Select Your Language

Notifications

webdunia
webdunia
webdunia
webdunia

ಬಿಯರ್ ಸೇವನೆ ಹೃದಯಕ್ಕೆ ಒಳ್ಳೆಯದಂತೆ: ಸಂಶೋಧನೆ

ಬಿಯರ್ ಸೇವನೆ ಹೃದಯಕ್ಕೆ ಒಳ್ಳೆಯದಂತೆ: ಸಂಶೋಧನೆ
WD
ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ ಬಿಯರ್‌ ಸೇವನೆಯಿಂದ ಹೃದಯಕ್ಕೆ ಪೂರಕವಾಗಿದೆ ಎಂದು ಸಂಶೋಧನೆಯಿಂದ ಸಾಬೀತಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಬಿಯರ್‌ ಕೊಬ್ಬಿನಾಂಶದಿಂದ ಮುಕ್ತವಾಗಿದ್ದು ಪ್ರೋಟೀನ್‌ ಒಳಗೊಂಡಿರುವ ಬಿಯರ್‌ ಸೇವನೆಯಿಂದ ಕಾರ್ಬೋ ಹೈಡ್ರೇಟ್‌, ಪೊಟ್ಯಾಶಿಯಂ, ಮ್ಯಾಗ್ನೀಶಿಯಂ ಹಾಗೂ ಬಿ ವಿಟಮಿನ್‌ ಹಾಗೂ ಫೋಲಿಕ್‌ ಆಸಿಡ್‌ ದೊರೆಯುತ್ತದೆ ಹಾಗೂ ಅಮಿನೋ ಆಸಿಡ್‌ ಪ್ರಮಾಣ ಕಡಿಮೆಯಾಗುವ ಮೂಲಕ ಹೃದಯ ಬೇನೆ ಸಮಸ್ಯೆಗೆ ಕಡಿವಾಣ ಹಾಕಲಿದೆ ಎಂದು ಹೃದ್ರೋಗ ತಜ್ಞ ಡಾ. ಹಸ್‌ಮುಖ್‌ ರಾವತ್‌ ತಿಳಿಸಿದ್ದಾರೆ.

ರೆಡ್‌ವೈನ್‌ ಮಾದರಿಯಲ್ಲೇ ಬಿಯರ್‌ನಲ್ಲಿಯೂ ತೈಲ ಮತ್ತು ಕೊಬ್ಬಿನಂಶ ರಕ್ಷಕಗಳಿರುತ್ತವೆ. ಬಾರ್ಲಿ ಅಥವಾ ಮಾಲ್ಟನ್ನು ಬಿಸಿಮಾಡಿದಾಗ ಬಿಯರ್‌ಗೆ ಬಣ್ಣ ಮತ್ತು ವಾಸನೆಯನ್ನು ನೀಡುತ್ತದೆ ಎಂದು ಡಾ. ಹಸ್‌ಮುಖ್‌ ತಿಳಿಸಿದ್ದಾರೆ. ಬಿಯರ್‌ ಅಥವಾ ಕೆಂಪು ವೈನ್‌ನಲ್ಲಿರುವ ಅಂಶಗಳ ಕುರಿತು ನಡೆದ ಸರಣಿ ಸಂಶೋಧನೆಯಲ್ಲಿರುವ ಪೋಲಿಫೋನಿಕ್‌ ಕಾಂಪೋಂಡ್‌ಗಳು ಹೃದಯಾಘಾತವನ್ನು ತಡೆಗಟ್ಟುತ್ತವೆ ಎಂದು ಡಾ. ಹಸ್‌ಮುಖ್‌ ತಿಳಿಸಿದ್ದಾರೆ.

Share this Story:

Follow Webdunia kannada