Select Your Language

Notifications

webdunia
webdunia
webdunia
webdunia

ಶೀತಕ್ಕೆ ಮದ್ದಾಗಲಿರುವ ಮೂಷಿಕ

ಶೀತಕ್ಕೆ ಮದ್ದಾಗಲಿರುವ ಮೂಷಿಕ
ಚೆನ್ನೈ , ಶನಿವಾರ, 22 ನವೆಂಬರ್ 2014 (12:26 IST)
ವೈದ್ಯಕೀಯ ರಂಗದಲ್ಲಿ ಭಾರೀ ಅಭಿವೃದ್ಧಿಯಾಗಿದ್ದೇವೆ ಎಂದು ಹೇಳುತ್ತಿದ್ದರೂ ಶೀತವೆಂಬ ತಣ್ಣಗಿನ ಕಾಯಿಲೆಗೆ ಸೂಕ್ತವಾದ ಔಷಧವನ್ನು ಈವರೆಗೆ ಕಂಡುಹಿಡಿಯಲಾಗಲಿಲ್ಲ ಎಂಬ ಕೊರಗು ವೈದ್ಯಲೋಕವನ್ನು ಆವರಿಸಿತ್ತು. ಇದಕ್ಕಾಗಿ ಹಲವು ಪ್ರಯತ್ನಗಳು ಮಾಡುತ್ತಿದ್ದರೂ ಯಶಸ್ವಿಯಾಗದಿರುವುದು ವಿಜ್ಞಾನಿಗಳಿಗೆ ದೊಡ್ಡ ಸವಾಲಾಗಿತ್ತು.
 
ಇದೀಗ ಶೀತದ ಸಹಿಸಲಸಾಧ್ಯ ಕಿರಿಕಿರಿಯನ್ನು ಅನುಭವಿಸುವ ಕಾಲ ದೂರವಾಗುವ ದಿನ ಸನಿಹವಾಗಿದೆ. ಯಾಕೆಂದರೆ, ಮಾನವ ದೇಹಕ್ಕೆ ತೊಂದರೆ ಮಾಡಬಲ್ಲ ಶೀತ ಉಂಟುಮಾಡಬಲ್ಲ 'ರಿನೋ ವೈರಸ್‌'ನ್ನು ತಡೆಯಬಲ್ಲ ಚಿಕಿತ್ಸೆಯ ಪೂರ್ವ ಪ್ರಯೋಗದಲ್ಲಿ ಯಶಸ್ವಿಯಾಗಿದ್ದೇವೆ ಎಂದು ಲಂಡನ್‌ನಲ್ಲಿರುವ ಇಂಪೀರಿಯಲ್ ಕಾಲೇಜಿನ ಸಂಶೋಧನಾ ತಂಡ ತಿಳಿಸಿದೆ. 
 
ಮೊದಲಾಗಿ ಶೀತಕ್ಕೆ ಯಾಕೆ ಮದ್ದು ಕಂಡುಹಿಡಿಯಲಾಗಲಿಲ್ಲ ಎನ್ನುವ ಕಡೆ ನೋಡೋಣ. ಇದಕ್ಕೂ ಕಾರಣವಿದೆ. ಈವರೆಗೆ ಶೀತ ಎಂಬ ಭೂತ ಬೆದರಿಸುತ್ತಿದ್ದು ಮಾನವ ಮತ್ತು ಚಿಂಪಾಂಜಿಗಳನ್ನು ಮಾತ್ರ. ಉಳಿದ ಯಾವುದೇ ಪ್ರಾಣಿಗಳಿಗೆ ಇದರ ಕಾಟ ಇರಲಿಲ್ಲ. 
 
ಈ ಕಾರಣದಿಂದಾಗಿ ಸಂಶೋಧಕರಿಗೆ ಶೀತಕ್ಕೆ ಕಾರಣವಾಗುವ ರಿನೋ ವೈರಸ್ ವಿರುದ್ಧ ಹೋರಾಡುವ ಮದ್ದನ್ನು ರೂಪಿಸಲು ಸಾಧ್ಯವಾಗಲಿಲ್ಲ. ಒಂದು ವೇಳೆ ರೂಪಿಸಿದರೆ ಯಾರ ಮೇಲೆ ಪ್ರಯೋಗಿಸುವುದು. ಮಾನವ ಮತ್ತು ಚಿಂಪಾಂಜಿಗಳ ಮೇಲೆ ಪ್ರಯೋಗಿಸುವಂತಿಲ್ಲ. ಉಳಿದ ಪ್ರಾಣಿಗಳಿಗೆ ಸೊಂಕೇ ತಗುಲದಿದ್ದರೆ ಮದ್ದನ್ನು ಪ್ರಯೋಗಿಸುವುದು ಹೇಗೆ?
 
ಇದಕ್ಕಾಗಿ ಹಲವು ವರ್ಷಗಳಿಂದ ಪ್ರಯೋಗ ಮುಂದುವರಿಸಿಕೊಂಡು ಬಂದಿದ್ದ ಇಂಪೀರಿಯಲ್ ಕಾಲೇಜಿನ ಸಂಶೋಧನಾ ತಂಡ, ಇಲಿಗಳ ದೇಹಕ್ಕೆ ಶೀತಕ್ಕೆ ಕಾರಣವಾಗಲಿರುವ ರಿನೋವೈರಸ್‌‌ನ್ನು ಏರಿಸಲು ಯಶಸ್ವಿಯಾಗಿದ್ದಾರೆ. ವೈರಸ್‌ಗಳನ್ನು ಯಶಸ್ವಿಯಾಗಿ ಏರಿಸಬಹುದು ಎನ್ನುವುದು ಪ್ರಯೋಗದ ಫಲವಾದರೆ, ಸೋಂಕು ತಗುಲಿರುವ ಇಲಿಗಳ ಮೂಲಕ  ರಿನೋವೈರಸ್ ವಿರುದ್ಧ ಹೋರಾಡುವ ಮದ್ದನ್ನು ಪ್ರಯೋಗಿಸಬಹುದು ಎನ್ನುವ ಶುಭ ಸುದ್ದಿಯನ್ನು ತಂಡ ನೀಡಿದೆ.
 
ಸಂಶೋಧನೆಯ ಕುರಿತಾಗಿ ಮುಖ್ಯ ಸಂಶೋಧಕ ಪ್ರೋ. ಸೆಬೆಸ್ಟಿಯನ್ ಜಾನ್‌ಸ್ಟನ್ ಅವರು, ಈವರೆಗೆ ಮಾನವ ಹೊರತು ಪಡಿಸಿ ಉಳಿದ ಪ್ರಾಣಿಗಳಿಗೆ ರಿನೋವೈರಸ್ ಸೋಂಕು ಹರಡಬಹುದು ಎಂಬುದನ್ನು ಪರೀಕ್ಷೆ ಮಾಡಲು ಸಾಧ್ಯವಾಗಿರಲಿಲ್ಲ. ಇದು ಸೋಂಕಿನ ವಿರುದ್ಧ ಮದ್ದು ಕಂಡು ಹಿಡಿಯಲು ದೊಡ್ಡ ತೊಡಕಾಗಿತ್ತು. ಈಗ ವಿಜ್ಞಾನಿಗಳು ಹೇಗೆ ಮಾನವನಲ್ಲದೆ ಪ್ರಾಣಿಗಳಿಗೂ ರಿನೋ ವೈರಸ್ ಸೇರಿಕೊಳ್ಳುತ್ತದೆ ಎಂದು ಕಂಡು ಹಿಡಿದಿದ್ದಾರೆ. ಇದು ಶೀತ ಬಾಧೆಗೆ ಪರಿಣಾಕಾರಿ ಔಷಧಿ ನೀಡಲು ಸಹಕಾರ ನೀಡುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. 
 
ಇಲಿಗಳ ಮೇಲೆ ರಿನೋ ವೈರಸನ್ನು ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ಮುಂದೆ ರಿನೋವೈರಸ್‌ನ್ನು ನಾಶ ಪಡಿಸುವ ಮದ್ದು ಕಂಡುಹಿಡಿಯಲು ಯಶಸ್ವಿಯಾಗುತ್ತಾರೆ. ಅಲ್ಲಿಗೆ ಹಲವು ವರ್ಷಗಳ ಜಟಿಲ ಸಮಸ್ಯೆಯೊಂದಕ್ಕೆ ಮುಕ್ತಿ ದೊರೆಯುತ್ತದೆ. ಈ ಕಾರಣದಿಂದಾಗಿಯೇ ನಾವು ಮೊದಲು ಶೀತಕ್ಕೆ ಮದ್ದಾಗಲಿರುವ ಮೂಷಿಕ ಎಂದು ಕರೆದು ಇಲಿಗಳನ್ನು ಮಾನವಮಿತ್ರನಂತೆ ಬಿಂಬಿಸಿದ್ದು.
 
ಔಷಧ ಕಂಡುಹಿಡಿಯಲು ಸಂಶೋಧಕರು ಯಶಸ್ವಿಯಾಗುವುದು ಖಂಡಿತಾ ಎನ್ನುವುದು ವೈದ್ಯಲೋಕದ ಭರವಸೆ. ಈ ರೀತಿ ಇಲಿಗಳ ಮೂಲಕ ಶೀತಕ್ಕೆ ಪರಿಣಾಮಕಾರಿ ಔಷಧ ಸಿದ್ದವಾದರೆ ಸಾಮಾನ್ಯರಿಗೆ ಮೂರು ನಾಲ್ಕು ದಿನ ಕಾಟ ನೀಡುವ ಮತ್ತು ಅಸ್ತಮಾ ರೋಗಿಗಳ ಪ್ರಾಣಕ್ಕೆ ಮಾರಕವಾಗಿರುವ  ಶೀತಕ್ಕೆ ಪರಿಣಾಮಕಾರಿ ಔಷಧಿಯೊಂದು ತಯಾರಾಗುತ್ತದೆ.

Share this Story:

Follow Webdunia kannada