Select Your Language

Notifications

webdunia
webdunia
webdunia
webdunia

ಮೆದಳನ್ನು ಆರೋಗ್ಯಕರವಾಗಿಸಿಕೊಳ್ಳಿ

ಮೆದಳನ್ನು ಆರೋಗ್ಯಕರವಾಗಿಸಿಕೊಳ್ಳಿ
ಮಾನವನ ಇಡೀ ಜೀವನದ ಕೀಲಿ ಕೈ ಇರುವುದು ಮೆದುಳಿನಲ್ಲಿ. ಮೆದುಳು ಮಾನವ ದೇಹವನ್ನು ನಿಯಂತ್ರಿಸುತ್ತದೆ. ನಮ್ಮ ದೇಹದ ಆರೋಗ್ಯವನ್ನು ನಾವು ಕಾಪಾಡಿಕೊಳ್ಳುವಂತೆಯೇ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದೂ ಅತ್ಯವಶ್ಯಕ. ಮೆದುಳು ಮತ್ತು ದೇಹವನ್ನು ಚೈತನ್ಯಶೀಲವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕಾದರೆ ಕೆಲವು ಟಿಪ್ಸ್‌ಗಳನ್ನು ಅನುಸರಿಸುವುದು ಅಗತ್ಯವಾಗಿದೆ.

ನೀವು ಮಾಡಬೇಕಿರುವುದು
ನಿಮ್ಮ ದೇಹಾರೋಗ್ಯ ರಕ್ಷಣೆಗೆ ನಿಯಮಿತವಾಗಿ ವ್ಯಾಯಾಮ ಮಾಡಿ. ಅದರ ಜತೆಗೆ ಮೆದುಳಿಗೆ ವ್ಯಾಯಾಮ ನೀಡಲು ಕ್ರಿಯಾಶೀಲ ಕಲಿಯುವಿಕೆಯಲ್ಲಿ ಜೀವಮಾನವಿಡೀ ನಿರತರಾಗಿ. ಹೊಸ, ಹೊಸ ಅನುಭವಗಳನ್ನು ಪಡೆಯಲು ಪ್ರಯತ್ನಿಸಿ. ಸ್ನೇಹಿತರು, ಕುಟುಂಬ ಮತ್ತು ಇತರ ಸಮುದಾಯದೊಂದಿಗೆ ಸಾಮಾಜಿಕವಾಗಿ ಪಾಲ್ಗೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಸದಾ ಸಕಾರಾತ್ಮಕ ಮನೋಭಾವ ಕಾಯ್ದುಕೊಂಡು ಜೀವನದ ಬಗ್ಗೆ ಸಮತೋಲಿತ ಪ್ರಜ್ಞೆ ಬೆಳೆಸಿಕೊಳ್ಳುವುದು ಉತ್ತಮ. ಮಾನಸಿಕ ಒತ್ತಡ ನಿರ್ವಹಣೆಗೆ ಕೆಲವು ಕ್ರಮಗಳನ್ನು ಕೈಗೊಳ್ಳುವುದು, ಸಂತುಲಿತ ಆಹಾರ ಸೇವನೆ, ಮೆದುಳಿಗೆ ಆರೋಗ್ಯಕರವಾದ ಆಹಾರ ಸೇವನೆ ಇವುಗಳಲ್ಲಿ ಮುಖ್ಯವಾಗಿದೆ. ಕೊಲೆಸ್ಟರಾಲ್ ಪ್ರಮಾಣ ಹೆಚ್ಚಿದ್ದರೆ ಅದನ್ನು ಇಳಿಸಿಕೊಳ್ಳಿ. ರಕ್ತದ ಗ್ಲುಕೋಸ್ ಮತ್ತು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡಿ. ಚೆನ್ನಾಗಿ ನಿದ್ರಿಸಿ. ಆರೋಗ್ಯದ ಸಮಸ್ಯೆಗಳಿಗೆ ಕೂಡಲೇ ಚಿಕಿತ್ಸೆ ಮತ್ತು ವೈದ್ಯರ ನೆರವು ಪಡೆಯಿರಿ.

ನೀವು ಮಾಡಲೇಬಾರದವುಗಳು
ಅತಿಯಾದ ಧೂಮಪಾನ, ಮಾದಕವಸ್ತು ಸೇವನೆ, ಮಾನಸಿಕ ಸ್ಥಿತಿಗತಿಯಲ್ಲಿನ ದಿಢೀರ್ ಬದಲಾವಣೆಯನ್ನು ಅಸಡ್ಡೆಮಾಡುವುದು, ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ವೈದ್ಯರಲ್ಲಿ ಹೋಗದಿರುವುದು, ಔಷಧಿಗಳ ಸೇವನೆಯಿಂದ ಮಾನಸಿಕ ನಿರ್ವಹಣೆಯ ಮೇಲೆ ದುಷ್ಪರಿಣಾಮ ಉಂಟಾದರೆ ನಿರ್ಲಕ್ಷ್ಯವಹಿಸುವುದು, ಮನೆಯಲ್ಲಿ ಒಂಟಿಯಾಗಿ ಕಾಲಕಳೆಯುವುದು ಇವುಗಳನ್ನು ಮಾಡಲೇಬೇಡಿ.

ಯಾವುದೇ ಹೊಸ ಕೆಲಸ ಮಾಡಲು ವಯಸ್ಸು ಮೀರಿಹೋಗಿದೆ ಎಂದು ಭಾವಿಸಲೇಬಾರದು. ನೀವು ಎಲ್ಲಾ ಕಾಲದಲ್ಲೂ ಎಲ್ಲಕ್ಕೂ ಅರ್ಹರು ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಿ. ಮೆದುಳಿನ ಆರೋಗ್ಯ ಕಾಪಾಡಲು ಮೇಲಿನ ಟಿಪ್ಸ್‌ಗಳನ್ನು ಅನುಸರಿಸಿದರೆ ಮನಸ್ಸಿನ ಆರೋಗ್ಯ ಸುಸ್ಥಿತಿಯಲ್ಲಿದ್ದು ಪರಿಣಾಮ ದೇಹದ ಆರೋಗ್ಯವೂ ತಾನೇತಾನಾಗಿ ಸುಧಾರಿಸುತ್ತದೆ.

Share this Story:

Follow Webdunia kannada