ನಿಖಿಲ್ ನಾಮಪತ್ರ ರಿಜೆಕ್ಟ್?: ಶಾಕಿಂಗ್

Webdunia
ಸೋಮವಾರ, 1 ಏಪ್ರಿಲ್ 2019 (15:37 IST)
ಹೈವೋಲ್ಟೇಜ್ ಕಣವಾಗಿರುವ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ತಿರಸ್ಕಾರಕ್ಕೆ ಬಿಜೆಪಿ ಒತ್ತಾಯ ಮಾಡಿದೆ.

ಬಳ್ಳಾರಿಯ ಕಂಪ್ಲಿಯಲ್ಲಿ ಶಾಸಕ ಶ್ರೀರಾಮುಲು ಮಾತನಾಡಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಅಧಿಕಾರ ದುರುಪಯೋಗ ಮಾಡಕೊಂಡಿದ್ದಾರೆ. ಮಂಡ್ಯ ಜಿಲ್ಲಾಧಿಕಾರಿ, ಸಿಎಂ ಮಗನನ್ನ ಬಚಾವ್ ಮಾಡಿದ್ದಾರೆ.
ದಾಖಲಾತಿ ಸರಿ ಇಲ್ಲದಿದ್ರೂ ನಿಖಿಲ್ ನಾಮಪತ್ರ ಸಿಂಧು ಮಾಡಿದ್ದಾರೆ. ಮಂಡ್ಯ ಡಿಸಿ ಮಾನಿಪ್ಲೇಟ್ ಮಾಡಿದ್ದಾರೆ ಎಂದು ದೂರಿದರು.

ನಾಮಪತ್ರ ಸಲ್ಲಿಸುವ ವಿಡಿಯೋ ತೋರ್ಸಿ ಅಂದ್ರೆ ಪೋಟೋಗ್ರಫರ್ ಮದ್ವೆಗೆ ಹೋಗಿದ್ದಾರೆ‌ ಅಂತಾ ಡಿಸಿ ಹಾರಿಕೆ ಉತ್ತರ ಕೊಟ್ಟಿದ್ದಾರೆ.

ಮಂಡ್ಯ ಡಿಸಿ ಅವರನ್ನ ಕೂಡಲೇ ಸಸ್ಪೆಂಡ್ ಮಾಡಬೇಕು. ನಿಖಿಲ್ ನಾಮಪತ್ರ ರಿಜೆಕ್ಟ್ ಮಾಡಲು ಒತ್ತಾಯಿಸಿದರು.  
ಪಕ್ಷೇತರ ಅಭ್ಯರ್ಥಿ ಸುಮಲತಾ ನಾಮಪತ್ರ ಸಲ್ಲಿಸುವಾಗ ಕೇಬಲ್, ಕರೆಂಟ್ ಕಟ್ ಮಾಡಿಸಿದ್ರು. ನಿಖಿಲ್ ನಾಮ ಪತ್ರ ಸಲ್ಲಿಸುವಾಗ ಎಸ್ಪಿ ಮೂಲಕ ಸೂಚನೆ ಕೊಡಿಸಿ, ಜನರೇಟರ್ ವ್ಯವಸ್ಥೆಯನ್ನೂ ಮಾಡಿದ್ರು ಎಂದು ಟೀಕೆ ಮಾಡಿದ್ರು.

ಕಾಂಗ್ರೆಸ್ ರಾಜ್ಯದಲ್ಲಿ ನೆಲಕ್ಕಚ್ಚುತ್ತಿದೆ. ಸಿದ್ದರಾಮಯ್ಯ ಎಲ್ಲೂ ಕಾಣ್ತಾ ಇಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ಫ್ಲೆಕ್ಸ್ ನಲ್ಲಿ ಕಾಣಿಸ್ತಿಲ್ಲ. ಅವರನ್ನ ಯಾರಾದ್ರೂ ಸ್ವಲ್ಪ ಕಾಣಿಸಿ. ಉಗ್ರಪ್ಪ ಬಳ್ಳಾರಿಯಲ್ಲಿ ಏಕಾಂಗಿಯಾಗಿದ್ದಾರೆ. ಬಳ್ಳಾರಿಯ ಹಿರಿಯ ಕಾಂಗ್ರೆಸ್ ನಾಯಕರು ಕಲ್ಬುರ್ಗಿಗೆ ಹೋಗುತ್ತಿದ್ದಾರೆ.ಹೀಗಾಗಿ ಉಗ್ರಪ್ಪ ಒಂಟಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ನಿಂದ ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ವಿಜಯೇಂದ್ರ

ಬೆಳ್ತಂಗಡಿ ಸುಮಂತ್ ಕೇಸ್ ಎಲ್ಲಿಯವರೆಗೆ ಬಂತು, ಆರೋಪಿಗಳು ಸಿಕ್ಕಿಬಿದ್ದರಾ

ಗೂಂಡಾಗಿರಿ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ಗವರ್ನರ್ ವಿರುದ್ಧ ಹೋರಾಟದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ

ಕೇಂದ್ರ ಸರಕಾರದ ವಿರುದ್ಧ ದ್ವೇಷ ರಾಜಕಾರಣ ಮಾಡಲು ಸದನ ಬಳಕೆ: ವಿಜಯೇಂದ್ರ ಆಕ್ಷೇಪ

ಮುಂದಿನ ಸುದ್ದಿ
Show comments