Select Your Language

Notifications

webdunia
webdunia
webdunia
webdunia

2014 ಚುನಾವಣಾ ಸಮರ: ಪ್ರಥಮ ಹಂತದ ಮತದಾನ ಆರಂಭ

2014 ಚುನಾವಣಾ ಸಮರ: ಪ್ರಥಮ ಹಂತದ ಮತದಾನ ಆರಂಭ
ದಿಸ್‌ಪುರ್ , ಸೋಮವಾರ, 7 ಏಪ್ರಿಲ್ 2014 (12:29 IST)
ಲೋಕಸಭಾ ಚುನಾವಣೆಯ ಪ್ರಥಮ ಹಂತದ ಮತದಾನ ಇಂದು ಪ್ರಾರಂಭವಾಗಿದ್ದು, ಆಸ್ಸಾಂನ 5 ಮತ್ತು ತ್ರಿಪುರಾದ 1 ಕ್ಷೇತ್ರದಲ್ಲಿ ಇಂದು ಬೆಳಿಗ್ಗಿನಿಂದ ಮತದಾನ ಚುರುಕುಗೊಂಡಿದೆ. ಈ ಸಲ ದೇಶದಲ್ಲಿ 9 ಹಂತದ ಚುನಾವಣೆ ನಡೆಯುತ್ತಿದ್ದು, ಎಪ್ರೀಲ್ (ಇಂದು) 7 ರಿಂದ ಮೇ 12ರವರೆಗೆ ನಡೆಯಲಿದೆ.
PTI

543 ಲೋಕಸಭಾ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣಾ ಮಹಾಸಮರದ ಫಲಿತಾಂಶ ಮೇ 16 ರಂದು ಹೊರಬೀಳಲಿದೆ.

ಮತದಾನಕ್ಕಾಗಿ 9000 ಮತಗಟ್ಟೆಗಳನ್ನು ಬಳಸಲಾಗುತ್ತಿದ್ದು, 250ಕ್ಕಿಂತ ಹೆಚ್ಚು ಭದ್ರತಾ ಕಂಪನಿಗಳನ್ನು ನಿಯೋಜಿಸಲಾಗಿದೆ.

ಪ್ರಥಮ ಹಂತದಲ್ಲಿ 6 ಸ್ಥಾನಕ್ಕಾಗಿ ತ್ರಿಪುರಾ ಮತ್ತು ಆಸ್ಸಾಂನಲ್ಲಿ ಮತದಾನ ಪ್ರಾರಂಭವಾಗಿದೆ.
ಅಸ್ಸಾಂನಲ್ಲಿ 14 ಕ್ಷೇತ್ರಗಳಿದ್ದು ತೇಜ್ಪುರ್, ಕಾಲಿಯಾಬೋರ್, ಜೋರ್ಹತ್, ದಿಬ್ರುಗಢ್ ಮತ್ತು ಲಖಿಮಪುರ್‌ಗಳಲ್ಲಿ ಇಂದು ಮತ ಚಲಾಯಿಸಲಾಗುತ್ತಿದೆ. ಇವುಗಳಲ್ಲಿ ದಿಬ್ರುಗಢ್ ನ್ನು ಪರಿಶಿಷ್ಟ ಜಾತಿಯವರಿಗಾಗಿ ಕಾಯ್ದಿರಿಸಲಾಗಿದೆ. ಅಸ್ಸಾಂನಲ್ಲಿ ವಂಶಾಡಳಿತದ ಪ್ರಾಬಲ್ಯವಿದೆ ಎಂದು ಹೇಳಲಾಗುತ್ತಿದೆ.

ಕಾಲಿಯಾಬೋರನಿಂದ ಆಸ್ಸಾಂ ಮುಖ್ಯಮಂತ್ರಿ ತರುಣ ಗೋಗೋಯಿ ಪುತ್ರ ಆಖಾಡಕ್ಕಿಳಿದಿದ್ದಾರೆ. ಇದಕ್ಕೂ ಮೊದಲು ಅವರ ಚಿಕ್ಕಪ್ಪ ದೀಪ್ ಗೋಗೋಯಿ ಈ ಕ್ಷೇತ್ರದ ಸಂಸದರಾಗಿದ್ದರು. ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತ ಓದಿರುವ ಗೌರವ್ ತನ್ನ ತಂದೆಯ ಪರಂಪರೆಯನ್ನು ಮುಂದುವರೆಸುವ ಅಭಿಲಾಷೆ ಹೊತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ತ್ರಿಪುರಾದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada