Select Your Language

Notifications

webdunia
webdunia
webdunia
webdunia

ರಕ್ತದೊತ್ತಡ ಎಂಬ 'ಸೈಲೆಂಟ್ ಕಿಲ್ಲರ್'

ರಕ್ತದೊತ್ತಡ ಎಂಬ 'ಸೈಲೆಂಟ್ ಕಿಲ್ಲರ್'
ಚೆನ್ನೈ , ಶನಿವಾರ, 22 ನವೆಂಬರ್ 2014 (12:14 IST)
ಅಧಿಕ ರಕ್ತದೊತ್ತಡವು ಇದೀಗ ಜನಸಾಮಾನ್ಯರ ರೋಗವಾಗಿ ಪರಿವರ್ತಿತಗೊಂಡಿದ್ದು, ವಿಶ್ವದಲ್ಲಿ ಅಧಿಕ ರಕ್ತದೊತ್ತಡದ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಇದು ಮನುಷ್ಯನ ಪ್ರಾಣಕ್ಕೆ ಸಂಚಕಾರ ತರುವ ರೋಗಗಳಲ್ಲಿ ಮೊದಲ ಸ್ಥಾನ ಪಡೆಯುತ್ತದೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ.
 
ವರದಿಯ ಪ್ರಕಾರ, ಅಮೆರಿಕಾವೊಂದರಲ್ಲಿಯೇ 73 ದಶಲಕ್ಷ ಜನರು ಅಧಿಕ ರಕ್ತದೊತ್ತಡದಲ್ಲಿ ನರಳುತ್ತಿದ್ದು, ಹೆಚ್ಚಿನವರಿಗೆ ತಮಗೆ ರೋಗ ಇರುವ  ಕುರಿತು ಇನ್ನೂ ಅರಿವಿಲ್ಲ ಎಂದು ತಿಳಿಸಿದೆ.
 
ಸಾಮಾನ್ಯ ಭಾಷೆಯಲ್ಲಿ 'ಬಿಪಿ' ಎಂದು ಕರೆಯಲ್ಪಡುವ ಅಧಿಕ ರಕ್ತದೊತ್ತಡ ಪ್ರಕರಣಗಳು ಪ್ರಸ್ತುತ ಹೆಚ್ಚಾಗುತ್ತಿದ್ದು, ಕೆಲವರಿಗೆ ಇದು ತಿಳಿದಿದ್ದರೆ, ಇನ್ನೂ ಕೆಲವರಿಗೆ ರಕ್ತದೊತ್ತಡ ಇರುವುದು ತಿಳಿದಿಲ್ಲ. ಅಂತವರಿಗೆ ರಕ್ತದೊತ್ತಡ ಮಾರಕವಾಗುವುದಲ್ಲದೆ, ಮೌನ ಹಂತಕನಾಗಿ ಪರಿಣಮಿಸುತ್ತದೆ. ಇದು ಸಾವಿನ ಸಂಖ್ಯೆಯ ಸರಾಸರಿಗೆ 'ಬಿಪಿ'ಯ ಕೊಡುಗೆ ಅಪಾರವಾಗಿದೆ ಎಂದು ವರದಿ ವಿವರಿಸುತ್ತದೆ. 
 
ವರದಿಯಲ್ಲಿ ತಿಳಿಸಿರುವಂತೆ ಶೇ.90 ರಷ್ಟು ಜನ ರಕ್ತದೊತ್ತಡದ ಪರೀಕ್ಷೆಗೆ ಒಳಗಾಗಿರುತ್ತಾರೆ. ಆದರೆ ಈ ಸಂಖ್ಯೆಯಲ್ಲಿ ಸುಮಾರು ಕಾಲುಭಾಗದಷ್ಟು ಜನ ಸರಿಯಾದ ಔಷಧವನ್ನು ತೆಗೆದುಕೊಳ್ಳದೆ ನಿರ್ಲಕ್ಷಿಸುತ್ತಾರೆ.
 
'ಅಮೆರಿಕಾದಲ್ಲಿ ರಕ್ತದೊತ್ತಡಕ್ಕೆ ಧ್ಯಾನವೇ ಸುಲಭ ಮದ್ದು, ಆದರೆ ಹೆಚ್ಚಿನ ಪಾಲಿನ ಜನರು ಇದನ್ನೂ ಮಾಡುವುದಿಲ್ಲ' ಎಂಬುದು ಡ್ಯೂಕ್ ವಿಶ್ವವಿದ್ಯಾಲಯದ ಹೃದ್ರೋಗ ತಜ್ಞರಾದ ಕ್ರಿಸ್ಟೋಫರ್ ಗ್ರ್ಯಾಂಗರ್ ಅವರ ಅಭಿಪ್ರಾಯ.
 
ಸೈನ್ಸ್ ಡೈಲಿಯ ವರದಿ ಪ್ರಕಾರ, ರಕ್ತದೊತ್ತಡ ಇರುವ ರೋಗಿಗಳ ಕೆಲವು ಅಂಗಗಳಿಗೆ ಈಗಾಗಲೇ ಹಾನಿಯಾಗಿರುತ್ತದೆ. ಇದರಿಂದಾಗಿ ಕೆಲವು ರೋಗಿಗಳು ಆಸ್ಪತ್ರೆಯಲ್ಲಿಯೇ ಮರಣವನ್ನಪ್ಪುತ್ತಿದ್ದಾರೆ. ಉಳಿದ ರೋಗಿಗಳು ಸ್ವಲ್ಪ ಸಮಯ ಚಿಕಿತ್ಸೆ ಪಡೆದು ಸುಧಾರಿಸಿ ಮನೆಗೆ ತೆರಳಿ, ವೈದ್ಯರು ತಿಳಿಸಿರುವ ಔಷಧಿ ತೆಗೆದುಕೊಳ್ಳುತ್ತಾರೆ. ಆದರೆ ಶೇ.41 ಜನರು ಮೂರು ತಿಂಗಳೊಳಗೆ ಮರಳಿ ಆಸ್ಪತ್ರೆ ಸೇರುತ್ತಾರೆ.
 
ರಕ್ತದೊತ್ತಡ ಎಂಬುದು ಸಾಮಾನ್ಯ ರೋಗ. ಆದರೆ ನಾವು ಅದರ ಬಗ್ಗೆ ತಿಳಿದಿರುವುದು ಬಹಳ ಕಡಿಮೆಯಾಗಿದೆ. ಇದರಿಂದಾಗಿ ಇನ್ನೂ ಹೆಚ್ಚು ತಿಳಿಯುವ ಅಗತ್ಯವಿದೆ ಎಂದು ಗ್ರ್ಯಾಂಗರ್ ವಿವರಿಸುತ್ತಾರೆ.
 
ರಕ್ತದೊತ್ತಡ ರೋಗಿಗಳಲ್ಲಿನ ಆಕುಂಚನ ರಕ್ತದೊತ್ತಡವು ಕೆಲವೊಮ್ಮೆ 95 ಕ್ಕಿಂತ ಕೆಳಗಿಯುತ್ತಿದ್ದು, ಕೆಲವು ಬಾರಿ 135 ದಾಟುತ್ತದೆ. ಇದರಿಂದಾಗಿ ಮುಂದಿನ ಅವಧಿಯಲ್ಲಿ ಇದು ಸಾವಿಗೆ ಕಾರಣವಾಗುವ ದೊಡ್ಡ ರೋಗವಾಗಲಿದೆ ಎಂದು ಡ್ಯೂಕ್‌‌‌ನ ಅರಿವಳಿಕೆ ತಜ್ಞರು ಅಭಿಪ್ರಾಯಪಡುತ್ತಾರೆ. 
 
 

Share this Story:

Follow Webdunia kannada