ಲೋಕಸಭೆ ಚುನಾವಣೆಯ ಸೋಲಿನ ಹೊಣೆ ಹೊರುವೆ: ನಿತೀಶ್

Webdunia
ಶನಿವಾರ, 17 ಮೇ 2014 (17:21 IST)
ಲೋಕಸಭೆ ಚುನಾವಣೆಯಲ್ಲಿ ವಿಷಯಾಧಾರಿತ ಪ್ರಚಾರ ಮಾಡುವಲ್ಲಿ ವಿಫಲವಾಗಿದ್ದರಿಂದ ಹೀನಾಯ ಸೋಲನುಭವಿಸಬೇಕಾಯಿತು ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
 
ಚುನಾವಣೆಯ ಸೋಲಿನ ಸಂಪೂರ್ಣ ಹೊಣೆಯನ್ನು ಹೊರಲು ಸಿದ್ದವಾಗಿದ್ದೇನೆ. ಜನತೆಯ ತೀರ್ಪಿಗೆ ತಲೆಬಾಗಬೇಕಾಗುತ್ತದೆ ಹೊಸದಾಗಿ ಜನಾದೇಶ ಪಡೆಯಲು ವಿಧಾನಸಭೆಯನ್ನು ವಿಸರ್ಜಿಸಲಾಗುವುದು. ನನ್ನ ಜೀವನದಲ್ಲಿಯೇ ಇಂತಹ ಚುನಾವಣೆ ನೋಡಿಲ್ಲ ಎಂದರು.
 
ಪರಸ್ಪರ ವೈಯಕ್ತಿಕ ನಿಂದನೆಯಲ್ಲಿ ಜೆಡಿಯು ಪಕ್ಷದ ಮುಖಂಡರು ಕಾಲ ಕಳೆದಿರುವುದು ಸೋಲಿಗೆ ಮತ್ತೊಂದು ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಬಿಜೆಪಿ ನೇತೃತ್ವದ ಮೋದಿ ಸರಕಾರ ಒಳ್ಳೆ ದಿನಗಳು ಬರಲಿವೆ ಎನ್ನುವ ಭರವಸೆಯನ್ನು ದೇಶದ ಜನತೆಗೆ ನೀಡಿದೆ. ಬಿಜೆಪಿ ನೀಡಿದ ಭರವಸೆಯನ್ನು ಈಡೇರಿಸಲಿ ಎಂದು ತಿರುಗೇಟು ನೀಡಿದರು.
 
ವಿಧಾನಸಭೆಯಲ್ಲಿ ನಮಗೆ ಸಂಖ್ಯಾಬಲವಿದೆ. ಆದರೆ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ ಬಿಹಾರ್ ರಾಜ್ಯದಲ್ಲಿ ಕೋಮುವಾಗಳೆಲ್ಲಾ ಒಗ್ಗೂಡಿದರು ಇದರಿಂದಾಗಿ ಪಕ್ಷಕ್ಕೆ ಸೋಲಾಗಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಲಿಸ ಹಿನ್ನೆಲೆಯನ್ನು ಬಿಚ್ಚಿಟ್ಟಿದ್ದಾರೆ. 
  

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಒಂದೇ ವೇದಿಕೆಯಲ್ಲಿ ಶ್ರೀ ನಾರಾಯಣ ಗುರುಗಳ ಉಪದೇಶದ ಬಗ್ಗೆ ಸಿದ್ದು, ಪಿಣರಾಯಿ ಗುಣಗಾನ

ಕುಡಿದ ಅಮಲಿನಲ್ಲಿ ಬೈಕರ್ ಮಿಡ್‌ನೈಟ್ ಡ್ರಾಮಾಗೆ ಪೊಲೀಸರು ಸುಸ್ತು

ಜೀವಂತವಾಗಿರುವಾಗಲೇ 12ಲಕ್ಷ ವೆಚ್ಚದಲ್ಲಿ ತನ್ನ ಸಮಾಧಿ ನಿರ್ಮಿಸಿದ ವಿಚಿತ್ರ ವ್ಯಕ್ತಿ

ಇಂಧೋರ್‌: ಕಲುಷಿತ ನೀರು ಸೇವಿಸಿ 7 ಜನ ಸಾವು, ಹಲವು ಮಂದಿ ಅಸ್ವಸ್ಥ

ಬಯೋಕಾನ್ ಉದ್ಯೋಗಿ ಅನಂತಕುಮಾರ್ ಸಾವು ಪ್ರಕರಣ, ಕಿರಣ್ ಮಜುಂಧಾರ್‌ ಶಾ ಪ್ರತಿಕ್ರಿಯೆ

Show comments