Select Your Language

Notifications

webdunia
webdunia
webdunia
webdunia

ಮಹಿಳೆಯರ ಆರೋಗ್ಯಕ್ಕೆ 8 ಆಹಾರವನ್ನು ತಿನ್ನಬೇಕು

ಮಹಿಳೆಯರ ಆರೋಗ್ಯಕ್ಕೆ 8 ಆಹಾರವನ್ನು ತಿನ್ನಬೇಕು
ದೆಹಲಿ , ಬುಧವಾರ, 3 ಆಗಸ್ಟ್ 2016 (10:23 IST)
ಅಗತ್ಯವಾದ ಆಹಾರಗಳನ್ನು ಮಹಿಳೆಯರು ತಿನ್ನಬೇಕು. ಮಹಿಳೆಯರು ತಮ್ಮ ಕಾಯಿಲೆಗಳನ್ನು ತಡೆಯಲು ಈ 8 ಆರೋಗ್ಯಕರ ಆಹಾರಗಳನ್ನು ತೆಗೆದುಕೊಳ್ಳಬೇಕು. ಮಹಿಳೆಯರು ಆಹಾರ ವಿಷ್ಯದಲ್ಲಿ ಆರೋಗ್ಯದ ಕಡೆಗೆ ಗಮನ ಕೊಡುವುದು ಕಡಿಮೆ. ಪ್ರತಿ ಮಹಿಳೆ ಅವಳ ಊಟದಲ್ಲಿ ಇಂಥ ಆಹಾರಗಳು ಒಳಗೊಂಡಿರಬೇಕು.
ನಿಮ್ಮ ಆರೋಗ್ಯದಲ್ಲಿ ಕ್ಯಾಲೋರಿ ಅಂಶ ಹಾಗೂ ಷೋಶಕಾಂಶಗಳನ್ನು ಸಮ ಪ್ರಮಾಣದಲ್ಲಿ ಇಟ್ಟುಕೊಳ್ಳುವುದರಿಂದ ಮುಂದೆ ಬರುವಂತಹ ಕಾಯಿಲೆ ಹಾಗೂ ವಯಸ್ಸಾಗುವಿಕೆಯಲ್ಲಿ ಕಾಡುವ ಸಮಸ್ಯೆಗಳನ್ನು ದೂರವಿಟ್ಟುಕೊಳ್ಳಬಹುದು.
 
ನಾರಿನ ಅಂಶವಿರುವ ಬೀಜಗಳು..
ಪ್ರತಿಯೊಬ್ಬ ಮಹಿಳೆ ಆಹಾರದಲ್ಲಿ ನಾರಿನಂಶದಿಂದ ಕೂಡಿರುವಂತಹ ಆಹಾರವನ್ನು ಸೇವಿಸಬೇಕು. ಮಹಿಳೆಯರ ಆರೋಗ್ಯ ಕಾಪಾಡುವಲ್ಲಿ ನಾರಿನಾಂಶ ವಿರುವ ಬೀಜಗಳು ಸಹಾಯಕಾರಿಯಾಗಬಲ್ಲವು. ಹೃದಯ ಕಾಯಿಲೆ-ಸ್ತನ ಕ್ಯಾನ್ಸರ್ ಅಪಾಯವನ್ನು ತಡೆಗಟ್ಟುತ್ತವೆ. ಜೀರ್ಣಶಕ್ತಿ, ಸಂಧಿವಾತ ಹಾಗೂ ಉರಿಯೂತದ ಕಾಯಿಲೆಗಳನ್ನು ನಿಯಂತ್ರಿಸುತ್ತವೆ.
 
ಎಳೆಗೆಪ್ಪು ಮೀನು:
ಎಳೆಗೆಪ್ಪು ಮೀನು ಆರೋಗ್ಯಕ್ಕೆ ಉತ್ತಮ.. ದಪ್ಪ ಚರ್ಮವನ್ನು ಹೊಂದಿರು ಈ ಫಿಶ್ ಆರೋಗ್ಯಕ್ಕೂ ಹಾಗೂ ತೂಕಕ್ಕು ಸಮತೋಲನ ಕಾಯ್ದುಕೊಂಡು ಬರಲು ಇದು ಸಹಾಯ ಮಾಡುತ್ತದೆ. ಅಲ್ಲದೇ ಎಣ್ಣೆಯುಕ್ತವಾದ ಈ ಮೀನು ಟ್ರೈಗ್ಲಿಸರೈಡ್‌ನ ಮಟ್ಟವನ್ನು ಕಡಿಮೆ ಮಾಡಬಹುದು.ಫಿಶ್ ಕಣ್ಣಿನ ಆರೋಗ್ಯಕ್ಕೆ ಉತ್ತಮ ಮೆಡಿಸನ್.. ಮಹಿಳೆಯರು ಈ ಆಹಾರವನ್ನು ನಿತ್ಯವು ಸೇವಿಸಬೇಕು.
 
ಕಡುಕೆಂಪು ಬಣ್ಣದ ಹಣ್ಣು
ಕಾರ್ನ್‌ಬೆರಿಸ್ ಹಣ್ಣುಗಳನ್ನು ಸೇವಿಸುವುದರಿಂದ ಮಹಿಳೆಯರ ಸ್ತನ ಕ್ಯಾನ್ಸರ್ ಹಾಗೂ ದೃದಯ ಸಮಸ್ಯೆಯನ್ನು ಈ ಹಣ್ಣು ನಿಯಂತ್ರಿಸುತ್ತದೆ. ಅಲ್ಲದೇ ಹಲವು ಸೋಂಕುಗಳನ್ನು ಇದು ತಡೆಗಟ್ಟಬಲ್ಲದ್ದು. ಇನ್ನೂ ಕಾರ್ನ್ ಬೆರಿ ಜ್ಯೂಸ್ ಸೇವಿಸಿದ್ರೆ ಮಹಿಳೆಯರ ಆರೋಗ್ಯಕ್ಕೆ ಉತ್ತಮ,.
 
ಬಸಳೆ ತರಕಾರಿ
ಬಸಳೆ ಸೊಪ್ಪನ್ನು ಮಹಿಳೆಯರು ಪ್ರತಿನಿತ್ಯ ಸೇವಿಸಬೇಕು. ಬಸಳೆ ಸೊಪ್ಪುನಲ್ಲಿ ವಿಟಾಮಿನ್, ಮಿನಿರಲ್ಸ್, ಮೆಗ್ನೇಶಿಯಂ ಇರುವುದರಿಂದ ನಿಮ್ಮ ದೈಹಿಕವಾಗಿ ಕಾಡುವ ಹಲವು ಕಾಯಿಲೆಗಳನ್ನು ನಿಯಂತ್ರಿಸಬಲ್ಲದ್ದು. ತೂಕ ನಿಯಂತ್ರಿಸುವಲ್ಲಿ ಈ ಸೊಪ್ಪು ಸಹಾಯ ಮಾಡುತ್ತದೆ. ಅಲ್ಲದೇ ಸ್ತನ ಊತವನ್ನು ಇದು ತಡೆಗಟ್ಟಬಲ್ಲದ್ದು. 
 
ವಾಲ್ನಟ್ಟ:
ಮೊದಲು ಮಹಿಳೆಯರಿಗೆ ವಾಲ್ನಟ್ಟ ತಿನ್ನಿ ಅಂತ ವೈದ್ಯರು ಸಲಹೆ ನೀಡುತ್ತಾರೆ. ಸ್ತನ ಕ್ಯಾನ್ಸರ್‌ ನಿವಾರಣೆಯ ಹಲವು ಅಂಶಗಳು ವಾಲ್ನಟ್ಟನಲ್ಲಿ ಇರುವುದರಿಂದ  ಅಲ್ಲದೇ ಮೂಳೆಗಳ ಆರೋಗ್ಯಕ್ಕೆ, ಮಹಿಳೆಯರು ಒತ್ತಡದಿಂದ ಬಳಲುತ್ತಿದ್ರೆ ವಾಲ್ನಟ್ಟ ತಿನ್ನಬೇಕು, ವಾಲ್ನಟ್ಟನಲ್ಲಿ ಕ್ಯಾಲ್ಸಿಯಂ, ಮೆಗ್ನೇಶಿಯಮ್, ಫಾಲಿಕ್ ಆಸಿಡ್‌ಗಳಿವೆ.ಲಭ್ಯವಿರುವ ಆರೋಗ್ಯಕ ಬೀಜಗಳಲ್ಲಿ ಇದು ಒಂದು.ಕೊಬ್ಬಿನ ಅಂಶವನ್ನು ತಗ್ಗಿಸಿ ತೂಕವನ್ನು ಕಡಿಮೆ ಮಾಡುವಲ್ಲಿ ನಟ್ಸ್ ಸಹಾಯಕಾರಿಯಾಗಿದೆ 
 
ಓಟ್ಸ್: 
ಮಹಿಳೆಯರ ಆರೋಗ್ಯಕ್ಕೆ ಓಟ್ಸ್ ಆರೋಗ್ಯಕ ಆಹಾರಗಳಲ್ಲಿ ಒಂದು. ಇದು ನಿಮ್ಮ ಆರೋಗ್ಯವನ್ನು ಹೆಚ್ಚಿಸುವಲ್ಲಿ ಹಾಗೂ ಹೆಲ್ತಿಯಾಗಿಡುವಲ್ಲಿ ಸಹಾಯಕಾರಿಯಾಗುತ್ತದೆ. ರಕ್ತದೋತ್ತಡ, ಜೀರ್ಣಶಕ್ತಿಗೆ, ಹೃದಯದ ಆರೋಗ್ಯಕ್ಕೆ ಓಟ್ಸ್ ಒಳ್ಳೆಯದು. ಕೊಬ್ಬನ್ನು ಸಮಪ್ರಮಾಣದಲ್ಲಿ ಕಾಪಾಡಲು ಓಟ್ಸ್ ಸಹಾಯ ಮಾಡುತ್ತದೆ. ತೂಕವನ್ನು ಇಳಿಕೆ ಮಾಡುವಲ್ಲಿ ಓಟ್ಸ್ ಮುಖ್ಯ ಪಾತ್ರವಹಿಸುತ್ತದೆ. 

ಹಾಲು: 
ಪ್ರತಿನಿತ್ಯ ಮಹಿಳೆಯರು ಹಾಲು ಸೇವಿಸಿದ್ರೆ ಅದು ನಿಮಗೆ ಎನರ್ಜಿ ಜತೆಗೆ ನಿತ್ಯದ ಕೆಲಸ ಕಾರ್ಯಗಳನ್ನು ಮಾಡುವಲ್ಲಿ ನಿಮಗೆ ಸಹಾಯಕಾರಿಯಾಗಬಲ್ಲದ್ದು, ಕ್ಯಾಲ್ಸಿಯಂ ಕೊರತೆ ಇರುವ ಮಹಿಳೆಯರು ಹಾಲು ಸೇವಿಸುವುದರ ತಮ್ಮ ಆರೋಗ್ಯದ ಕಾಳಜಿ ವಹಿಸಬೇಕು. ಹಾಲು ಯಾವುದೇ ವಯಸ್ಸಿನ ಮಹಿಳೆಯರು ತೆಗೆದುಕೊಳ್ಳಬಹುದಾಗಿದೆ. ಹಾಲು ಡಿ ಜೀವಸತ್ವವನ್ನು ಹೊಂದಿದೆ. 
 
ಟಮ್ಯಾಟೋ
ಉತ್ತಮ ಆರೋಗ್ಯಕ್ಕೆ ಟಮ್ಯಾಟೋ ಅಗತ್ಯ.. ಟಮ್ಯೋಟೋ ವಣದ್ರವ್ಯ, ಲೈಕೊಪೆನ್ ಎಂಬ ಅಂಶವಿರುವುದರಿಂದ ಇದು ಮಹಿಳೆಯರ ಸ್ತನ ಕ್ಯಾನ್ಸರ್‌ನ್ನು ತಡೆಯಲು ಸಹಾಯ ಮಾಡುತ್ತದೆ. ಅದಲ್ಲದೇ ಇದು ಹೃದಯ ಆರೋಗ್ಯಕ್ಕೂ ಉತ್ತಮವಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಕೊಬ್ಬು ಇಳಿಸುವ ಐದು ಆಹಾರಗಳು