Select Your Language

Notifications

webdunia
webdunia
webdunia
webdunia

ಚೀನೀ ವಾಸ್ತುವಿನಲ್ಲಿ ಪಾ-ಕುವಾ ಚೌಕಟ್ಟು

ಚೀನೀ ವಾಸ್ತುವಿನಲ್ಲಿ ಪಾ-ಕುವಾ ಚೌಕಟ್ಟು

ಇಳಯರಾಜ

ಪಾ-ಕುವಾ ಚೌಕಟ್ಟುಗಳು ಮತ್ತು ಲೋ-ಶು ಮ್ಯಾಜಿಕ್ ಚೌಕೋನ ಫೆಂಗ್ ಶುಯಿಯಲ್ಲಿ ಮಹತ್ವದ್ದಾಗಿವೆ. ಲೋಶು ಚೌ ಕೋನದಲ್ಲಿ 1 ರಿಂದ 9 ರವರೆಗೆ ಅಂಕಿಗಳಿರುತ್ತವೆ. ಪ್ರತಿಯೊಂದು ಅಂಕೆಯ ಬಳಕೆ ಒಂದು ಬಾರಿ ಮಾತ್ರ.

ಇವುಗಳನ್ನು ಉದ್ದ ಅಥವಾ ಅಡ್ಡ ಅಥವಾ ಮೂಲೆಯಿಂದ ಮೂಲೆಗೆ ಕೂಡಿಸಬಹುದು. ಆದರೆ ಅವುಗಳ ಉತ್ತರ ಮಾತ್ರ ಯಾವಾಗಲೂ 15 ಆಗಿರಬೇಕು. ಪಾ-ಕುವಾ ಎಂಬುದು ಜೀವನದ ಮಹತ್ವದ 8 ಆಕಾಂಕ್ಷೆಗಳನ್ನು ಹೊಂದಿರುವ ಚೌಕೋನವಾಗಿದೆ. ಒಂದು ಮನೆಯಲ್ಲಿ ಸಂಪತ್ತು, ವೃತ್ತಿ, ಪ್ರಸಿದ್ಧಿ, ಸಂತಾನ, ಹಿರಿಯರು, ಸಹಾಯಕರು, ಜ್ಞಾನ ಹಾಗೂ ವಿವಾಹ ಇತ್ಯಾದಿಗಳಿಗೆ ಸಂಬಂಧಿಸಿದ ಸ್ಥಳಗಳು ನಿರ್ದಿಷ್ಟವಾಗಿ ಎಲ್ಲಿವೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳಬಹುದು.

ಈ ಪಾಕುವಾ ಚೌಕಟ್ಟಿನ ಪ್ರಕಾರ ಪೂರ್ವದಲ್ಲಿ ಹಿರಿಯರು, ಆಗ್ನೇಯದಲ್ಲಿ ಸಂಪತ್ತು, ದಕ್ಷಿಣದಲ್ಲಿ ಪ್ರಸಿದ್ಧಿ, ನೈಋತ್ಯದಲ್ಲಿ ವಿವಾಹ, ಪಶ್ಚಿಮದಲ್ಲಿ ಸಂತಾನ ಅಥವಾ ಸೃಜನಶೀಲತೆ, ವಾಯುವ್ಯದಲ್ಲಿ ಸಹಾಯಕರು, ಮಿತ್ರರು, ಉತ್ತರ ದಿಕ್ಕಿನಲ್ಲಿ ಜಲ ಅಥವಾ ವೃತ್ತಿ ಹಾಗೂ ಈಶಾನ್ಯ ದಿಕ್ಕಿನಲ್ಲಿ ಜ್ಞಾನ ಅಥವಾ ಶಿಕ್ಷಣ ನೆಲೆಯಾಗಿರುತ್ತದೆ. ಇದರ ಅನುಸಾರವಾಗಿ ತಮ್ಮ ತಮ್ಮ ಮನೆಯ ಜತೆ ಹೋಲಿಕೆ ಮಾಡಿಕೊಂಡು ಯಾರು ಕೂಡ ಮನೆಯ ಮೌಲ್ಯಮಾಪನ ಮಾಡಬಹುದಾಗಿದೆ.(ಸಾಧಾರ)

Share this Story:

Follow Webdunia kannada