Select Your Language

Notifications

webdunia
webdunia
webdunia
webdunia

ಜೆಡಿಎಸ್‌ಗೆ ಗುಡ್‌ಬೈ ಹೇಳಿ ಬಿಜೆಪಿಗೆ ಸೇರಲಿರುವ ರಕ್ಷಿತಾ, ಪ್ರೇಮ್

ಜೆಡಿಎಸ್‌ಗೆ ಗುಡ್‌ಬೈ ಹೇಳಿ ಬಿಜೆಪಿಗೆ ಸೇರಲಿರುವ ರಕ್ಷಿತಾ, ಪ್ರೇಮ್
, ಶುಕ್ರವಾರ, 14 ಮಾರ್ಚ್ 2014 (17:48 IST)
PR
ಬೆಂಗಳೂರು: ನಟಿ ರಕ್ಷಿತಾ ಹಾಗೂ ರಕ್ಷಿತಾ ಪತಿ ನಿರ್ದೇಶಕ ಪ್ರೇಮ್ ಕೂಡ ಬಿಜೆಪಿ ಪಕ್ಷಕ್ಕೆ ಸೇರಲಿದ್ದಾರೆ. ರಕ್ಷಿತಾ ಜೆಡಿಎಸ್‌ಗೆ ಗುಡ್‌ಬೈ ಹೇಳಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಗೆ ಪ್ರೇಮ್ ಆಗಮಿಸಿದ್ದು, ಮಧ್ಯಾಹ್ನದ ವೇಳೆ ಅಧಿಕೃತವಾಗಿ ಬಿಜೆಪಿಗೆ ಸೇರಲಿದ್ದಾರೆ. ರಕ್ಷಿತಾ ಕೂಡ ಕಮಲ ಪಾಳೆಯಕ್ಕೆ ಸೇರಲಿದ್ದಾರೆ. ಬಿಜೆಪಿ ಮುಖಂಡ ಅಶೋಕ್ ಅವರು ಪ್ರೇಮ್ ಜತೆ ಮಾತುಕತೆ ನಡೆಸುತ್ತಿದ್ದಾರೆ.

ಜೆಡಿಎಸ್‌ನಿಂದ ರಕ್ಷಿತಾ ಟಿಕೆಟ್ ಬಯಸಿದ್ದರು. ಆದರೆ ಜೆಡಿಎಸ್ ಅವರಿಗೆ ಟಿಕೆಟ್ ಕೊಡಲು ನಿರಾಕರಿಸಿದ್ದರಿಂದ ರಕ್ಷಿತಾ ಜೆಡಿಎಸ್‌ಗೆ ಗುಡ್‌ಬೈ ಹೇಳಿದ್ದಾರೆ. ಹಲವಾರು ದಿನಗಳಿಂದ ಅಶೋಕ್ ಅವರೊಂದಿಗೆ ಪ್ರೇಮ್ ಸಂಪರ್ಕದಲ್ಲಿದ್ದರು.

Share this Story:

Follow Webdunia kannada