Webdunia - Bharat's app for daily news and videos

Install App

ರಾಜ್ಯಾದ್ಯಂತ ಗೌರಿ - ಗಣೇಶ ಹಬ್ಬದ ಸಂಭ್ರಮ

Webdunia
ಮಂಗಳವಾರ, 2 ಸೆಪ್ಟಂಬರ್ 2008 (13:38 IST)
NRB
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಂಗಳವಾರ ಗೌರಿ ಹಬ್ಬದ ಸಂಭ್ರಮ ಒಂದೆಡೆಯಾದರೆ, ಮತ್ತೊಂದೆಡೆ ಬುಧವಾರ ನಡೆಯಲಿರುವ ಗಣೇಶನ ಹಬ್ಬಕ್ಕೆ ಬೀದಿ-ಬೀದಿಗಳಲ್ಲಿ ಅಲಂಕಾರಗೊಂಡ ಗಣೇಶನ ಮೂರ್ತಿ ಖರೀದಿ ಭರಾಟೆ ನಡೆದಿದೆ.

ಹೆಣ್ಣುಮಕ್ಕಳು ತವರಿನ ನೆನಪಿಗೆ ಆಚರಿಸುವ ಹಬ್ಬ ಎನ್ನುವುದು ಸಂಪ್ರದಾಯದ ಮಾತು. ಹೆಣ್ಮಕ್ಕಳನ್ನು ತವರಿನತ್ತ ಆಕರ್ಷಿಸುವುದರೊಂದಿಗೆ ತಾಯಿ-ಮಗಳು ಇಬ್ಬರು ಪರಸ್ಪರ ಕಾಣುವ, ಬಾಗಿನ ಕೊಡುವ ತವಕ. ಅಲ್ಲದೆ, ಈ ದಿನ ಕೆಲವರು ಸ್ವರ್ಣಗೌರಿ ವ್ರತ ಕೂಡ ಆಚರಿಸುತ್ತಾರೆ.

ಈ ಆಚರಣೆಯ ಪೌರಾಣಿಕ ಹಿನ್ನೆಲೆಯತ್ತ ಗಮನ ಹರಿಸಿದರೆ ಇದು ಪಾರ್ವತಿಯ ಕಥೆ. ಪರಮೇಶ್ವರನೊಂದಿಗೆ ವಿವಾಹವಾದ ಬಳಿಕ ಪಾರ್ವತಿ ತಂದೆ ಪರ್ವತರಾಜ, ಮಗಳನ್ನು ತವರಿಗೆ ಕರೆದುಕೊಂಡಲು ಬರುತ್ತಾನೆ. ಆದರೆ ಶಿವನಿಗಿದು ಇಷ್ಟವಿಲ್ಲ. ಆದರೂ ಶಂಕರ ಪತ್ನಿಯನ್ನು ಕಳುಹಿಸಲು ಒಪ್ಪುತ್ತಾನ ೆ
NRB
.

ಬಹಳ ದಿನಗಳಾದರೂ ಪಾರ್ವತಿ ಬರದಿದ್ದಾಗ, ಮಗ ಗಣೇಶನನ್ನು ಕಳುಹಿಸುತ್ತಾನೆ ಶಿವ. ಅಲ್ಲಿ ತದಿಗೆಯಂದು ತವರಿನಲ್ಲಿ ಗೌರಿಗೆ ಸಿಹಿಯೂಟವಾದರೆ, ತಿಂಡಿಪೋತ ಗಣೇಶನಿಗೂ ಮರುದಿನ ಮೃಷ್ಟಾನ್ನ ಭೋಜನ. ಬಳಿಕ ಪಂಚಮಿಯಂದು ಅಮ್ಮನೊಂದಿಗೆ ವಾಪಸ್ ಹೊರಡುತ್ತಾನೆ ಗಣೇಶ.

ಹಬ್ಬ ಹರಿದಿನಗಳನ್ನು ಆಚರಿಸುವುದರಲ್ಲಿ ಬೆಂಗಳೂರಿನ ಜನತೆ ಎತ್ತಿದ ಕೈ. ಬೆಳಗ್ಗಿನಿಂದಲೇ ಎಲ್ಲಾ ಮನೆಗಳಲ್ಲಿ ಗೌರಿ ಮೂರ್ತಿಯನ್ನಿಟ್ಟು ಪೂಜೆ ಮಾಡಿ ಭಕ್ಷ್ಯಗಳನ್ನಿಟ್ಟು ಸಂಭ್ರಮಿ ಸುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತದೆ. ಈ ನಡುವೆ ಹಣದುಬ್ಬರದ ಬಿಸಿ ಗೌರಿ-ಗಣೇಶ ಹಬ್ಬಕ್ಕೂ ತಟ್ಟಿದೆ.ಮುದ್ದು ಗೌರಿ ಮೂರ್ತಿಗಳ ಹಿಂದೆ ಸಾಲಾಗಿ ಕುಳಿತ ಗಣಪನ ವಿಗ್ರಹಗಳು ನಗರದ ಬೀದಿ ಬೀದಿಗಳಲ್ಲಿ ರಾರಾಜಿಸುತ್ತಿದೆ.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ತುಳಸಿ ಹಬ್ಬದಂದು ಈ ಸಮಸ್ಯೆ ಇರುವವರು ನೆಲ್ಲಿಕಾಯಿ ಇಟ್ಟು ದೀಪ ಹಚ್ಚಬೇಕು

ದೀಪಾವಳಿ ಹಬ್ಬದ ಮುಹೂರ್ತ ಯಾವ ದಿನ, ಯಾವಾಗ ಇಲ್ಲಿದೆ ಡೀಟೈಲ್ಸ್

ದರೋಡೆಕೋರನಾಗಿದ್ದ ರತ್ನಾಕರ, ವಾಲ್ಮೀಕಿ ಮಹರ್ಷಿಯಾದ ರೋಚಕ ವಿಚಾರ ಇಲ್ಲಿದೆ

ಮಹಾಲಯ ಅಮವಾಸ್ಯೆಯಾದ ಇಂದು ಪಿತೃಗಳಿಗೆ ತರ್ಪಣ ನೀಡಬೇಕು ಯಾಕೆ ಗೊತ್ತಾ

ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಯಾವ ಸಮಯಕ್ಕೆ ಆಚರಿಸಬೇಕು

Show comments