ಅತ್ಯಂತ ಶ್ರೇಷ್ಟ ಆಹಾರ ಎಂದು ಸಾಬೀತಾಗಿದೆ.ಇನ್ನೂ ಕೆಲವರು ಜಿರಳೆ ಎಂದ್ರೆ ಭಯ ಪಡುವುದುಂಟು. ಆದ್ರೆ ಜಿರಳೆ ಬಗ್ಗೆ ಗೊತ್ತಿರದ ಸಂಗತಿಯೊಂದು ಇದೆ. ಸಂಶೋಧನೆ ಪ್ರಕಾರ ಜಿರಳೆ ಜಗತ್ತಿನ ಅತ್ಯಂತ ಸೂಪರ್‌ಫುಡ್, ಪ್ರೋಟಿನ್ ಆಹಾರ ಎಂಬುದು ಸಾಬೀತಾಗಿದೆ. ಇದನ್ನು ಕೇಳಿದ ನಿಮಗೆ ಆಶ್ಚರ್ಯ ಎನ್ನಿಸಬಹುದು. ಆದ್ರೂ ಸತ್ಯ ಎನ್ನುತ್ತಿದೆ ಸಂಶೋಧನೆ.
ಭಾರತೀಯ ವಿಜ್ಞಾನಿಗಳು ಪತ್ತೆ ಮಾಡಿರುವ ಸಂಶೋಧನೆಯಲ್ಲಿ ತಿಳಿದು ಬಂದ ಅಂಶ ಏನೆಂದರೆ ಜಿರಳೆಯ ಕರುಳಿನಲ್ಲಿ ಉತ್ಪಾದನೆಯಾಗುವ ಸಂಯುಕ್ತ ಪದಾರ್ಥ ಇದು ಹಸುವಿನ ಹಾಲಿಗಿಂತಲೂ ಬಹಳ ನ್ಯೂಟ್ರಿಶಿಯಸ್ ಆಗಿದೆಯಂತೆ. ಇದು ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
 
ಸಾಮಾನ್ಯವಾಗಿ ಜಿರಳೆಗಳು ಹಾಲು ಉತ್ಪಾದಿಸುವುದಿಲ್ಲಿ... ಜಿರಳೆಯಿಂದ ಹಾಲನ್ನು ಪಡೆಯುವುದು ತುಂಬಾ ಕಷ್ಟದ ಕೆಲಸ..  ಕೆಲವೊಂದು ಬಾರಿ ಡಿಪ್ಲೋಪ್ಟೇರಾ ವಿಧದ ಜಿರಳೆಗಳು ಜನ್ಮ ತಾಳುವ ಮರಿಗಳಿಗಾಗಿ ಹಾಲನ್ನು ಉತ್ಪಾದಿಸುತ್ತವೆ. ಈ ಹಾಲಿನಲ್ಲಿ ವಿಶೇಷವಾದ ಪ್ರೋಟಿನ್ ಅಂಶಗಳಿವೆ. ಇದು ಹಸುವಿನ ಹಾಲಿಗೆ ಹೋಲಿಸಿದ್ರೆ ಮೂರು ಪಟ್ಟು ಅಧಿಕ ಶಕ್ತಿ ಇದೆಯಂತೆ.
 
ಬೆಂಗಳೂರಿನ ಇನ್ಸ್‌ಟಿಟ್ಯೂಟ್ ಆಫ್ ಸ್ಟೆಮ್ ಸೆಲ್ ಬಯಾಲಜಿ ಹಾಗೂ ರೀಜಿನರೇಟಿವ್ ಮೆಡಿಸಿನ್ ಇನ್ ಇಂಡಿಯಾದ ನೇತೃತ್ವದಲ್ಲಿ ಇಂಟರ್‌ನ್ಯಾಷನಲ್ ವಿಜ್ಞಾನಿಗಳ ತಂಡವು ಪ್ರಯೋಗಾಲಯದಲ್ಲಿ ಪ್ರೋಟಿನ್ ಕ್ರಿಸ್ಟೆಲ್ ಗಳನ್ನು ಉತ್ಪಾದಿಸುವ ವಿಶೇಷ ಜೀನ್‌ಗಳ ರೂಪಾಂತರದ ಬಗ್ಗೆ ಸಂಶೋಧನೆ ಕೈಗೊಂಡಿದೆ.
 
ಪ್ಯಾಸಿಫಿಕ್ ಬೀಟೆಲ್ ಹೆಸರಿನ ಜಿರಳೆಯಿಂದ ಮಾತ್ರ ಹಾಲನ್ನು ಪಡೆಯಲು ಸಾಧ್ಯವಿದೆ ಇದು ನೀಡುವ ಹಾಲು ಹಸುವಿನ ಹಾಲಿಗಿಂತ ನಾಲ್ಕು ಪಟ್ಟು ಪೌಷ್ಟಿಕಾಂಶವನ್ನು ಹೊಂದಿರುತ್ತದೆ ಎನ್ನುತ್ತಿದೆ ಸಂಶೋಧನೆ ತಜ್ಞ ಸುಬ್ರಮಣಿಯನ್ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಗೋಡಂಬಿಯಿಂದ ಐದು ಆರೋಗ್ಯ ಪ್ರಯೋಜನಗಳು