Select Your Language

Notifications

webdunia
webdunia
webdunia
webdunia

ಗಾಳಿ ಗಂಟೆಗಳ ಶುಭಧ್ವನಿ

ಗಾಳಿ ಗಂಟೆಗಳ ಶುಭಧ್ವನಿ

ಇಳಯರಾಜ

ಫೆಂಗ್‌ ಶುಯಿ ಶಾಸ್ತ್ರದಲ್ಲಿ ಗಾಳಿಗಂಟೆಗಳ ಶುಭಕಾರಕ ಶಕ್ತಿಯ ಕುರಿತು ಮಾಹಿತಿ ನೀಡಲಾಗಿದೆ. ಗಾಳಿ ಗಂಟೆಗಳು ಕೊಳವೆಯಾಕಾರದಲ್ಲಿದ್ದು ಅವುಗಳನ್ನು ಮನೆ ಅಥವಾ ಕಚೇರಿಯೊಳಗೆ ನಿರದಿಷ್ಟ ಜಾಗದಲ್ಲಿ ತೂಗಿಸಲಾಗುತ್ತದೆ. ಗಾಳಿಗೆ ಅವುಗಳು ಹೊರಹೊಮ್ಮಿಸುವ ಧ್ವನಿ ಉತ್ತಮ ಗುಣಾಂಶ ಹೊಂದಿರುತ್ತವೆ.

ಮಣ್ಣು, ಲೋಹ ಅಥವಾ ಬಿದಿರಿನಂತಹ ಮರ ಕಟ್ಟಿಗೆಗಳಿಂದ ಅವುಗಳನ್ನು ನಿರ್ಮಿಸಲಾಗುತ್ತದೆ. ಇದು ಟೊಳ್ಳಾಗಿದ್ದು ಕೊಳವೆಯಾಕಾರದಲಿದ್ದು, ಗೊಂಚಲುಗಳಾಗಿ ಜೋಡಿಸಲಾಗಿರುತ್ತದೆ. ಈ ಗೊಂಚಲುಗಳು ಗಾಳಿಗೆ ಪರಸ್ಪರ ಸಂಘರ್ಷಿಸಿ ಪ್ರತಿಧ್ವನಿಸುತ್ತಿರುತ್ತವೆ. ಈ ಧ್ವನಿಯು ಮನೆಗೆ ಮಂಗಳವನ್ನುಂಟು ಮಾಡುತ್ತಿರುತ್ತವೆ ಎಂದು ನಂಬಲಾಗಿದೆ.

ಗಾಳಿ ಗಂಟೆಗಳನ್ನು ತೂಗು ಹಾಕಲಾದ ಮನೆಗಳಲ್ಲಿ ಶಾಂತಿ ಸಮಾಧಾನ ನೆಮ್ಮದಿಗಳು ಇರುತ್ತವೆ ಎಂದು ನಂಬಲಾಗಿದೆ. ಒಳಗೆ ಟೊಳ್ಳಾಗಿರುವ ಗಾಳಿ ಗಂಟೆಗಳಂತೆಯೇ ಕೊಳವೆಯೊಳಗೆ ತಿರುಳು ಇರುವಂತಹ ಗಾಳಿ ಗಂಟೆಯ ಗೊಂಚಲನ್ನು ಬಳಸಲಾಗುತ್ತಿದೆ. ಇದರಲ್ಲಿ 5 ಗಂಟೆಗಳಿರುತ್ತವೆ. ಇದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಫೆಂಗ್‌ ಶುಯಿ ತಿಳಿಸುತ್ತದೆ.

ಗಾಳಿ ಗಂಟೆಗಳನ್ನು ಸಾಮಾನ್ಯವಾಗಿ ಪೂರ್ವ, ಆಗ್ನೇಯ, ದಕ್ಷಿಣ ಭಾಗಗಳಲ್ಲಿ ತೂಗು ಹಾಕಲಾಗುತ್ತದೆ. ಇಂತಹ ಗಾಳಿಗಂಟೆಯ ಗೊಂಚಲುಗಳಲ್ಲಿ 9 , 4 ಅಥವಾ 3 ಕೊಳವೆಗಳಿರುತ್ತವೆ. ಆದರೆ 6 ಕೊಳವೆಗಳಿದ್ದರೆ ವಾಯುವ್ಯ ಅಥವಾ ಉತ್ತರ ಭಾಗದಲ್ಲಿ ತೂಗು ಹಾಕವುದು ಹಿತಕರ.

Share this Story:

Follow Webdunia kannada