Webdunia - Bharat's app for daily news and videos

Install App

ಸುಖ ನಿದ್ರೆಗಾಗಿ......

Webdunia
ರಶ್ಮಿ ಪೈ

ದೈನಂದಿನ ಜೀವನದಲ್ಲಿ ಸುಖ ನಿದ್ರೆಗಾಗಿ ಹಂಬಲಿಸದ ಯಾವುದೇ ಮನುಷ್ಯನಿರಲಾರ.ತನ್ನ ಮನೆಯೇ ಆತನಿಗೆ ಸುಖನಿದ್ರೆ ನೀಡುವ ತಾಣ.ಆದುದರಿಂದಲೇ ವಾಸ್ತಶಾಸ್ತ್ರವು ಮನೆಯಲ್ಲಿ ಅಡುಗೆ ಕೋಣೆಯ ನಂತರ ಮಲಗುವ ಕೋಣೆಗೆ ಅಧಿಕ ಪ್ರಾಶಸ್ತ್ಯವನ್ನು ನೀಡುತ್ತದೆ.ಸುಖ ನಿದ್ರೆಗಾಗಿ ವಾಸ್ತುಶಾಸ್ತ್ರವು ಮಲಗುವ ಕೋಣೆಯ ಅಳತೆ,ಸ್ಥಾನ,ಯಾವ ದಿಕ್ಕಿನಲ್ಲಿ ಮಲಗಬೇಕು, ಅಲ್ಲಿ ಯಾವುದೆಲ್ಲಾ ಇರಬಾರದು ಎಂಬುದರ ಬಗ್ಗೆ ತಕ್ಕ ಮಾಹಿತಿಯನ್ನು ನೀಡುತ್ತದೆ.

ಸುಖ ನಿದ್ರೆಗಾಗಿ ಮನೆಯ ಪ್ರಧಾನ ಮಲಗುವ ಕೋಣೆ ನೈಋತ್ಯ ಭಾಗದಲ್ಲಿರಬೇಕು.ಇದು ಅಸಾಧ್ಯವಾದಲ್ಲಿ ಈಶಾನ್ಯ ದಿಕ್ಕಿನಲ್ಲಿ ನಿರ್ಮಿಸಬಹುದು.ಮನೆಯ ಪ್ರಧಾನ ಮಲಗುವ ಕೋಣೆ ನೈಋತ್ಯ ದಿಕ್ಕಿನಲ್ಲಿ ನಿರ್ಮಿಸುವುದಾದರೆ ಆ ಭಾಗದಲ್ಲಿ ಅಡುಗೆ ಕೋಣೆ ನಿಷಿದ್ಧ.ರೋಗ ಚಿಕಿತ್ಸೆಗಾಗಿ ಮಲಗುವ ಕೋಣೆ ನಿರ್ಮಿಸುವಾಗ ಅದು ಈಶಾನ್ಯ ದಿಕ್ಕಿನಲ್ಲಿ ಆಗಬೇಕೆಂದು ಆಯುರ್ವೇದಾಚಾರ್ಯರಾದ ಚರಕ,ಸುಶ್ರುತರು ಹೇಳಿರುವರು.

ಇದರಿಂದಾಗಿ ಔಷಧಿ ಬೇಗನೆ ಫಲ ನೀಡುತ್ತದೆ ಎಂದು ಶಾಸ್ತ್ರದಲ್ಲಿ ಉಲ್ಲೇಖಿತವಾಗಿದೆ.ನಿದ್ರೆಗೆ ಭಂಗ ಬರುವಲ್ಲಿ ಮಲಗುವ ಕೋಣೆ ಸಾಧ್ಯವಿಲ್ಲ ಎಂದು ವರಾಹಿಮಿಹಿರನು "ಬೃಹದ್ ಸಂಹಿತ" ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ.ಇದರ ಬಗ್ಗೆ ವಿಜ್ಞಾನವು ಸುರಕ್ಷತೆ ಇದ್ದಲ್ಲಿ ಸುಖ ನಿದ್ದೆ ಎಂದು ವಿವರಣೆ ನೀಡುತ್ತದೆ.

ಮಲಗುವ ಕೋಣೆಯನ್ನು ಆಯ್ಕೆ ಮಾಡುವ ಮುನ್ನ ಇನ್ನಿತರ ಕೋಣೆಗಳಿಂದ ಅಂತರವಿರಿಸುವುದು ಬಹುಮುಖ್ಯ.ಅದರಲ್ಲಿ ಪ್ರಧಾನವಾಗಿ
1. ಮಲಗುವ ಕೋಣೆ ಸಂಗ್ರಹಗಾರದಿಂದ ಸಾಕಷ್ಟು ಅಂತರದಲ್ಲಿರಲಿ.ಇದರಿಂದಾಗಿ ಅಲರ್ಜಿ,ಅಸ್ತಮಾ ಮುಂತಾದ ರೋಗಗಳು ಬರುವ ಸಾಧ್ಯತೆ ಇದ್ದು ಕೀಟ, ಇಲಿ ಮೊದಲಾದವುಗಳಿಂದ ನಿದ್ರೆ ಭಂಗವಾಗಬಹುದು.

2. ದನದ ಹಟ್ಟಿ,ನಾಯಿ,ಕೋಳಿ ಮುಂತಾದವುಗಳ ಗೂಡಿನಿಂದ ಸಾಕಷ್ಟು ದೂರದಲ್ಲಿದ್ದರೆ ನುಸಿ,ಕ್ರಿಮಿಕೀಟ
, ವಾಸನೆ,ಅಲರ್ಜಿಗಳಿಂದ ದೂರ ಉಳಿಯಬಹುದು.

3. ಅಡುಗೆ ಕೋಣೆ ಸಾಕಷ್ಟು ದೂರದಲ್ಲಿದ್ದರೆ ಅಲ್ಲಿನ ಪಾತ್ರೆಗಳು,ಮಿಕ್ಸರ್‌,ಸ್ಟೌ ಮೊದಲಾದ ಯಂತ್ರಗಳ ಗದ್ದಲದಿಂದ ನಿದ್ದೆಗೆ ಭಂಗ ಉಂಟಾಗ ಬಹುದು.

4. ನಿಮ್ಮ ಮಲಗುವ ಕೋಣೆಯ ಹತ್ತಿರದಲ್ಲಿ ಯಾವುದೇ ಗಿಡಗಳಿರಬಾರದು ಯಾಕೆಂದರೆ ಕೆಲವೊಮ್ಮೆ ಅವುಗಳಿಂದಾಗ ಕೀಟ,ಉರಗಗಳು ಕೋಣೆಯೊಳಗೆ ಪ್ರವೇಶಿಸುವ ಸಾಧ್ಯತೆ ಇದೆ.ಗಿಡಗಳಲ್ಲಿ ಬಿದಿರು ಅತೀ ನಿಷಿದ್ದವಾದುದು ಎಂದು ಬಲ್ಲವರು ಹೇಳುತ್ತಾರೆ,ಆಯುರ್ವೇದದ ಪ್ರಕಾರ ಬಿದಿರು ಉಷ್ಣವರ್ಗದಲ್ಲಿ ಹೊಂದಿರುವ ಹುಲ್ಲಾಗಿದೆ.ಇದರ ಸಾಮಿಪ್ಯವು

ಮನುಷ್ಯನ ಶರೀರ ಹಾಗೂ ಮನಸ್ಸನ್ನು ಭಾಧಿಸುತ್ತದೆ ಎಂದು ಹೇಳಲಾಗಿದೆ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Show comments