Select Your Language

Notifications

webdunia
webdunia
webdunia
webdunia

ಕ್ರಾಂತಿಕಾರಿ ಬಸವಣ್ಣ

ಕ್ರಾಂತಿಕಾರಿ ಬಸವಣ್ಣ
, ಗುರುವಾರ, 19 ಜುಲೈ 2007 (15:36 IST)
ಹನ್ನೆರಡನೆಯ ಶತಮಾನ ಕನ್ನಡನಾಡಿನಲ್ಲಿ ಬಹುಮುಖ ಕ್ರಾಂತಿಯನ್ನು ಉಂಟುಮಾಡಿದ ಕಾಲ. ಈ ಕಾಲದ ಕ್ರಾಂತಿಯ ಮುಂಚೂಣಿಯಲ್ಲಿದ್ದವರು ಬಸವಣ್ಣನವರು.

ಸಾಮಾಜಿಕ,ಧಾರ್ಮಿಕ ಹಾಗೂ ಸಾಹಿತ್ಯಿಕ ವಲಯದಲ್ಲಿ ಸ್ಥಿತ್ಯಂತರಗಳಿಗೆ ಕಾರಣರಾದವರು. ಶರಣ ಧರ್ಮದ ಪ್ರಸಾರ, ಕಾಯಕ ನಿಷ್ಟೆ,ಮಾನವತಾವಾದದಲ್ಲಿ ದೃಡವಿಶ್ವಾಸದಂತಹ ಮೌಲಿಕ ವಿಚಾರಗಳನ್ನು ವಚನದ ಮೂಲಕ ಹರಡುವಲ್ಲಿ ಬಸವಣ್ಣ ಮಾಡಿದ ಅಂದೋಲನ ಇಂದಿಗೂ ಸಮಾಜ ಚಿಂತಕರಿಗೆ ದಾರಿದೀಪ.

ಬಸವಣ್ಣನವರ ಹುಟ್ಟು ಹಾಗೂ ಬಾಲ್ಯದ ಕುರಿತು ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ.ಬಿಜಾಪೂರ ಜಿಲ್ಲೆಯ ಬಸವನಬಾಗೆವಾಡಿಯಲ್ಲಿ ಮಾದರಸ ಮತ್ತು ಮಾದಲಾಂಬಿಕೆ ಎಂಬುವರ ಮಗನಾಗಿ ಹುಟ್ಟಿದ ಬಸವಣ್ಣ ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾಚರಣೆರಳ ವಿರೋಧಿಯಾಗಿದ್ದರು.

ಶಿವ ಭಕ್ತರ ಕಥೆಗಳು ಆತನ ಮೇಲೆ ವಿಶೇಷ ಪ್ರಭಾವ ಬಿರಿದವು. ಬಸವನ ಬಾಗೆವಾಡಿಯನ್ನು ತ್ಯಜಿಸಿದ ನಂತರ ಕೂಡಲ ಸಂಗಮದಲ್ಲಿ ಶಿವಾರಾಧಾನೆಯಲ್ಲಿ ತೋಡಗಿದರು ಎಂದೂ ಈಶಾನ್ಯ ಗುರುಗಳ ಆಶಿರ್ವಾದ ಪಡೆದು ವೀರಶೈವ ದರ್ಮದ ಕುರಿತು ಅದ್ಯಯನ ಮಾಡಿದರು.

ಬಸವಣ್ಣನವರು ಬಿಜ್ಜಳನ ಮಂತ್ರಿಯಾಗಿದ್ದು ಸಹ ಒಂದು ಅಪೂರ್ವ ಘಟನೆ.ಮಂಗಳವೇಡೆಯಲ್ಲಿ ಸಿದ್ದದಂಡಾದಿಪ ಕರಣಿಕರಾಗಿದ್ದ ಒಂದು ದಿನ ಲೆಕ್ಕದಲ್ಲಿ ಆಗಿದ್ದ ತಪ್ಪನ್ನು ಕುಶಾಗ್ರ ಮತಿಯಾದ ಬಸವಣ್ಣ ತೋರಿಸಿಕೊಟ್ಟ. ಇದರಿಂದಾಗಿ ಅಪಾರ ಹೊನ್ನು ಉಳಿಯಿತು.ಬಿಜ್ಜಳ ಅಧಿಕಾರಕ್ಕೆ ಬಂದ ಮೇಲೆ ಬಸವಣ್ಣ ಭಂಡಾರಿಯಾಗಿ ಅಧಿಕಾಗ ಸ್ವಿಕರಿಸಿದರು.

ಬಸವಣ್ಣನವರಲ್ಲಿ ಇದ್ದ ಸಾಮಾಜಿಕ ಕಳಕಳಿಯು ಧರ್ಮದ ಆಧಾರದ ಮೇಲೆ ಸಮಾಜದಲ್ಲಿನ ಪಿಡುಗುಗಳನ್ನು ಅಳಿಸಿಹಾಕುವುದಕ್ಕೆ ಪ್ರೆರೆಪಿಸಿತು.ಜಾತಿ ಮತಗಳ ಬೇದ ಭಾವನೆಯನ್ನು ತೋಡೆದು ಹಾಕುವುದಕ್ಕೆ ಎಂದು ಕಲ್ಯಾಣದಲ್ಲಿ ಅನುಭವ ಮಂಟಪದ ಸ್ಥಾಪನೆಯನ್ನು ಮಾಡಿದರು.

ಅಲ್ಲಮ ಪ್ರಭು ಸಿದ್ದರಾಮ ಅಕ್ಕ ಮಹಾದೇವಿ ಬಸವಣ್ಣನವರ ಸಮಕಾಲಿನರು. ಕಲ್ಯಾಣದ ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ತು ಎಂದರೂ ತಪ್ಪಾಗಲಾರದು.ಸಮಾಜದ ಎಲ್ಲ ವರ್ಗದ ಜನರು ಒಂದೇಡೆ ಸೇರಿ ಧರ್ಮದಿಂದ ರಾಜಕೀಯದವರೆಗೆ ಮುಕ್ತವಾಗಿ ಚರ್ಚಿಸಲು ವೇದಿಕೆಯಾಗಿ ಮಾರ್ಪಟ್ಟಿತು.

ಮಾನವಿಯತೆ. ಕಾಯಕ ನಿಷ್ಟೆ ದರ್ಮದ ಬುನಾದಿಯಾಗಬೇಕು ಎಂದು ಬಲವಾಗಿ ನಂಬಿದ್ದ ಬಸವಣ್ಣ ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ, ಅಯ್ಯ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಎಂದು ಸಾರುವ ಮೂಲಕ ತಮ್ಮ ಮಾನವಾತಾವಾದಕ್ಕೆ ಸಾಹಿತ್ಯದ ಸ್ಪರ್ಷ ನೀಡಿದರು.

ಕನ್ನಡ ಸಾಹಿತ್ಯಕ್ಕೆ ವಚನಗಳ ಮೂಲಕ ಅಪೂರ್ವ ಕೊಡುಗೆ ಅಪಾರ ಇದುವರೆಗೆ ಸುಮಾರು 1500 ವಚನಗಳನ್ನು ಸಂಗ್ರಹಿಸಿಡಲಾಗಿದೆ.ಬಸವಣ್ಣನವರ ಪ್ರೇರಣೆಯಿಂದ ಹರಿಜನ ಮತ್ತು ಬ್ರಾಹ್ಮಣ ಕುಟುಂಬಗಳ ನಡುವೆ ನಡೆದ ವಿವಾಹ ಕಲ್ಯಾಣದ ಕ್ರಾಂತಿಗೆ ಮುನ್ನುಡಿಯಾಯಿತು.

Share this Story:

Follow Webdunia kannada