Select Your Language

Notifications

webdunia
webdunia
webdunia
webdunia

ಅಡುಗೆ ಮನೆಯಲ್ಲಿ ವಾಸ್ತುವಿನ್ಯಾಸ

ಅಡುಗೆ ಮನೆಯಲ್ಲಿ ವಾಸ್ತುವಿನ್ಯಾಸ

ಇಳಯರಾಜ

PTI
ಚೀನಿ ವಾಸ್ತು ಶಾಸ್ತ್ರ ಫೂಂಗ್‌ ಶ್ವೇ ಪ್ರಕಾರ ಅಡುಗೆ ಮನೆಯು ಯಾಂಗ್‌ ಶಕ್ತಿಯಿಂದ ಕೂಡಿರುತ್ತದೆ. ಅಡುಗೆ ಮನೆಯ ಸ್ಟೌ ಹಾಗೂ ಪಾತ್ರೆ ತೊಳೆಯುವ ವಾಶ್‌ ಬೇಸಿನ್‌ ಒಂದರ ಪಕ್ಕ ಇನ್ನೊಂದಿರ ಬಾರದು. ಇದರಿಂದ ಕುಟುಂಬದೊಳಗೆ ವೈಮನಸ್ಸುಂಟಾಗುವುದು.

ಸ್ಟೌ ಕುಟುಂಬದ ಸಂಪತ್ತನ್ನು ಪ್ರತಿನಿಧಿಸುವುದು. ಅಡುಗೆ ಮನೆಯಲ್ಲಿ ಅಗ್ನಿ ಮೂಲ ಧಾತುವಿಗೆ ಸೇರಿದ ವಸ್ತುಗಳನ್ನು ಇಡದಿರಿ. ಇದು ಆಕಸ್ಮಿಕ ಅಗ್ನಿ ಅನಾಹುತಕ್ಕೆ ಕಾರಣವಾಗುತ್ತದೆ. ಅಡುಗೆ ಮನೆಯ ಮೇಲೆ (ಮಹಡಿಯಲ್ಲಿ)ಪಾಯಿಖಾನೆಗಳು ಇರಕೂಡದು. ಇದರಿಂದ ಆಹಾರ ಕಲುಷಿತವಾಗುವುದು.

ಸ್ಟೌ ಇಡುವ ದಿಕ್ಕು ಹಾಗೂ ಅದನ್ನು ಪ್ರಾರಂಭ ಮಾಡುವ ಬುಗಡ್(ನಾಬ್‌), ದುಡಿಮೆಯಲ್ಲಿರುವ ಯಜಮಾನನ ಕ್ವಾ ಸಂಖ್ಯೆಗೆ ಅನುಗುಣವಾಗಿರಬೇಕು. ಆದರೆ ಅಡುಗೆ ಮನೆ ಶುಭ ಭಾಗದಲ್ಲಿರ ಬೇಕು. ಅಡುಗೆ ಮಾಡುವಾಗ ಯಾವ ವ್ಯಕ್ತಿ ಅಡುಗೆ ಮಾಡುತ್ತಿರುವರೊ ಅವರ ಬೆನ್ನು ಅಡುಗೆ ಮನೆಯ ಬಾಗಿಲಿಗೆ ಅಭಿಮುಖವಾಗಿರಬಾರದು. ಅಂದರೆ ಅಡುಗೆ ಮಾಡುವವರು ಅಡುಗೆ ಮನೆಗೆ ಬರುವ ವ್ಯಕ್ತಿಯನ್ನು ಕುತ್ತಿಗೆ ಹೊರಳಿಸದೇ ನೋಡುವಂತಿರಬೇಕು.

ಅಡುಗೆ ಮನೆಯ ಬಾಗಿಲಿಗೆ ಮುಖಮಾಡಿ ಅಡುಗೆಮಾಡಬೇಕು. ಅಡುಗೆ ಮನೆಯು ನಮ್ಮ ಶರೀರದ ಹೃದಯ ವಿದ್ದಂತೆ. ಇದು ನಮ್ಮ ಆರೋಗ್ಯವನ್ನು ಪ್ರತಿನಿಧಿಸುತ್ತದೆ. ಯಾವಾಗಲೂ ಅಡುಗೆ ಮಾಡುವ ಸ್ಟೌ, ಬರ್ನರನ್ನು, ಧೂಳು-ಜಿಗುಟು ಹಾಗೂ ನೀರಿನಿಂದ ಕೊಳಕಾಗದಂತೆ ನೋಡಿಕೊಳ್ಳಿ.

ಇದು ನಿಮ್ಮ ಆರೋಗ್ಯ ಹಾಗೂ ಅದೃಷ್ಟದ ಮೇಲೆ ಪರಿಣಾಮ ಬೀರುತ್ತದೆ. ಅಡುಗೆ ಮನೆಯಲ್ಲಿ ನೀರು ಅನಗತ್ಯ ಹರಿಯದಂತೆ ಲಕ್ಷ್ಯ ವಹಿಸಿರಿ. ನೀರು ಸಿರಿ- ಸಂಪತ್ತಿಗೆ ಪ್ರತೀಕವಾಗಿದೆ. ನಳದಲ್ಲಿ ನೀರು ಸೋರಿ ಹೋಗುತ್ತಿದ್ದರೆ ಬೇಗನೆ ದುರಸ್ಥಿ ಮಾಡಿರಿ.

(ವಿ. ಬಿ.)

Share this Story:

Follow Webdunia kannada