Select Your Language

Notifications

webdunia
webdunia
webdunia
webdunia

ಉತ್ತಮ ಆರೋಗ್ಯಕ್ಕೆ ರಾಮಬಾಣ ಸರ್ವಕಾಲಿಕ ತರಕಾರಿ ಸೊಪ್ಪುಗಳು

ಉತ್ತಮ ಆರೋಗ್ಯಕ್ಕೆ ರಾಮಬಾಣ ಸರ್ವಕಾಲಿಕ ತರಕಾರಿ ಸೊಪ್ಪುಗಳು
, ಮಂಗಳವಾರ, 4 ಅಕ್ಟೋಬರ್ 2016 (14:39 IST)
ಬೇಸಿಗೆ ಬಂತೆಂದರೆ ಉಷ್ಣ ಪ್ರಕೃತಿಯವರ ಪಾಡು ಹೇಳಿ ತೀರದು. ಸೂಕ್ಷ್ಮ ದೇಹ ಪ್ರಕೃತಿಯ ಇಂತಹವರಿಗೆ ಎಲ್ಲಾ ಹವಾಮಾನ ಬದಲಾವಣೆಗಳಲ್ಲೂ ಶಾರೀರಿಕ ಅಸ್ವಾಸ್ಥ್ಯ ಅನುಭವಿಸುತ್ತಾರೆ. ಇವರಿಗೆ ಸೊಪ್ಪು ಚಿಗುರೆಲೆಗಳ ಮೇಲೋಗರ ಸಾಂತ್ವನ ನೀಡುತ್ತದೆ.
ವಿವಿಧ ಮರಗಳ ಚಿಗುರನ್ನು ಸಂಗ್ರಹಿಸಿ ನೀರು-ಚಟ್ನಿಯಾಗಿ ಅರೆದು ಬಳಸುವುದು ಬೇಸಗೆ ಕಾಲದಲ್ಲಿ ಆರೋಗ್ಯ ಸಂರಕ್ಷಣೆಗೆ ಉಪಯುಕ್ತ. ಪೇರಳೆ,ದಡಸೆ,ಮಾವು ಇತ್ಯಾದಿಗಳನ್ನು ತೆಂಗಿನ ತುರಿ, ಉಪ್ಪು ಇತ್ಯಾದಿಗಳನ್ನು ಸೇರಿಸಿ ಅರೆದು ತಯಾರಿಸುವ ಮೇಲೋಗರ ಅಧರಕ್ಕೂ ಉದರ್ಕೂ ಹಿತಕರವಾಗಿರುತ್ತದೆ.
 
ನೀರುಬೀಳುವ ಜವುಗು ನೆಲದಲ್ಲಿ ಸಮೃದ್ಧವಾಗಿ ಬೆಳೆಯುವ ಒಂದೆಲಗ (ತಿಮರೆ) ಗಿಡದ ಸಸ್ಯದ ಎಲೆ ಸಂಗ್ರಹಿಸಿ ನೀರು ಚಟ್ನಿಯಾಗಿ ಅರೆದು ಅನ್ನ , ದೋಸೆ ಇತ್ಯಾದಿಗಳಿಗೆ ಸೇರಿಕೆಯಾಗಿ ಸೇವಿಸುವುದು ಆಹಾರವೂ ಹೌದು ಔಷಧವೂ ಹೌದು. ಬೇಸಗೆಯಲ್ಲಿ ಒಂದೆಲಗ ನೀರು ಚೆಲ್ಲುವ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುತ್ತದೆ.
webdunia
ಇದೇ ರೀತಿ ಬಸಲೆ, ಹರಿವೆ ಇತ್ಯಾದಿ ಹಸುರೆಲೆಗಳೂ ಸೇರಿದಂತೆ ವಿವಿಧ ಸೊಪ್ಪು, ಚಿಗುರುಗಳನ್ನು ಸೇವಿಸುವುದರಿಂದ ಆಹಾರದ ರುಚಿಯೂ ಹೆಚ್ಚುತ್ತದೆ. ಆರೋಗ್ಯ ಸಂರಕ್ಷಣೆಯೂ ಆಗುತ್ತದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಕೇವಲ 5 ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಕ್ಲೀನ್ ಮಾಡಿಕೊಳ್ಳಿ