Select Your Language

Notifications

webdunia
webdunia
webdunia
webdunia

ಮೆಚ್ಯೂರಿಟಿಯಲ್ಲಿ ಪುರುಷರಿಗಿಂತ ಮಹಿಳೆಯರೆ ಮೇಲು

ಮೆಚ್ಯೂರಿಟಿಯಲ್ಲಿ ಪುರುಷರಿಗಿಂತ ಮಹಿಳೆಯರೆ ಮೇಲು
, ಗುರುವಾರ, 12 ಡಿಸೆಂಬರ್ 2013 (18:17 IST)
PR
ಬಾಲ್ಯದಲ್ಲಿ ಹುಡುಗಾಟ ಮಾಡುವುದು ಸಹಜ, ಆದರೆ ಮನುಷ್ಯ ದೊಡ್ಡವನಾಗುತ್ತಿದಂತೆ ಅವನಲ್ಲಿ ಪ್ರೌಢತೆ ಬಂದಿರುತ್ತದೆ. ಆದರೆ ಅಧ್ಯಯನವೊಂದರ ಪ್ರಕಾರ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಮೆಚ್ಯೂರಿಟಿ ಹೊಂದಿರುತ್ತಾರೆ. ಪುರುಷರಲ್ಲಿ ಮೆಚ್ಯೂರಿಟಿಯ ಅಭಾವವಿರುತ್ತದೆ.
.
ಪುರುಷರಿಗೆ 43 ವರ್ಷದಲ್ಲಿ ಮೆಚ್ಯೂರಿಟಿ ಬರುತ್ತದೆ ಆದರೆ ಮಹಿಳೆಯರಿಗೆ 11 ವರ್ಷ ಮೊದಲೆ ಮೆಚ್ಯೂರಿಟಿ ಬಂದಿರುತ್ತದೆ. ಬ್ರಿಟನ್‌‌ನ ನಿಕಲೋಡಿಯನ್‌‌ ಯುಕೆ ಅಧ್ಯಯನದ ಪ್ರಕಾರ ಈ ಮಾಹಿತಿ ಹೊರಬಂದಿದೆ . ಮಹಿಳೆಯರು 32 ವರ್ಷದಲ್ಲಿ ಪರಿಪಕ್ವತೆ ಹೊಂದಿರುತ್ತಾರೆ.

ಪುರುಷರು ಎಂದಿಗೂ ಬಾಲ್ಯದ ಹುಡುಗಾಟ ಬಿಡೋದಿಲ್ಲ ಇವರಿಗೆ ಮೆಚ್ಯೂರಿಟಿ ಅನ್ನುವುದೆ ಇಲ್ಲ ಎಂದು ಪ್ರತಿ 10 ಮಹಿಳೆಯರಲ್ಲಿ 8 ಜನ ಮಹಿಳೆಯರ ಅಭಿಪ್ರಾಯವಾಗಿತ್ತದೆ ಎಂದು ಅಧ್ಯಯನ ತಿಳಿಸಿದೆ.

ಪುರುಷರಿಗೆ ಫಾಸ್ಟ್‌ ಫುಡ್‌ ತಿನ್ನುವದು ಮತ್ತು ವಿಡಿಯೊ ಗೇಮ್‌ ಆಡುವುದು ಇಷ್ಟವಾಗಿರುತ್ತದೆ. ಇಲ್ಲಿಯೂ ಕೂಡ ಸಣ್ಣ ಮಕ್ಕಳ ತರಹ ಆಡುತ್ತಾರೆ.

ಜಗಳದ ನಂತರ ಮೌನವಾಗಿರುವುದು, ಟ್ರಾಫಿಕ್‌ ರೂಲ್ಸ್‌ ಮುರಿಯುವುದು, ಕೊಳಕು ಪದಗಳನ್ನು ಬಳಸಿ ಕಿಸಿಕಿಸಿ ನಗುವುದು .. ಇವೆಲ್ಲ ಪುರುಷರ ಅಭ್ಯಾಸಗಳಿರುತ್ತವೆ. ಇದರಿಂದ ಮಹಿಳೆಯರ ದೃಷ್ಟಿಯಲ್ಲಿ ಪುರುಷರು ಬಾಲಕರಂತೆ ಕಾಣುತ್ತಾರೆ .

Share this Story:

Follow Webdunia kannada