Select Your Language

Notifications

webdunia
webdunia
webdunia
webdunia

ಫೆಂಗ್‌ಶುಯಿ: ಶುಭಕಾರಕ ಪ್ರಾಣಿಗಳ ಲಾಂಛನ

ಫೆಂಗ್‌ಶುಯಿ: ಶುಭಕಾರಕ ಪ್ರಾಣಿಗಳ ಲಾಂಛನ

ಇಳಯರಾಜ

ಫೆಂಗ್‌ ಶುಯಿ ಚೀನಿಯರು ನಂಬುವ ವಾಸ್ತುಶಾಸ್ತ್ರ. ಇದೀಗ ಇತರ ದೇಶಗಳಲ್ಲೂ ಜನಪ್ರಿಯವಾಗಿ ಬಳಕೆಯಾಗುತ್ತಿದೆ. ಮನೆ-ಕಚೇರಿ ಮುಂತಾದ ಆವಾಸ ಕಟ್ಟಡಗಳಲ್ಲಿ ಶುಭ ಲಾಂಚನಗಳನ್ನು ಅಳವಡಿಸಿ, ವಾತಾವರಣದಲ್ಲಿರುವ ಶುಭ ಶಕ್ತಿಗಳನ್ನು ಆಹ್ವಾನಿಸಿ, ಅಶುಭಕಾರಕಗಳನ್ನು ಹೊರಗಟ್ಟುವುದು ಈ ಆಚರಣೆಯ ಮುಖ್ಯ ಅಂಶ.

ಫೆಂಗ್‌ ಶುಯಿ ಅಂದರೆ ನೀರು ಮತ್ತು ಗಾಳಿಯನ್ನಾಧರಿತ ವಾಸ್ತು ನಿಯಂತ್ರಣ ಕ್ರಿಯೆಗಳು. ಭಾರತೀಯವಾದ ಪಂಚಭೂತ ತತ್ವ ಇದರಲ್ಲಿ ಸರಿಹೊಂದುತ್ತದೆ. ಫೆಂಗ್‌ ಶುಯಿಶಾಸ್ತ್ರ ಹೇಳುವಂತೆ ಭೂ-ದೃಶ್ಯ ಶಾಲೆಗಳಿಗೆ ಮಹತ್ವ ವಿದೆ. ಇದರಲ್ಲಿ ನಾಲ್ಕು ಸ್ವರ್ಗೀಯ ಪ್ರಾಣಿಗಳ ಲಾಂಛನ ಬಳಕೆಯಾಗುತ್ತದೆ. ಭೂ ದೃಶ್ಯ ಶಾಲೆಗಳಲ್ಲಿ ಕಟ್ಟಡಗಳ ಆಕಾರ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಆಕಾರವು ಶುಭ ಅಶುಭ ಫಲ ನೀಡುವುದು. ಇದನ್ನು ಫೆಂಗ್‌ ಶುಯಿಯಲ್ಲಿ ನಾಲ್ಕು ಸ್ವರ್ಗೀಯ ಪ್ರಾಣಿಗಳ ಸ್ವಭಾವವನ್ನು ಆಧಾರವಾಗಿರಿಸಿ ಜೋಡಿಸಲಾಗುವುದು.

ಪ್ರಸ್ತುತ ನಾಲ್ಕು ಪ್ರಾಣಿಗಳೆಂದರೆ- 1. ಡ್ರಾಗನ್‌. 2.ಹುಲಿ. 3.ಫಿನಿಕ್ಸ್‌ 4.ಆಮೆ. - ಈ ನಾಲ್ಕು ಪ್ರಾಣಿಗಳು ನಾಲ್ಕು ಬಣ್ಣಗಳನ್ನು ಹೊಂದಿದ್ದು ನಾಲ್ಕು ದಿಕ್ಕುಗಳಂತೆ ಕಾರ್ಯ ನಿರ್ವಹಿಸುತ್ತವೆ.

ಡ್ರಾಗನ್‌- ದಂತಕಥೆಯಿಂದ ಸೃಷ್ಟಿಯಾದ ಪ್ರಾಣಿಯಾಗಿದ್ದು, ಫೆಂಗ್‌ ಶುಯಿಯಲ್ಲಿ ಬಹುಮುಖ್ಯ ಪಾತ್ರ ಪಡೆದಿದೆ.ಹಸಿರು ಬಣ್ಣದಿಂದ ಕೂಡಿದ್ದು, ಎಡ ಭೂಭಾಗವನ್ನು ಹೊಂದಿರುತ್ತದೆ. ಸಮೃದ್ಧಿ- ಅಭಿವೃದ್ದಿಯ ಸಂಕೇತವಾಗಿರುವ ಈ ಪ್ರಾಣಿ ಶುಭ ಸಂಕೇತವಾಗಿರುತ್ತದೆ.ಕಟ್ಟಡದ ಎಡಭಾಗದಲ್ಲಿರಿಸಿ, ಇತರ ಪ್ರತೀಕಗಳಿಗಿಂತ ಎತ್ತರದಲ್ಲಿರಬೇಕು.

ಎರಡನೇ ಲಾಂಛನ- ಹುಲಿ. ಇದು ಬಿಳಿ ಬಣ್ಣದ್ದಾಗ್ದ್ದು ಭೂಭಾಗದ ಬಲಭಾಗದಲ್ಲಿ ಸ್ಥಾಪನೆಯಾಗಬೇಕಿದೆ. ಇದು ಹೆಣ್ಣು ಬಿಳಿ ಹುಲಿಯಾಗಿದ್ದು, ಗಂಡು ಡ್ರಾಗನ್‌ಗೆ ಜೊತೆಗಾತಿಯಾಗಿದೆ. ಇದು ರಕ್ಷಣಾ ಕಾರ್ಯ ಮಾಡುತ್ತಿದೆ. ಇದು ಡ್ರಾಗನ್‌ನಷ್ಟು ಶಕ್ತಿ ಹೊಂದಿರುವುದಿಲ್ಲ. ಪ್ರಾಚೀನ ಚೀನೀಯರ ನಂಬಿಕೆಯಂತೆ ಪರ್ವತದ ತಳ ಪ್ರದೇಶದಲ್ಲಿ ಡ್ರಾಗನ್‌ ಮತ್ತು ಹುಲಿಗಳು ವಾಸವಾಗಿದ್ದು, ಇವುಗಳು ಸಂಕೇತಿಸುವ ಭೂಭಾಗ ವಾಸಸ್ಥಳಕ್ಕೆ ಅತೀ ಯೋಗ್ಯವಾಗಿರುತ್ತದೆ. ಕುದುರೆಯ ಲಾಳದಲ್ಲೂ ಈ ರೂಪ ಸಂಕೇತವಾಗಿರುತ್ತದೆ.

ಮೂರನೆಯದಾಗಿ- ಆಮೆ. ಇದು ಕಪ್ಪು ಬಣ್ಣದ್ದಾಗಿದ್ದು, ಭೂಭಾಗದ ಹಿಂದೆ ಇರಿಸಿದರೆ, ಹಿಂಭಾಗದಿಂದ ರಕ್ಷಣೆ ನೀಡುವುದು. ಬಲಿಷ್ಠ ಚಿಪ್ಪಿನ ಪ್ರಾಣಿಯಾಗಿರುವುದರಿಂದ ದೃಢತೆ ಮತ್ತು ಬೆನ್ನೆಲುಬಿನಂತೆ ಆಧಾರ ನೀಡುವುದು. ನಾಲ್ಕನೆಯ ಪ್ರತೀಕ- ಫೀನಿಕ್ಸ್‌. ಇದು ಕೆಂಪು ಬಣ್ಣ ಹೊಂದಿದ್ದು, ನಿವೇಶನ ಮುಂಭಾಗದಲ್ಲಿ ಇರಿಸಬೇಕು. ಫೀನಿಕ್ಸ್‌ ತಾನು ಸುಟ್ಟ ಬೂದಿಯಿಂದಲೇ ಮರು ಹುಟ್ಟುಪಡೆಯುವುದೆಂಬ ನಂಬಿಕೆಯಿಂದಾಗಿ, ಇದನ್ನು ವಿಜಯದ, ಸದವಕಾಶಗಳ ಸಂಕೇತ ಬಳಸುತ್ತಾರೆ.

ಮನೆ ನಿರ್ಮಿಸುವಾಗ ಹಿಂಭಾಗದಲ್ಲಿ ಬೆಟ್ಟವಿದ್ದರೆ ಆಮೆಯನ್ನು ಚಿಪ್ಪಿನಂತೆ ರಕ್ಷಿಸುವುದು. ಮೆಮುಂದಿನ ಖಾಲಿ ಜಾಗದಲ್ಲಿ ಫೀನಿಕ್ಸ್‌ ಸಂಕೇತವು ಉತ್ತಮ ಸದವಕಾಶಗಳನ್ನು ಪ್ರತಿನಿಧಿಸುತ್ತದೆ. ಮನೆಯ ಎಡಭಾಗದಲ್ಲಿರುವ ಕಟ್ಟಡ ಮನೆಗಿಂತ ತಗ್ಗಿನಲ್ಲಿರಬೇಕು. ಇದು ಡ್ರಾಗನ್‌ ಪ್ರಾಣಿಯ ಸಂಕೇತಕ್ಕೆ ಪೂರಕವಾಗುತ್ತದೆ. ಬಲಗಡೆಯ ಕಟ್ಟಡವು ಮನೆಯ ಹಿಂದೆ ಹಾಗೂ ಎಡಗಡೆಯ ಕಟ್ಟಡಕ್ಕಿಂತ ಕಡಿಮೆ ಎತ್ತರದಲ್ಲಿರಬೇಕು. ಹುಲಿಯು ಅವಿತಿಟ್ಟು ರಕ್ಷಿಸುವಂತೆ ಇದಿರುತ್ತೆ. ಫೆಂಗು ಶ್ವೇ ಘ ಕುರಿತಪ ಮಾಹಿತಿ ನೀಡುವುದು.

(- ವಿಷ್ಣು ಭಾರದ್ವಾಜ್‌)

Share this Story:

Follow Webdunia kannada