Select Your Language

Notifications

webdunia
webdunia
webdunia
webdunia

ಫೆಂಗ್‌ಶುಯಿ ರಕ್ಷಣಾ ಸಂಕೇತಗಳು

ಫೆಂಗ್‌ಶುಯಿ ರಕ್ಷಣಾ ಸಂಕೇತಗಳು

ಇಳಯರಾಜ

ಅಶುಭಕಾರಕ ಶಕ್ತಿಗಳಿಂದ ಮನೆಯನ್ನು ರಕ್ಷಿಸಲು ಹಲವಾರು ನಿವಾರಣೋಪಾಯಗಳನ್ನು ಫೆಂಗುಶುಯಿ ತಿಳಿಸುತ್ತದೆ. ಇದರಲ್ಲಿ ಶುಭಶಕ್ತಿಗಳನ್ನು ಆಕರ್ಷಿಸಿ, ಅಶುಭ ಶಕ್ತಿಗಳನ್ನು ನಿಯಂತ್ರಿಸುವ ರಕ್ಷಣಾ ಸಂಕೇತಗಳಿಗೆ ಪ್ರಾಧಾನ್ಯವಿದೆ.

ರಕ್ಷಣಾ ಸಂಕೇತಗಳೆಂದರೆ- ಸಿಂಹಮಖದ ಶ್ವಾನಗಳು, ಕೊಳಲು, ಮೀನಿನತೊಟ್ಟಿ, ಹುಲಿಯ ಚಿತ್ರ, ಜೋಡಿ ಸಿಂಹಗಳು, ರಕ್ಷಾಬಂಧ, ಡ್ರ್ಯಾಗನ್ ನೀರುಕುದುರೆ, ಪಿರಮಿಡ್ ಬಿಲ್ಲೆಗಳು,ಚೀನೀ ನಾಣ್ಯಗಳು, ಆಮೆಗಳು ಇತ್ಯಾದಿ ವಿಗ್ರಹ ಹಾಗೂ ಭಿತ್ತಿಚಿತ್ರಗಳು ಲಭಿಸುತ್ತವೆ. ಇವುಗಳನ್ನು ಫೆಂಗ್ ಶುಯಿ ನಿರ್ದೇಶಿಸುವಂತೆ ನಿಗದಿತ ಜಾಗದಲ್ಲಿ ಇರಿಸಬೇಕು.

ಇದೇ ರೀತಿಯ ರಕ್ಷಣಾ ಸಲಕರಣೆಗಳಲ್ಲಿ ಕೊಡೆಗಳು,ಮುಳ್ಳುಗಿಡಗಳು, ಕುದುರೆಕಾಲಿನ ಲಾಳ,ನಗುವ ಬುದ್ಧ, ಪೊರಕೆ, ನಕ್ಷತ್ರದೇವತೆಗಳು, ಕನ್ನಡಿ, ಸ್ಪಟಿಕಗಳನ್ನೂ ಬಳಸುವುದು ರೂಢಿ. ಇವುಗಳು ಶುಭಕಾರಕ ಎಂಬುದಾಗಿ ನಂಬಲಾಗುತ್ತಿದೆ.

Share this Story:

Follow Webdunia kannada