Select Your Language

Notifications

webdunia
webdunia
webdunia
webdunia

ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್

ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್

ಇಳಯರಾಜ

ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತರಲ್ಲೊಬ್ಬರಾದ 'ಸಣ್ಣಕಥೆಗಳ ಜನಕ' ಎಂದೇ ಪ್ರಸಿದ್ಧರಾದ ಮಾಸ್ತಿ ವೆಂಕಟೇಶ ಅಯ್ಯಂಗಾರರು 'ಶ್ರೀನಿವಾಸ' ಎಂಬ ಕಾವ್ಯನಾಮದಿಂದ ಸುಪ್ರಸಿದ್ಧರಾಗಿದ್ದರು.

ಮೈಸೂರು ಮಹಾರಾಜರ ಕಾಲದಲ್ಲಿ ಅಧಿಕಾರದಲ್ಲಿದ್ದು, ಭಾರತ ಸ್ವತಂತ್ರವಾದ ಬಳಿಕ ಸಾರ್ವಜನಿಕ ಆಡಳಿತ ಸೇವೆಯ ದಕ್ಷ ಅಧಿಕಾರಿಯಾಗಿದ್ದರು. ಸರ್ಕಾರಿ ಸೇವೆಯಲ್ಲಿದ್ದರೂ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂಬ ಜನಪ್ರಿಯತೆ ಗಳಿಸಿದ್ದರು.ಕನ್ನಡ ಸಾಹಿತ್ಯ ಕ್ಷೇತ್ರದಲ್ಲಂತೂ 'ಮಾಸ್ತಿ ಕನ್ನಡದ ಆಸ್ತಿ' ಎಂಬ ನುಡಿಗಟ್ಟಿಗೆ ಪಾತ್ರರಾಗಿದ್ದರು.

ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ರಾಮಸ್ವಾಮಿ ಅಯ್ಯಂಗಾರ ಮತ್ತು ತಾಯಿ ತಿರುಮಲಮ್ಮ ದಂಪತಿಯ ಪುತ್ರರಾಗಿ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ 1891 ಜೂನ್‌ 6 ರಂದು ಜನಿಸಿದರು. ಹೊಂಗೇನ ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಮಾಸ್ತಿಯವರು , ವಾರಾನ್ನವುಂಡು ಸಂಕಷ್ಟಗಳ ನಡುವೆ ತಮ್ಮ ಪ್ರೌಢ ಶಾಲಾ ಶಿಕ್ಷಣವನ್ನು ನಡೆಸಿದರೂ ಪ್ರಥಮ ಶ್ರೇಣಿಯ ಉತ್ತೀರ್ಣತೆ ಪಡೆದರು. ಬಿಎ ಶಿಕ್ಷಣದ ಬಳಿಕ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು, ಬಳಿಕ ಎಂ.ಎ. ಪದವಿಯೊಂದಿಗೆ ಮದರಾಸು ಪ್ರೆಸಿಡೆನ್ಸಿ ಕಾಲೇಜಿನಲ್ಲಿಯೇ ಕೆಲಕಾಲ ಉಪಾಧ್ಯಾಯರಾಗಿದ್ದರು.

ಮೈಸೂರು ಮಹರಾಜರ ಕಾಲದಲ್ಲಿ ಆ ಸಂಸ್ಥಾದ ಆಡಳಿತ ಸೇವೆಯಲ್ಲಿ ಸಹಾಯಕ ಆಯುಕ್ತರಾಗಿ, ಹಿರಿಯ ಅಧಿಕಾರಿಯಾಗಿದ್ದರು. ಇವರಿಗೆ ಮೈಸೂರು ಅರಸರು 'ರಾಜಸೇವಾಸಕ್ತ' ಎಂಬ ಬಿರುದನ್ನು ನೀಡಿದರು. ಬ್ರಿಟಿಷ ಆಳ್ವಿಕೆಯಲ್ಲಿದ್ದರೂ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಆಡಳಿತವಿರಬೇಕೆಂದು ಗುರುತಿಸಿದರು.

ಮಾಸ್ತಿಯವರ ಪ್ರಮುಖ ಕೃತಿಗಳಲ್ಲೊಂದು 'ಚಿಕ್ಕ ವೀರ ರಾಜೇಂದ್ರ' ಕಾದಂಬರಿ. ಇನ್ನೊಂದು 'ಚೆನ್ನಬಸವ ನಾಯಕ', ರಾಜವಂಶಗಳ ಉನ್ನತಿ ಅವನತಿಗಳು ಇವುಗಳ ಕಾಥಾವಸ್ತು. ಚಿಕ್ಕವೀರ ರಾಜೇಂದ್ರ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ ಲಭಿಸುವಂತಾಯಿತು.

ಮಾಸ್ತಿಯವರ ಇತರ ಕೃತಿಗಳೆಂದರೆ ಶೇಷಮ್ಮ,ಸುಬ್ಬಣ್ಣ ಮುಂತಾದ ದೊಡ್ಡ ಕಥೆಗಳು.ಗೌಡರ ಮಲ್ಲಿ, ರಾಮನವಮಿ,ಮೂಕನ ಮಕ್ಕಳು, ಸುನೀತಾ,ಬಿನ್ನಹ, ತಾವರೆ ಮಲಾರ,ಚೆಲುವು,ಸಂಕ್ರಾಂತಿ, ಮಾನವ ಇತ್ಯಾದಿ ಕಾವ್ಯಪ್ರಕಾರದ ಕೃತಿಗಳು. ಇವರ ಮೊದಲ ಸಣ್ಣ ಕಥೆ ರಂಗನ ಮದುವೆ. ಆ ಬಳಿಕ 15 ರಷ್ಟು ಸಣ್ಣ ಕಥೆಗಳ ಸಂಕಲನ ಪ್ರಕಟಿಸಿದರು.

ನಾಟಕಗಳು ಮಾಸ್ತಿಯವರ ಕೃತಿಗಳಲ್ಲಿ ಪ್ರಮುಖವಾದವುಗಳು - ತಾಳಿಕೋಟೆ,ಯಶೋಧರಾ,ಸಾವಿತ್ರಿ, ಶಾಂತಾ,ಉಷಾ,ಕಾಕನಕೋಟೆ, ಮಾಸತಿ, ಅನಾರ್ಕಲಿ,ಶಿವಛತ್ರಪತಿ, ಪುರಂದರ ದಾಸರು, ಶ್ರೀರಾಮ ಪಟ್ಟಾಭಿಷೇಕ, ನವರಾತ್ರಿ, ಬಾನುಲಿ ದೃಶ್ಯಗಳು ನಾಟಕಗಳಾಗಿವೆ. ಸಾಹಿತ್ಯ ಕೃತಿಗಳಲ್ಲಿ ಉಪನ್ಯಾಸಗಳು ಮತ್ತು ವಿಮರ್ಶೆಗಳು ಸೇರಿದ್ದು, ಸಾಹಿತ್ಯ, ಕನ್ನಡ ಸೇವೆ, ಕರ್ನಾಟಕ ಜನತೆಯ ಸಂಸ್ಕೃತಿ, ಕರ್ನಾಟಕ ಜನಪದ, ವಿಮರ್ಶೆ ನಾಲ್ಕು ಭಾಗಗಳಲ್ಲಿ ಪ್ರಕಟವಾಗಿದೆ.

ಮಾಸ್ತಿಯವರು- ಚಿತ್ರಾಂಗದಾ, ಹ್ಯಾಮ್ಲೇಟ್‌, ಚಂಡಮಾರುತ, ಮುಂತಾದ ಅನುವಾದಿತ ಕೃತಿಗಳನ್ನು ರಚಿಸಿರುವರು. ಬಿಜ್ಜಳನ ಚರಿತ್ರೆ,ಕರ್ನಾಟಕ ಭಾರತ ಕಥಾಮಂಜರಿ, ಸರ್. ಎಂ. ವಿಶ್ವೇಶ್ವರಯ್ಯ,ವಿಶ್ವಮಾನವನೆಡೆಗೆ ಮುಂತಾದ ಸಂಪಾದಿತ ಕೃತಿಗಳನ್ನು ರಚಿಸರುವರು. ಇಂಗ್ಲಿಷ್‌ನಲ್ಲಿ ಸುಮಾರು 6 ಕೃತಿಗಳನ್ನು ರಚಿಸಿದ್ದರು.

ಆಡಳಿತಾತ್ಮಕವಾಗಿಯೂ, ಸಾಹಿತ್ಯಕವಾಗಿ ಉತ್ತಮ ಸೇವೆ ನೀಡಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು 1952ರಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿದ್ದರು.1983ರಲ್ಲಿ ಚಿಕ್ಕವೀರ ರಾಜೇಂದ್ರ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪಡೆದರು.1986ರಲ್ಲಿ ವಿಧಿವಶರಾದರು.

Share this Story:

Follow Webdunia kannada