Select Your Language

Notifications

webdunia
webdunia
webdunia
webdunia

2014ರ ಲೋಕಸಭೆ ಚುನಾವಣೆಯಲ್ಲಿ ಮೋದಿಗೆ ಸರಿಸಾಟಿ ಯಾರೂ ಇಲ್ಲ: ಅರುಣ್ ಜೇಟ್ಲಿ

2014ರ ಲೋಕಸಭೆ ಚುನಾವಣೆಯಲ್ಲಿ ಮೋದಿಗೆ ಸರಿಸಾಟಿ ಯಾರೂ ಇಲ್ಲ: ಅರುಣ್ ಜೇಟ್ಲಿ
ದೆಹಲಿ , ಮಂಗಳವಾರ, 1 ಏಪ್ರಿಲ್ 2014 (18:55 IST)
"ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಸರಿಸಾಟಿಯಾಗುವಂತಹ ನಾಯಕರಿಲ್ಲ. ಈ ಚುನಾವಣೆ ಕುದುರೆ ರೇಸ್‌ನಲ್ಲಿನ ಒಂದೇ ಕುದುರೆಯ ಓಟದಂತಿದೆ" ಎಂದು ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ ಲೇವಡಿ ಮಾಡಿದ್ದಾರೆ.
PTI

ಪೂರ್ವ ದೆಹಲಿ ಕ್ಷೇತ್ರದ ಅಭ್ಯರ್ಥಿ, ಮಹೇಶ್ ಗಿರಿ ಪರ ಪ್ರಚಾರ ಅಭಿಯಾನದಲ್ಲಿ ಮಾತನಾಡುತ್ತಿದ್ದ ಜೇಟ್ಲಿ " ಹೆಚ್ಚು ಕುದುರೆಗಳು ಇದ್ದಾಗ, ಜಾಕಿ ನಂ 2ನ್ನು ನೋಡಲು ತಿರುಗುತ್ತದೆ. ಆದರೆ ಇಲ್ಲಿ ಮೋದಿ, ನಂ 2 ಯಾರೆಂದು ತಿಳಿಯಲು ಸುತ್ತಲು ತಿರುಗಿ ನೋಡಿದಾಗ ಯಾರೂ ಕಾಣಿಸುವುದು ಇಲ್ಲ" ಎಂದು ಹೇಳಿದರು.

" ಪ್ರಥಮ ಬಾರಿ ಇದು ಒಂದೇ ಕುದುರೆಯ ಓಟ ಎನಿಸುತ್ತಿದೆ. ನಮ್ಮ ಮತದಾರರು ತುಂಬ ಬುದ್ಧಿವಂತರು. ಆದ್ದರಿಂದ, ಕೇವಲ ಬಹುಮತ ನೀಡುವುದಕ್ಕಿಂತ ಸ್ಪಷ್ಪ ಬಹುಮತ ನೀಡಿದರೆ ಐದು ವರ್ಷಗಳ ತನಕ ಸರ್ಕಾರ ಪಾರದರ್ಶಕತೆಯುಳ್ಳ ಅಧಿಕಾರ ನಡೆಸಲು ಸಾಧ್ಯ. ಸ್ಥಿರ ಸರ್ಕಾರ ದೇಶದ ಆರ್ಥಿಕತೆಯನ್ನು ಸುಧಾರಿಸುತ್ತದೆ " ಎಂದು ಅವರು ಹೇಳಿದರು.

"ಕೆಟ್ಟ ಆಡಳಿತಕ್ಕಾಗಿ ಜನರು ಆಡಳಿತಾರೂಢ ಕಾಂಗ್ರೆಸ್ಸಿಗೆ ಶಿಕ್ಷೆ ನೀಡಲಿದ್ದಾರೆ".

"ಪ್ರಧಾನಿ ಒಬ್ಬ ಅರ್ಥಶಾಸ್ತ್ರಜ್ಞ, ಆದರೆ ಹಣದುಬ್ಬರವನ್ನು ನಿಯಂತ್ರಿಸಲು ವಿಫಲವಾಗಿದ್ದಾರೆ. ಪೆಟ್ರೋಲ್, ಡೀಸೆಲ್ ಮತ್ತು ಆಹಾರ ಸಾಮಗ್ರಿಗಳ ಬೆಲೆ ಹೆಚ್ಚಿತು. ಉದ್ಯೋಗಾವಕಾಶಗಳು ಕಡಿಮೆಯಾದವು. ಜಿಡಿಪಿ ಶೇ 4.5 ಕ್ಕೆ ನಿಂತಿತು.ಹೂಡಿಕೆದಾರರು ದೇಶದಲ್ಲಿ ಹೂಡಿಕೆ ಮಾಡುವುದನ್ನು ನಿಲ್ಲಿಸಿದರು.ದೇಶದ ಆರ್ಥಿಕತೆ ಸ್ಥಗಿತಗೊಂಡಿತು " ಎಂದು ಜೇಟ್ಲಿ ಆಡಳಿತಾರೂಢ ಪಕ್ಷದ ವಿಫಲತೆಯನ್ನು ಎತ್ತಿ ತೋರಿಸಿದರು.

Share this Story:

Follow Webdunia kannada