Select Your Language

Notifications

webdunia
webdunia
webdunia
webdunia

ಕಮ್ಮಿ ಸಿಹಿತಿಂದು ಫಿಟ್ ಆಗಿರಿ!

ಕಮ್ಮಿ ಸಿಹಿತಿಂದು ಫಿಟ್ ಆಗಿರಿ!
WD
ಬೊಜ್ಜುಗಿಜ್ಜು ಇಲ್ಲದೆ, ಆಕರ್ಷಕ ಮೈಕಟ್ಟನ್ನು ನಿಮ್ಮದಾಗಿಸಿಕೊಳ್ಳಬೇಕಾದರೆ ಸಿಹಿತಿಂಡಿಯ ವಿಚಾರದಲ್ಲಿ ನೀವು ಬಾಯಿಕಟ್ಟುವುದು ಅತ್ಯವಶ್ಯ. ನಮ್ಮಲ್ಲಿ ಸಕ್ಕರೆ ಬಳಕೆಯ ಶೇಕಡಾವಾರು ಏರುತ್ತಾ ಹೋಗುತ್ತಿರುವಂತೆ ಒಬೆಸಿಟಿಯ ಶೇಕಡಾವಾರು ಸಹ ಏರುತ್ತಿದೆ.

"ಸ್ವಭಾವತಃ ಭಾರತೀಯರು ಸಿಹಿ ಪ್ರಿಯರು. ಎಲ್ಲಾ ಮನೆಗಳಲ್ಲೂ ಸಕ್ಕರೆಯು ಪ್ರಧಾನ ಅವಶ್ಯಕತೆಯಾಗಿದೆ. ಸಕ್ಕರೆಯ ಬಳಕೆಯು ವಾರ್ಷಿಕ ಶೇ.4ರಷ್ಟು ಹೆಚ್ಚುತ್ತಿದೆ. ಅಂತೆಯೇ ಬೊಜ್ಜಿನ ಸಮಸ್ಯೆಯೂ ಏರುತ್ತಿದೆ" ಎಂಬುದಾಗಿ ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆಯ ಮುಖ್ಯ ಡಯಟೀಶನ್ ರೇಖಾ ಶರ್ಮಾ ಹೇಳುತ್ತಾರೆ.

ಸಿಹಿತನದ ಅರಿತುಕೊಳ್ಳುವಿಕೆ ಮತ್ತು ನಿರ್ವಹಣೆಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಅವರು ದೈಹಿಕ ಚಟುವಟಿಕೆಯ ಕೊರತೆಯಿಂದ ಸಮಸ್ಯೆ ಉದ್ಭವಿಸುತ್ತದೆ ಎಂದು ಹೇಳಿದ್ದಾರೆ. ಇದಲ್ಲದೆ, ಕುಳಿತೇ ಕೆಲಸಮಾಡುವುದು, ಓಡಾಟಕ್ಕೆ ವಾಹನಗಳ ಅವಲಂಬನೆ ಹಾಗೂ ಅತಿಯಾದ ಸಿಹಿ ಹಾಗೂ ಕೊಬ್ಬಿನ ಪದಾರ್ಥಗಳ ಸೇವನೆಯೂ ಸಹ ಸಮಸ್ಯೆಗೆ ಕಾರಣ ಎಂದಿದ್ದಾರೆ.

ಅಮೆರಿಕ ಮೂಲದ ಎನ್‌ಜಿಓ ಈ ವಿಚಾರಸಂಕಿರಣವನ್ನು ಹಮ್ಮಿಕೊಂಡಿದ್ದು, ಭಾರತದಲ್ಲಿ ಸಿಹಿ ನಿರ್ವಣೆ ನೀತಿಯ ಅಗತ್ಯದ ಮೇಲೆ ಹೆಚ್ಚು ಒತ್ತು ನೀಡಲಾಯಿತು.

ಸಕ್ಕರೆ ಹಾಗೂ ಕೃತಕ ಸಿಹಿಯ ಕುರಿತು ವಿಶ್ವಾಸಾರ್ಹ ಮಾಹಿತಿ ನೀಡುವಿಕೆಯು ಗ್ರಾಹಕರಿಗೆ ಸಿಹಿ ನಿರ್ವಹಣೆಗೆ ಸಹಾಯ ಮಾಡಲಿದೆ ಎಂದು ಯೋಜನೆಯ ಸಂಸ್ಥಾಪಕ ಕೆ.ಡನ್ ಗಿಫರ್ಡ್ ಹೇಳುತ್ತಾರೆ.

Share this Story:

Follow Webdunia kannada