Select Your Language

Notifications

webdunia
webdunia
webdunia
webdunia

ನಾವ್ಯಾಕೆ ಸ್ಪರ್ಧಿಸಬಾರದು : ಪ್ರಶ್ನೆ ಎತ್ತಿರುವ ಲೈಂಗಿಕ ಅಲ್ಪಸಂಖ್ಯಾತರು

ನಾವ್ಯಾಕೆ ಸ್ಪರ್ಧಿಸಬಾರದು : ಪ್ರಶ್ನೆ ಎತ್ತಿರುವ ಲೈಂಗಿಕ ಅಲ್ಪಸಂಖ್ಯಾತರು
, ಶುಕ್ರವಾರ, 14 ಮಾರ್ಚ್ 2014 (17:07 IST)
PR
ನಾವ್ಯಾಕೆ ಸ್ಪರ್ಧಿಸಬಾರದು' ? ಎಂಬ ಪ್ರಶ್ನೆ ಲೈಂಗಿಕ ಅಲ್ಪಸಂಖ್ಯಾತರಿಗೆ ಸವಾಲಾಗಿ ಕಾಡುತಿದೆ. ಈ ಕುರಿತು ದನಿ ಎತ್ತಿರುವ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ಸದಸ್ಯರು ದೇಶದ ಎಲ್ಲ ರಾಜಕೀಯ ಪಕ್ಷಗಳನ್ನು ಉದ್ದೇಶಿಸಿ ಮಾತನಾಡುತ್ತ "ಯಾವ ಪಕ್ಷವು ಕೂಡ ನಮ್ಮನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುತ್ತಿಲ್ಲ. ನಮ್ಮನ್ನು ಕೇವಲ ಓಟ ಬ್ಯಾಂಕಾಗಿ ನೋಡಬೇಡಿ, ನಾವು ನಿಮ್ಮಂತೆ ಮನುಷ್ಯರು ಮತ್ತು ಬುದ್ಧಿವಂತರು "ಎಂದು ಹೇಳಿದ್ದಾರೆ.

ಸುದ್ದಿಸಂಸ್ಥೆಯೊಂದರ ಜತೆ ಮಾತನಾಡಿದ ಕರ್ನಾಟಕ ರಾಜ್ಯ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ಸಂಚಾಲಕರಾದ ಮಲ್ಲಪ್ಪ " ಪಕ್ಷಗಳು ನಮ್ಮ ಸಮುದಾಯದ ಅವಶ್ಯಕತೆಗಳನ್ನು ಸಹ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಬೇಕು. ನಾವು ಸರಿಯಾದ ವಸತಿ ಮತ್ತು ಉದ್ಯೋಗದ ಅವಕಾಶಗಳಿಂದ ವಂಚಿತರಾಗಿದ್ದೇವೆ. ಪ್ರತಿದಿನದಂತ್ಯದಲ್ಲಿ ವಾಸಕ್ಕೆ ಸ್ಥಳ ಹುಡುಕುತ್ತೇವೆ. ಹೊಸ ಪ್ರತಿನಿಧಿಗಳು ನಮ್ಮ ಕುರಿತು ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕಾದ ಅಗತ್ಯವಿದೆ ಪ್ರತಿ ತಾಲ್ಲೂಕಿನ ಸರಕಾರಿ ಕಛೇರಿಯಲ್ಲಿ ನಮ್ಮ ಸಮುದಾಯಕ್ಕೆ ಸೇರಿದ ಒಬ್ಬ ಉದ್ಯೋಗಿಯಾದರೂ ಇರಬೇಕು " ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ಅಧ್ಯಕ್ಷರಾದ ಮಂಜುಳಾ "ನಾನು ಕೋಲಾರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸುತ್ತೇನೆ. ಈ ಕುರಿತು ಸ್ನೇಹಿತರ ಜತೆ ಮತ್ತು ಸಂಬಂಧಿಕರ ಜತೆ ಚರ್ಚಿಸುತ್ತಿದ್ದೇನೆ " ಎಂದು ಹೇಳಿದ್ದಾರೆ

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಮಂಜುಳಾ 50,000 ಸದಸ್ಯರುಳ್ಳ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

ನಮ್ಮ ಸಮುದಾಯದ ಜನರು ಸಾರ್ವಜನಿಕ ವಲಯಗಳಲ್ಲಿ ಉದ್ಯೋಗ ಪಡೆಯುವಂತಾಗಬೇಕು ಮತ್ತು ನಮ್ಮ ಮಕ್ಕಳು ಮುಖ್ಯವಾಹಿನಿಯಲ್ಲಿ ಶಿಕ್ಷಣ ಪಡೆಯುವಂತಾಗಬೇಕು ಎಂಬ ಆಶಯ ಅವರದು.

ಅವರ ಒತ್ತಾಸೆಗಳು ಇಂತಿವೆ.

*ಲೈಂಗಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ವಿಷಯಗಳು ಸಂಸತ್ತಿನಲ್ಲಿ ಪ್ರಸ್ತಾಪಿಸಲ್ಪಡಬೇಕು.

* ಈ ಸಮುದಾಯಕ್ಕೆ ಸೇರಿದ ಕೈದಿಗಳಿಗೆ ಪ್ರತ್ಯೇಕ ಸೆಲ್ ನ್ನು ನೀಡಬೇಕು

* ಅವರ ವಿರುದ್ಧದ ತಾರತಮ್ಯ ಅಂತ್ಯಗೊಳಿಸಲು ಜಾಗೃತಿಯನ್ನು ಸೃಷ್ಟಿಸಬೇಕು

* ಐಪಿಸಿಯ 377 ವಿಭಾಗವನ್ನು ರದ್ದುಗೊಳಿಸಬೇಕು

Share this Story:

Follow Webdunia kannada