Select Your Language

Notifications

webdunia
webdunia
webdunia
webdunia

ಹೃದಯಾಘಾತ

ಹೃದಯಾಘಾತ
ಚೆನ್ನೈ , ಶನಿವಾರ, 22 ನವೆಂಬರ್ 2014 (11:29 IST)
ಹೃದಯಾಘಾತಗಳ ಬಗ್ಗೆ ಅತ್ಯಂತ ಮುಖ್ಯ ಮಾಹಿತಿಗಳನ್ನು ಪ್ರತಿಯೊಬ್ಬರೂ ತಿಳಿದಿರಬೇಕೆಂಬುದಕ್ಕೆ ಎರಡು ಕಾರಣಗಳಿವೆ.  ಮೊದಲನೆಯದಾಗಿ, ಜೀವಮಾನದ ಅವದಿಯಲ್ಲಿ ನಿಮಗೆ ಅಥವಾ ನಿಮ್ಮ ಪ್ರೀತಿಪಾತ್ರರಾದ ಯಾರಿಗಾದರೂ ಹೃದಯಾಘಾತದ ಸಂಭವನೀಯತೆ ಹೆಚ್ಚಿಗಿರುತ್ತದೆ. ಎರಡನೆಯದಾಗಿ, ನೀವು ಅಥವಾ ನಿಮ್ಮ ಪ್ರೀತಿಪಾತ್ರರು ಹೃದಯಾಘಾತದ ಅಪಾಯದಿಂದ ಪಾರಾಗಲು ನೀವು ಮತ್ತು ವೈದ್ಯರು ಮುಂಚಿನ ಕೆಲವು ಗಂಟೆಗಳಲ್ಲಿ ಏನು ಮಾಡುತ್ತೀರಿ ಎನ್ನುವುದರ ಮೇಲೆ ಅವಲಂಬಿಸಿದೆ.
 
ಹೃದಯಾಘಾತವೆಂದರೇನು?
ಕೊರೋನರಿ ರಕ್ತನಾಳದಲ್ಲಿ ರಕ್ತಪರಿಚಲನೆಗೆ ತಡೆಯುಂಟಾಗಿ ಹೃದಯದ ಸ್ನಾಯು ಸಾವಪ್ಪುವುದೇ ಹೃದಯಾಘಾತ. ಕೋರೋನರಿ ರಕ್ತನಾಳದಲ್ಲಿ ಹರಳು ಶೇಖರಣೆಯಾಗಿ ರಕ್ತವು ಹೆಪ್ಪುಗಟ್ಟಿ(ಬ್ಲಡ್‌ಕ್ಲಾಟ್) ರಕ್ತದ ಸರಾಗ ಹರಿವು ನಿಲ್ಲುತ್ತದೆ. ಹೃದಯದ ಸ್ನಾಯುವಿಗೆ  ರಕ್ತ ಸರಬರಾಜು ಆಗದಿದ್ದಾಗ ಅದಕ್ಕೆ ಆಮ್ಲಜನಕದ ಕೊರತೆ ಉಂಟಾಗುತ್ತದೆ. ರಕ್ತಚಲನೆ ಕೆಲವು ಗಂಟೆಗಳಲ್ಲಿ ಮರುಸ್ಥಾಪನೆ ಆಗದಿದ್ದರೆ ಹೃದಯದ ಸ್ನಾಯು ಸಾವಪ್ಪುತ್ತದೆ.
 
ಹೃದಯಾಘಾತ ಸಂಭವಿಸಿದ ಮೊದಲ 3-6 ಗಂಟೆಗಳು ಅತೀ ಗಂಭೀರ. ಮೊದಲಿಗೆ ತೀವ್ರ ಹೃದಯಾಘಾತ ಸಂಭವಿಸುವ ಕೆಲವು ಗಂಟೆಗಳ ಮುಂಚೆ ಹೃದಯಬಡಿತದ ಏರುಪೇರು  ಕಾಣಿಸಿಕೊಳ್ಳುತ್ತದೆ. ಹೃದಯಬಡಿತದ ಏರುಪೇರು ರೋಗಿಯು ವೈದ್ಯಕೀಯ ಆರೈಕೆಯಲ್ಲಿದ್ದಾಗ ಸಂಭವಿಸಿದರೆ ಸಕಾಲದಲ್ಲಿ ಅನಾಹುತ ತಪ್ಪಿಸಬಹುದು. 
 
ರಕ್ತನಾಳಕ್ಕೆ ತಡೆಯುಂಟಾದ ಕೆಲವು ಗಂಟೆಗಳಲ್ಲಿ ಸುಸೂತ್ರ ರಕ್ತಚಲನೆಗೆ ಅವಕಾಶ ಮಾಡಿದರೆ ಹೃದಯದ ಸ್ನಾಯುವನ್ನು ಉಳಿಸಬಹುದು ಮತ್ತು ಹೃದಯದ ಕಾಯಂ ಹಾನಿಯನ್ನು ತಪ್ಪಿಸಬಹುದು ಜತೆಗೆ ರೋಗಿಯ ಸಾವನ್ನು ಅಥವಾ ಕಾಯಂ ಅಂಗವೈಕಲ್ಯವನ್ನು ತಡೆಯಬಹುದು. ಆದರೆ ಚಿಕಿತ್ಸೆ 6 ಗಂಟೆಗಳಿಗಿಂತ ಹೆಚ್ಚು ಸಮಯ ವಿಳಂಬವಾದರೆ ಹೃದಯ ಸ್ನಾಯು ಉಳಿಸುವ ಸಂಭವನೀಯತೆ ಕುಂಠಿತಗೊಳ್ಲುತ್ತದೆ.
 
 ಇದರ ಅರ್ಥವೇನು? 
ಹೃದಯಾಘಾತ ಸಂಭವಿಸಿದ ವ್ಯಕ್ತಿಯು ಸ್ನಾಯು ಸೆಳೆತ ಅಥವಾ ಅಜೀರ್ಣದಿಂದ ನೋವು ಕಾಣಿಸಿರಬಹುದೆಂದು ನಿರ್ಲಕ್ಷಿಸಿದರೆ, ಅಥವಾ ಯಾವುದೇ ಕಾರಣಕ್ಕೆ ಚಿಕಿತ್ಸೆ ತಡಮಾಡಿದರೆ ಅದು ಹಾನಿಕರ ಅಥವಾ ಕಾಯಂ ವೈಕಲ್ಯವಾಗಿ ಉಳಿಯಬಹುದು.
 
ಹೃದಯಾಘಾತ ತಿಳಿಯುವುದು ಹೇಗೆ?
ಹೃದಯಾಘಾತದ ಲಕ್ಷಣಗಳು  ಎದೆಯಲ್ಲಿ ಕೆಲವು ಬಾರಿ ತೀವ್ರತರವಾದ ಒತ್ತಡ ಅಥವಾ ನೋವು ಜತೆಗೆ ಬೆವರುವುದು ಹಾಗೂ ಭೀತಿಯ ಭಾವನೆ, ಏನೋ ಅನಾಹುತ ಸಂಭವಿಸುವ ತಳಮಳ. ದುರದೃಷ್ಟವಶಾತ್, ಅನೇಕ ರೋಗಿಗಳಿಗೆ ಇವುಗಳ ಲಕ್ಷಣಗಳೂ ಇರುವುದಿಲ್ಲ. ಅವರಿಗೆ ವಾಂತಿ, ವಾಕರಿಕೆ ಅಥವಾ ಎದೆಉರಿಯ ಭಾವನೆ ಉಂಟಾಗುತ್ತದೆ. ಇದರಿಂದ ಹೃದಯದ ಸಮಸ್ಯೆ ಉಂಟಾಗಿದೆಯೆಂಬ ಅರಿವೂ ರೋಗಿಗಿಲ್ಲದೇ ವೈದ್ಯಕೀಯ ಚಿಕಿತ್ಸೆಯಿಂದ ದೂರವೇ ಉಳಿಯುತ್ತಾರೆ.
 
ಕೊರೋನರಿ ರಕ್ತನಾಳದ ಅಪಾಯದ ಅಂಶಗಳಿರುವ ಜನರು ಎದೆಯ ಎಡಭಾಗದಲ್ಲಿ ಯಾವುದೇ ಅಸಹಜ ಲಕ್ಷಣಗಳಿಗೆ ಸೂಕ್ಷ್ಮವಾಗಿ ಸ್ಪಂದಿಸಬೇಕು. ಉದಾಹರಣೆಗೆ ಯಾರೇ ಮಧ್ಯವಯಸ್ಕ ಅಥವಾ ಇಳಿವಯಸ್ಸಿನ ವ್ಯಕ್ತಿ ಧೂಮಪಾನಿಯಾಗಿದ್ದರೆ, ಮಧುಮೇಹಿ, ಸ್ಥೂಲದೇಹಿಯಾಗಿದ್ದು ಅತ್ಯಧಿಕ ಕೊಲೆಸ್ಟರಾಲ್ ಹೊಂದಿದ್ದರೆ, ಅಥವಾ ಸದಾ ಕುಳಿತಿರುವ ವೃತ್ತಿ, ಪ್ರವೃತ್ತಿಯಿದ್ದರೆ ಆಂತಹ ಜನರಿಗೆ ಈ ಎಚ್ಚರಿಕೆ ಅನ್ವಯಿಸುತ್ತದೆ.
 
ಇಂತಹ ಲಕ್ಷಣಗಳ ಅನುಭವವಾದಾಗ, ವಿಶೇಷವಾಗಿ ಕೊರೋನರಿ ರಕ್ತನಾಳಗಳ ವ್ಯಾಧಿಗೆ ರಿಸ್ಕ್ ಅಂಶಗಳು ಹೆಚ್ಚಿಗೆ ಇದೆಯೆಂದು ಭಾವಿಸಿದ್ದರೆ ಸಾವನ್ನು  ಅಥವಾ ಅಂಗವೈಕಲ್ಯವನ್ನು ತಪ್ಪಿಸಿಕೊಳ್ಲುವ ಒಂದೇ ಉಪಾಯವೆಂದರೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಕೈಗೊಳ್ಲುವುದು. ಕೆಲವೇ ನಿಮಿಷಗಳಲ್ಲಿ ವೈದ್ಯರು ತಲುಪುವ ಸ್ಥಳದಲ್ಲಿ ನೀವಿದ್ದರೆ ಅವರಿಗೆ ಕರೆ ಕಳುಹಿಸಿ.ಆಸ್ಪತ್ರೆಗೆ ಯಾರಾದರೂ ವಾಹನದಲ್ಲಿ ತಕ್ಷಣವೇ ಕರೆದುಕೊಂಡು ಹೋಗುವುದಾದರೆ ಅದಕ್ಕೆ ಸಮ್ಮತಿಸಿ.
 
 ಹೃದಯಾಘಾತವಾಗಿದ್ದರೆ ಒಂದೊಂದು ನಿಮಿಷವೂ ಅಮೂಲ್ಯ. ವೈದ್ಯರಿಗಾಗಿ ಕಾಯುತ್ತಿದ್ದರೆ ಅಥವಾ ಆಸ್ಪತ್ರೆಯತ್ತ ಪ್ರಯಾಣಿಸುತ್ತಿದ್ದರೆ ಆಸ್ಪಿರಿನ್ ತೆಗೆದುಕೊಳ್ಲುವುದು ಒಳ್ಳೆಯದು.
 
 ವೈದ್ಯಕೀಯ ಸಿಬ್ಬಂದಿ ಯಾವ ತುರ್ತು ಕ್ರಮ ಕೈಗೊಳ್ಳಬೇಕು?
ಅವರು ಹೃದಯಾಘಾತದ ಲಕ್ಷಣಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ.  ತುರ್ತು ಘಟಕದಲ್ಲಿ ನಿಮ್ಮ ವಿಮಾ ಮಾಹಿತಿಗಳನ್ನು ನೀಡಲು ಗಮ್ ಅಗಿಯುವ ಗುಮಾಸ್ತನಿಗಾಗಿ 2 ಗಂಟೆಗಳವರೆಗೆ ಕಾಯುತ್ತಾ ಕುಳಿತುಕೊಳ್ಳಲು ಇದು ಸಮಯವಲ್ಲ. ನಿಮ್ಮನ್ನು ತಕ್ಷಣವೇ ಚಿಕಿತ್ಸೆ ಕೋಣೆಯಲ್ಲಿ ಇರಿಸಿ, ಹೃದಯದ ಮಾನಿಟರ್ ಅಳವಡಿಸಿ, ಐ.ವಿ. ಆರಂಭಿಸುವುದರ ಜತೆಗೆ ಆಮ್ಲಜನಕ ನೀಡಿ ಇಸಿಜಿ, ರಕ್ತಪರೀಕ್ಷೆ ಮಾಡುವುದಕ್ಕೆ ಈಗ ಸಮಯ. ಹೃದಯಬಡಿತವನ್ನು ಪರೀಕ್ಷಿಸಿ ನಿಮ್ಮ ನೋವಿನ ಲಕ್ಷಣಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲು ಈಗ ಸಕಾಲ. ತುರ್ತು ವೈದ್ಯಕೀಯ ಸಿಬ್ಬಂದಿಯ ಸೂಕ್ತ ಪ್ರತಿಕ್ರಿಯೆಗೆ ನೀವು "ನನಗೆ ಹೃದಯಾಘಾತವಾಗಿರಬಹುದು" ಎಂಬ ಮ್ಯಾಜಿಕ್ ಪದಗಳನ್ನು ಹೇಳಲೇಬೇಕು"
 
ನಿಮ್ಮ ಭುಜದ ನೋವಿನಿಂದ ನೀವು ಅಲ್ಲೀದ್ದೀರೆಂದು ಹೇಳಬೇಡಿ. ಅಥವಾ ನಿಮಗೆ ಎದೆಯುರಿ ಅಥವಾ ನೀವು ಕಲ್ಪಿಸಿಕೊಂಡ ಯಾವುದೇ ಪರ್ಯಾಯ ಸಾಧ್ಯತೆಯಿರಬಹುದೆಂದು ಹೇಳಬೇಡಿ."ಬಹುಶಃ ಇದು ಏನೂ ಆಗಿರಲಾರದು. ಇದನ್ನು ಸುಮ್ಮನೆ ದೊಡ್ಡ ವಿಷಯ ಮಾಡುವುದೇಕೆ? ಅದು ಹೃದಯದ ತೊಂದರೆಯಾಗಿದ್ದರೆ ಅವರೇ ಪತ್ತೆಹಚ್ಚುತ್ತಾರೆ ಎಂದು ಉದಾಸೀನ ಮನೋಭಾವ ತಾಳಿದರೆ ಅಮೂಲ್ಯ ನಿಮಿಷಗಳು ವ್ಯರ್ಥವಾಗಿ ನೀವು ಭಾರೀ ಬೆಲೆ ತೆರಬೇಕಾಗುತ್ತದೆ.
 
ತೀವ್ರ ಹೃದಯಾಘಾತಕ್ಕೆ ಪರಿಣಾಮಕಾರಿ ವೈದ್ಯಕೀಯ ಚಿಕಿತ್ಸೆಯ ವಿಳಂಬಕ್ಕೆ  ರೋಗಿಗಳು ಸಕಾಲದಲ್ಲಿ ವೈದ್ಯಕೀಯ ನೆರವು ಕೋರದಿರುವುದು ಕಾರಣವಾಗಿದೆ. ನಿಮಗೆ ಅಥವಾ ನಿಮ್ಮ ಪ್ರೀತಿಪಾತ್ರರಿಗೆ ಹೃದಯಾಘಾತದ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ವಿಶೇಷವಾಗಿ ನೀವು 40 ವಯೋಮಾನ ದಾಟಿದ್ದರೆ ಪೂರ್ಣ ಆರೋಗ್ಯಕರ ಜೀವನಶೈಲಿ ಅನುಸರಿಸಿರದಿದ್ದರೆ ಒಂದು ನಿಮಿಷವೂ ತಡಮಾಡಬೇಡಿ ವೈದ್ಯರಿಗೆ ಕರೆಕಳುಹಿಸಿ ಅಥವಾ ಸಮೀಪದ ಆಸ್ಪತ್ರೆಗೆ ಹೋಗಿ ನಿಮಗೆ ಬೇಕಾದ ಚಿಕಿತ್ಸೆ ಸಕಾಲದಲ್ಲಿ ಪಡೆಯಿರಿ.
 

Share this Story:

Follow Webdunia kannada