Select Your Language

Notifications

webdunia
webdunia
webdunia
webdunia

ಹೆಳವನಕಟ್ಟೆ ಗಿರಿಯಮ್ಮ

ಹೆಳವನಕಟ್ಟೆ ಗಿರಿಯಮ್ಮ

ಇಳಯರಾಜ

, ಬುಧವಾರ, 27 ಜೂನ್ 2007 (17:12 IST)
ಹರಿದಾಸ ಸಾಹಿತ್ಯ ರಚನೆಕಾರರಲ್ಲಿ ಹೆಳವನಕಟ್ಟೆ ಗಿರಿಯಮ್ಮ (ಸು 1750) ಮೊದಲನೆ ಕವಿಯಿತ್ರಿಯೆಂದು ಹೆಸರು ಪಡೆದಿದ್ದಾಳೆ. ಕರ್ನಾಟಕದ ಎಲ್ಲೆಡೆಯೂ ಪ್ರಸಿದ್ದಿ ಪಡೆದ ಈಕೆ ರಚಿಸಿರುವ ಕಿರ್ತನೆಗಳು ಭಕ್ತಿ ಭಾವಕ್ಕೆ ಹೆಸರು ಪಡೆದಿವೆ. ಹರಿದಾಸ ಸಾಹಿತ್ಯದಲ್ಲಿ ಈಕೆಗೆ ವಿಶಿಷ್ಟ ಸ್ಥಾನವನ್ನು ನೀಡಲಾಗಿದೆ.

ಗಿರಿಯಮ್ಮನ ತಂದೆ ತಾಯಿ ಭೀಷ್ಮಪ್ಪ ಜೋಯಿಸ್ ಮತ್ತು ತುಂಗಮ್ಮ ಭಾಗವತ್ ಸಂಪ್ರದಾಯಕ್ಕೆ ಸೇರಿದ ನಿಷ್ಟಾವಂತರು.ಏಕೈಕ ಪುತ್ರಿಯಾಗಿ ಜನಿಸಿದ ಗಿರಿಯಮ್ಮ ಭಗವಂತನ ಅನುಗ್ರಹದವಳು ಎಂದು ನಂಬಿಕೆ.ಚಿಕ್ಕಂದಿನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ಗಿರಿಯಮ್ಮ ಚಿಕ್ಕಪ್ಪನ ಪೋಷಣೆಯಲ್ಲಿ ಬೆಳೆದಳು.

ಮದುವೆಯ ವಯಸ್ಸಾಗುತ್ತಿದ್ದಂತೆ ಮಲೆಬೆನ್ನೂರಿನ (ದಾವಣಗೆರೆ ಜಿಲ್ಲೆ) ತಿಪ್ಪರಸ ಎಂಬುವರೊಂದಿಗೆ ವಿವಾಹ ನಡೆಯಿತು. ಆದರೆ ವೈವಾಹಿಕ ಜೀವನ ಆಕೆಗೆ ಹಿಡಿಸಲಿಲ್ಲ. ಭಗವಂತನ ಸೇವೆಗಾಗಿ ತಾನೆಂದು ನಿರ್ಧರಿಸಿ ಇದರಿಂದ ಪತಿಗೆ ಅನ್ಯಾಯವಾಗಬಾರದು ಎಂದು ತಾನೆ ಶ್ರದ್ದೆವಹಿಸಿ ಬೇರೊಂದು ವಧುವನ್ನು ನೋಡಿ ಆತನಿಗೆ ಮದುವೆ ಮಾಡಿದಳು. ಅನಂತರ ಸದಾ ಭಗವಂತನ ಚಿಂತನೆಯಲ್ಲಿ ನಿರತಳಾದಳು.

ಗಿರಿಯಮ್ಮನ ಕೊಡುಗೆ ಹರಿದಾಸ ಸಾಹಿತ್ಯಕ್ಕೆ ಅಪಾರ ಚಂದ್ರಹಾಸ ಕಥೆ, ಸೀತಾ ಕಲ್ಯಾಣ, ಉದ್ದಾಳಕನ ಕಥೆ ಆಕೆ ರಚಿಸಿರುವ ಖಂಡ ಕಾವ್ಯಗಳು. ಜೆಮಿನಿ ಭಾರತ ಕರ್ತೃ ಲಕ್ಷ್ಮೀಶನ ಶೈಲಿ ಅವಳ ಕಾವ್ಯಗಳಲ್ಲಿ ಎದ್ದು ಕಾಣುತ್ತದೆ. ಗಿರಿಯಮ್ಮನ ಕೃತಿಗಳು ಹೆಚ್ಚಾಗಿ ಪ್ರಚಾರವಾಗಿರುವುದು ಆಕೆಯ ಹಾಡುಗಳಲ್ಲಿ, ನಾಡಿನದ್ಯಾಂತ ಗಿರಿಯಮ್ಮ ರಚಿಸಿರುವ ಶಂಕರ ಗಂಡನ ಹಾಡು, ಬ್ರಹ್ಮ ಕೊರವಂಜಿ, ಕೃಷ್ಣ ಕೊರವಂಜಿ, ಲವಕುಶ ಕಾಳಗ, ಬಹಳ ಅಚ್ಚುಮೆಚ್ಚವಾಗಿವೆ.

ಈ ಹಾಡುಗಳು ವಿಶೇಷವಾಗಿ ಮಹಿಳೆಯರಲ್ಲಿ ಪ್ರಚಲಿತವಾಗಿವೆ. ಗಿರಿಯಮ್ಮ ರಚಿಸಿರುವ ಬಹುತೇಕ ಹಾಡುಗಳು ನಿತ್ಯ ನಿರ್ಮಲ ಪರಮಾನಂದ ಹೃದಯೇ ಎಂದು ಅಂತ್ಯಗೊಳ್ಳುತ್ತವೆ.ಸ್ವಂತ ಗ್ರಾಮವಾದ ಹರಿಹರ ತಾಲೂಕಿನ ಕೊಮಾರ ರಂಗಸ್ವಾಮಿ ಕುರಿತು ರಚಿಸಿರುವ ಭಕ್ತಿಗೀತೆಗಳು ಜನಮೆಚ್ಚುಗೆ ಪಡೆದಿವೆ.

ಈ ಕವಯಿತ್ರಿ ಜೀವನದಲ್ಲಿ ಅನೇಕ ಐತಿಹ್ಯಗಳು ಪ್ರಖ್ಯಾತವಾಗಿವೆ. ಪ್ರತಿದಿನವೂ ಶ್ರೀ ಹರಿಯ ದಶಾವತಾರಗಳನ್ನು ರಂಗವಲ್ಲಿ ಬಿಡಿಸುತ್ತಿದ್ದಳು ಎಂದು ಶ್ರೀ ಹರಿ ಪ್ರತ್ಯಕ್ಷನಾಗಿ ನರ್ತನ ಮಾಡುತ್ತಿದ್ದನಂತೆ, ಅದನ್ನು ನೋಡಿ ಭಾವಪರವಶಳಾಗಿ ಭಕ್ತಿ ಹಾಡುಗಳನ್ನು ರಚಿಸುತ್ತಿದ್ದಳು.

ಒಂದು ದಿನ ಮಂತ್ರಾಲಯದ ಸ್ವಾಮಿಜಿಯವರು ಒಮ್ಮೆ ಗಿರಿಯಮ್ಮನ ಗ್ರಾಮಕ್ಕೆ ಭೇಟಿ ನೀಡಿ ಮೂಲರಾಮದೇವರ ಪೂಜೆ ಮಾಡುತ್ತಿದ್ದ ಸಮಯದಲ್ಲಿ ಗಿರಿಯಮ್ಮನ ಭಾವಾವೇಶದ ಕಿರ್ತನೆಯಿಂದಾಗಿ ಆ ಊರ ಮುಖಂಡನ ಮಗನಿಗೆ ಕಣ್ಣು ಬಂದಿತು ಎಂದೂ, ಇದರಿಂದ ಸಂತೃಪ್ತನಾದ ನಾಯಕ ಹೇರಳವಾದ ಹೋನ್ನು ದಾನ ಮಾಡಿದನು ಅದನ್ನುಗಿರಿಯಮ್ಮ ದೇವಾಲಯ ಕಟ್ಟಿಸಲು ಬಳಸಿಕೊಂಡಳು.

ಕೊಮಾರನ ಹಳ್ಳಿಯ ಲಕ್ಷ್ಮೀ ರಂಗನಾಥ ಸ್ವಾಮಿಯ ರಥೋತ್ಸವದ ಸಂದರ್ಭದಲ್ಲಿ ಉತ್ಸವ ಮೂರ್ತಿಯ ಆಭರಣವೊಂದನ್ನು ಗುಬ್ಬಚ್ಚಿಯೊಂದು ಹಾರಿಸಿಕೊಂಡು ಹೋದಾಗ ಹೊನ್ನು ತಾ ಗುಬ್ಬಿ ಹೊನ್ನು ತಾ ಎಂದು ಭಕ್ತಿಯಿಂದ ಗಿರಿಯಮ್ಮ ಹಾಡಿದ್ದಕ್ಕೆ ಗುಬ್ಬಿ ಹಾರವನ್ನು ಮರಳಿ ಅದೇ ಸ್ಥಾನಕ್ಕೆ ತಂದು ಇಟ್ಟಿತಂತೆ. ಊರಿನಲ್ಲಿ ಕ್ಷಾಮ ತಲೆದೋರಿದ ಸಮಯದಲ್ಲಿ ದಯೆ ಮಾಡೊ ರಂಗ ನಿನ್ನ ಕರುಣೆ ಉಳಿಯದಿ ಲೋಕ ಎಂಬ ಕಿರ್ತನೆಯನ್ನು ಹಾಡಿದಳು ಎಂಬ ಐತಿಹ್ಯ ಪ್ರಚಲಿತದಲ್ಲಿದೆ.

ಹರಿದಾಸ ಸಾಹಿತ್ಯದಲ್ಲಿ ಹೆಳವನಕಟ್ಟೆ ಗಿರಿಯಮ್ಮನ ಸ್ಥಾನ ಚಿರಸ್ಥಾಯಿಯಾಗಿ ನಿಲ್ಲಲು ಇವೆಲ್ಲವೂ ಕಾರಣ.

(ಡಾ ವಿ ಗೋಪಾಲಕೃಷ್ಣ)

Share this Story:

Follow Webdunia kannada